ನವದೆಹಲಿ:ಕೇಂದ್ರ ಗೃಹ ಸಚಿವ ಅಮಿತ್ ಷಾ ಶುಕ್ರವಾರ 2023ರ ಹೊಸ ದಂಡಸಂಹಿತೆಯ ಮಸೂದೆಯನ್ನು ಲೋಕಸಭೆಯಲ್ಲಿ ಪರಿಚಯಿಸಿದರು.
ಹೊಸ ಮಸೂದೆಯು ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಅಪರಾಧಗಳು, ಕೊಲೆಗಳು ಮತ್ತು ದೇಶವಿರೋಧಿ ಅಪರಾಧಗಳ ಕಾನೂನುಗಳಿಗೆ ಆದ್ಯತೆ ನೀಡುತ್ತದೆ.
ಮೊದಲ ಬಾರಿಗೆ, ಸಮುದಾಯ ಸೇವೆಯು ಸಣ್ಣ ಅಪರಾಧಗಳ ಶಿಕ್ಷೆ ರೂಪದಲ್ಲಿ ಸೇರಿಸಲಾಗಿದೆ. ಬಂಧನದಿಂದ ತಪ್ಪಿಸಿಕೊಂಡವರನ್ನು ಅವರ ಅನುಪಸ್ಥಿತಿಯಲ್ಲಿ ವಿಚಾರಣೆಗೆ ಒಳಪಡಿಸಬಹುದು ಎಂದು ಪ್ರಸ್ತಾವಿತ ಕಾನೂನು ಹೇಳುತ್ತದೆ.
ಇದನ್ನೂ ಓದಿ:ಇನ್ನು ಮುಂದೆ ಶಿಕ್ಷೆ ನೀಡುವಾಗ ಸ್ತ್ರೀ ಪುರುಷರ ನಡುವೆ ಭೇದವಿರುವುದಿಲ್ಲ; ಬ್ರಿಟೀಷರ ಕಾಲದ ದಂಡಸಂಹಿತೆಯಲ್ಲಿ ಬದಲಾವಣೆ
ಹೊಸ ಮಸೂದೆಯನ್ನು ಪರಿಶೀಲನೆಗಾಗಿ ಸ್ಥಾಯಿ ಸಮಿತಿ ಬಳಿ ಕಳಿಸಲಾಗಿದ್ದು ಪ್ರಸ್ತಾವಿತ ಮಸೂದೆಯಲ್ಲಿ ಸೆಕ್ಷನ್ 195ರ ಅಡಿಯಲ್ಲಿ ಒಂದು ನಿಬಂಧನೆಯನ್ನು ಒಳಗೊಂಡಿದೆ. ಅದು ‘ನಕಲಿ ಸುದ್ದಿ ಅಥವಾ ದಾರಿತಪ್ಪಿಸುವ ಮಾಹಿತಿಯನ್ನು’ ಹರಡುವವರಿಗೆ ಸಂಬಂಧಿಸುತ್ತದೆ’ ಭಾರತದ ಸಾರ್ವಭೌಮತ್ವ ಮತ್ತು ಸುರಕ್ಷತೆಗೆ ಧಕ್ಕೆ ತರುವ ಸುದ್ದಿಗಳನ್ನು ಹರಡಿದಲ್ಲಿ ಮೂರು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಲಿದ್ದೀರಿ.
ವಿಭಾಗ 195 (1) D ಪ್ರಕಾರ “…ಭಾರತದ ಸಾರ್ವಭೌಮತ್ವ ಏಕತೆ ಮತ್ತು ಸಮಗ್ರತೆ ಅಥವಾ ಸುರಕ್ಷತೆಗೆ ಧಕ್ಕೆ ತರುವ ಸುಳ್ಳು ಅಥವಾ ದಾರಿತಪ್ಪಿಸುವ ಮಾಹಿತಿಯನ್ನು ತಯಾರಿಸುವದು ಅಥವಾ ಪ್ರಕಟಿಸುವುದಕ್ಕೆ, ಜೈಲು ಶಿಕ್ಷೆಗೆ ಒಳಪಡಿಸಲಾಗುತ್ತದೆ. ಅದು ಮೂರು ವರ್ಷಗಳವರೆಗೆ ಜೈಲುಶಿಕ್ಷೆ ಅಥವಾ ದಂಡ ಅಥವಾ ಎರಡೂ ಶಿಕ್ಷೆಗಳನ್ನು ವಿಧಿಸುವ ಸಾಧ್ಯತೆ ಇರಬಹುದು”
ಇದನ್ನೂ ಓದಿ:VIDEO| ರಾಹುಲ್​ ಗಾಂಧಿ ವಿರುದ್ಧ ಆಕ್ಷೇಪಾರ್ಹ ಟ್ವೀಟ್​ ಪ್ರಕರಣ; ಅಮಿತ್​ ಮಾಳವೀಯಾ ಪರ ಹೈಕೋರ್ಟಿನಲ್ಲಿ ವಾದ ಮಂಡಿಸಿದ ತೇಜಸ್ವಿ ಸೂರ್ಯ
ಗೃಹ ಸಚಿವ ಅಮಿತ್ ಷಾ ಶುಕ್ರವಾರ ಲೋಕಸಭೆಯಲ್ಲಿ ಮೂರು ಮಸೂದೆಗಳನ್ನು ಪರಿಚಯಿಸಿದರು, ಇದು ನ್ಯಾಯವನ್ನು ನೀಡುವ ಮತ್ತು ಸಂವಿಧಾನದ ಪ್ರಕಾರ ಭಾರತೀಯ ನಾಗರಿಕರಿಗೆ ನೀಡಿದ ಹಕ್ಕುಗಳನ್ನು ರಕ್ಷಿಸುವ ಗುರಿಯನ್ನು ಹೊಂದಿದೆ.
ಇದನ್ನೂ ಓದಿ:ಶಿಜಾನ್‌ ಖಾನ್​ ಪರಿಚಯದ ನಂತರ ಹಿಜಾಬ್ ಧರಿಸಲು ಆರಂಭಿಸಿದ್ದ ನಟಿ ತುನಿಷಾ ಶರ್ಮಾ!
1860ರ ಭಾರತೀಯ ದಂಡ ಸಂಹಿತೆಯನ್ನು ಭಾರತೀಯ ನ್ಯಾಯ ಸಂಹಿತೆಯಿಂದ ಬದಲಾಯಿಸುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಮೂರು ಮಸೂದೆಗಳನ್ನು ಮಂಡಿಸಿದರು. ಇನ್ನು ಮುಂದೆ ಇಂಡಿಯನ್ ಪೀನಲ್‍ ಕೋಡ್‍ಅನ್ನು ತೆಗೆದು ಹಾಕಿ ಅದರ ಬದಲಿಗೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯು ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯನ್ನು ಅಸ್ತಿತ್ವಕ್ಕೆ ತರುವ ಬಗ್ಗೆ ಈ ಕಾಯ್ದೆಇರುತ್ತದೆ. ಈ ಹೊಸ ಕಾಯ್ದೆಯ ಅಡಿಯಲ್ಲಿ ಬ್ರಿಟೀಷರ ಕಾಲದ ಅನೇಕ ಕಾನೂನುಗಳನ್ನು ಬದಲಾವಣೆ ಮಾಡಲಾಗುತ್ತದೆ. ಅದಲ್ಲದೇ ಇಂಡಿಯನ್ ಎವಿಡೆನ್ಸ್ ಆ್ಯಕ್ಟ್ಅನ್ನು ಬದಲಾಯೊಸಿ ‘ಭಾರತೀಯ ಸಾಕ್ಷ್ಯ’ವನ್ನು ಸ್ಥಾಪಿಸಲಾಗುತ್ತದೆ. ಈ ಮೂರೂ ಮಸೂದೆಗಳನ್ನು ಪರಿಶೀಲನೆಗಾಗಿ ಸ್ಥಾಯಿ ಸಮಿತಿಗೆ ಕಳಿಸಲಾಗಿದೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × two =
Remember me
