ಚಂಡಿಗಢ್​:ಪಂಜಾಬ್​ನಲ್ಲಿ ಕೋಲಾಹಲ ಉಂಟು ಮಾಡಿರುವ ವಿಷಪೂರಿತ ಮದ್ಯ ಅಥವಾ ಕಳ್ಳಭಟ್ಟಿ ದುರಂತಕ್ಕೆ ಬಲಿಯಾದವರ ಸಂಖ್ಯೆ 86ಕ್ಕೆ ಏರಿಕೆಯಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಜಿಲ್ಲೆಗಳಲ್ಲಿ 100ಕ್ಕೂ ಅಧಿಕ ಕಡೆಗಳಲ್ಲಿ ದಾಳಿ ನಡೆಸಲಾಗಿದೆ. 25ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಇನ್ನೊಂದೆಡೆ, ಕರ್ತವ್ಯಲೋಪ ಆಧಾರದಲ್ಲಿ ಅಬಕಾರಿ ಇಲಾಖೆಯ ಏಳು ಹಾಗೂ ಪೊಲೀಸ್​ ಇಲಾಖೆಯ 6 ಜನರನ್ನು ಅಮಾನತುಗೊಳಿಸಿ ಸಿಎಂ ಅಮರಿಂದರ್​ ಸಿಂಗ್​ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ;ಸುಶಾಂತ್​ ಸಿಂಗ್​ ಸಾವಿನಲ್ಲಿ ರಿಯಾ ಚಕ್ರವರ್ತಿಯೇ ಸುಪಾರಿ ಕಿಲ್ಲರ್​; ಸಿಡಿದೆದ್ದ ಬಿಹಾರ ಸಚಿವ
ಪಂಜಾಬ್​ನ ಮೂರು ಜಿಲ್ಲೆಗಳಾದ ಅಮೃತಸರ ಗ್ರಾಮೀಣ, ಗುರುದಾಸ್​ಪುರ ಹಾಗೂ ತರಣ್​ ತರಣ್​ ಮತ್ತು ರಾಜಪುರ್​ ಹಾಗೂ ಶಂಬು ಗಡಿ ಪ್ರದೇಶದಲ್ಲಿ ವಿಷಪೂರಿತ ಮದ್ಯ ಅಥವಾ ಕಳ್ಳಭಟ್ಟಿ ಸೇವಿಸಿ ಕಳೆದ ಕೆಲ ದಿನಗಳಿಂದ ಹಲವು ಸಾವಿಗೀಡಾಗುತ್ತಿದ್ದಾರೆ. ಶನಿವಾರದವರೆಗೆ ಮೃತರ ಸಂಖ್ಯೆ 86ಕ್ಕೆ ಏರಿದೆ.
ಮೃತರ ಕುಟುಂಬಗಳಿಗೆ 2 ಲಕ್ಷ ರೂ. ಪರಿಹಾರ ಧನ ಘೋಷಿಸಲಾಗಿದೆ. ತರಣ್​ ತರಣ್ ಜಿಲ್ಲೆಯಲ್ಲಿ 63 ಜನರು ಮೃತಪಟ್ಟಿದ್ದಾರೆ. ಅಮೃತಸರ ಗ್ರಾಮೀಣ ಜಿಲ್ಲೆಯಲ್ಲಿ 12, ಗುರುದಾಸ್​ಪುರ್​ನ ಬಟಾಲಾದಲ್ಲಿ 11 ಜನರು ಕಳ್ಳಭಟ್ಟಿಗೆ ಬಲಿಯಾಗಿದ್ದಾರೆ.ಕಳ್ಳಭಟ್ಟಿ ದುರಂತಕ್ಕೆ ಮಹಿಳೆಯೊಬ್ಬಳು ಕಿಂಗ್​ಪಿನ್​ ಆಗಿದ್ದಾಳೆ. ಸಾರಿಗೆ ಉದ್ಯಮಿ, ಡಾಬಾಗಳ ಮಾಲೀಕರು ಬಂಧಿತರಲ್ಲಿ ಸೇರಿದ್ದಾರೆ.
ಜಗತ್ತಿನ ಮೊದಲ ಕರೊನಾ ಲಸಿಕೆ ರಷ್ಯಾದಲ್ಲಿ ಸಿದ್ಧ; ಅಕ್ಟೋಬರ್​ನಲ್ಲಿ ಎಲ್ಲರಿಗೂ ಲಭ್ಯ; ಸ್ಪುಟ್ನಿಕ್​ ಯಶಸ್ಸಿಗೆ ಹೋಲಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + 17 =
Remember me
