ಅಮರಾವತಿ:ಮುಖ್ಯಮಂತ್ರಿಯನ್ನು ಉಪಮುಖ್ಯಮಂತ್ರಿ ಹೀಗೆಲ್ಲ ಹೊಗಳಬಹುದಾ? ಟಿಕ್​ಟಾಕ್​ ವಿಡಿಯೋ ಮಾಡಿ…!
ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಪಿ.ಪುಷ್ಮಾ ಶ್ರೀವಾಣಿ ವಿಭಿನ್ನವಾಗಿ ತಮ್ಮ ರಾಜ್ಯದ ಮುಖ್ಯಮಂತ್ರಿ ವೈ.ಎಸ್​. ಜಗನ್​ ಮೋಹನ್​ ಅವರನ್ನು ಹೊಗಳಿದ್ದಾರೆ.
ಪುಷ್ಪಾ ಶ್ರೀವಾಣಿಯವರು ತೆಲುಗಿನ ‘ರಾಯಲ್​ಸೀಮಾ ಮುದ್ದುಬಿಡ್ಡಾ ಮನಾ ಜಗನ್​ ಅನ್ನಾ’ ಹಾಡಿಗೆ ಟಿಕ್​ಟಾಕ್​ ಸೆಲ್ಫೀ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್​ ಮಾಡಿದ್ದಾರೆ. ವಿಡಿಯೋ ಈಗ ಸಿಕ್ಕಾಪಟೆ ವೈರಲ್​ ಆಗುತ್ತಿದೆ.
ಕಳೆದ ಮೇ ನಲ್ಲಿ ವೈಎಸ್​ಆರ್​ ಕಾಂಗ್ರೆಸ್​ ಪಾರ್ಟಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಜಗನ್​ ರೆಡ್ಡಿಯವರು ಮುಖ್ಯಮಂತ್ರಿ ಪಟ್ಟಕ್ಕೇರಿದ್ದಾರೆ. ಆಗ ತಮ್ಮ ಗೆಲುವಿನ ಸಂಭ್ರಮಕ್ಕಾಗಿ ವೈಎಸ್​ಆರ್ ಪಕ್ಷ ಈ ಹಾಡನ್ನು ರಚಿಸಿತ್ತು. ಜಗನ್​ ಅವರನ್ನು ರಾಯಲ್​ಸೀಮಾದ ಪುತ್ರ ಎಂದೇ ಈಗಲೂ ಕರೆಯಲಾಗುತ್ತಿದೆ.
ರಾಯಲ್​ಸೀಮಾದ ಸರ್ವಾಂಗೀಣ ಅಭಿವೃದ್ಧಿ ಮಾಡಿದ್ದಕ್ಕೆ ಮುಖ್ಯಮಂತ್ರಿ ಜಗನ್​ ರೆಡ್ಡಿಯವರನ್ನು ಉಪಮುಖ್ಯಮಂತ್ರಿ ಶ್ರೀವಾಣಿ ಇದೇ ಹಾಡನ್ನು ಬಳಸಿ ಟಿಕ್​ಟಾಕ್​ ವಿಡಿಯೋ ಮೂಲಕ ಹೊಗಳಿದ್ದು ಸ್ವಲ್ಪ ವಿಚಿತ್ರವಾದರೂ ಮೆಚ್ಚುಗೆ ವ್ಯಕ್ತವಾಗಿದೆ. ಶ್ರೀವಾಣಿ ಬುಡಕಟ್ಟು ಕಲ್ಯಾಣ ಇಲಾಖೆ ಸಚಿವರೂ ಹೌದು.
ಆಂಧ್ರಕ್ಕೆ ಮೂರು ರಾಜಾಧಾನಿ ಸ್ಥಾಪಿಸಲು ಜಗನ್​ ರೆಡ್ಡಿ ಸರ್ಕಾರ ಮುಂದಾಗಿದೆ. ಇದು ಈಗಿನ ರಾಜಧಾನಿ ಅಮರಾವತಿ ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಜಗನ್​ ಅವರು ಆಂಧ್ರ ಉತ್ತರ ಕರಾವಳಿಯಲ್ಲಿರುವ ವಿಶಾಖಪಟ್ಟಣಂನ್ನು ಆಡಳಿತಾತ್ಮಕ ರಾಜಧಾನಿ ಹಾಗೂ ರಾಯಲ್​ ಸೀಮಾದ ಕರ್ನೂಲ್​ನ್ನು ನ್ಯಾಯಾಂಗ ರಾಜಧಾನಿಯನ್ನಾಗಿ ರಚಿಸಲು ನಿರ್ಧರಿಸಿದ್ದಾರೆ. (ಏಜೆನ್ಸೀಸ್​)

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 4 =
Remember me
