ಕೊಲಂಬೋ:ಶ್ರೀಲಂಕಾದ ಚರ್ಚ್​ ಹಾಗೂ ಹೋಟೆಲ್​ಗಳ ಮೇಲೆ ದಾಳಿ ನಡೆಸಿದ ಸ್ಥಳೀಯ ಉಗ್ರ ಸಂಘಟನೆಯ ಆತ್ಮಹತ್ಯಾ ಬಾಂಬರ್​ನ ಪತ್ನಿ ಭಾರತದಲ್ಲಿ ಅಡಗಿದ್ದಾಳೆ ಎಂದು ಶಂಕಿಸಲಾಗಿದೆ.
ಕಳೆದ ವರ್ಷದ ಏಪ್ರಿಲ್​ 29ರಂದು 9 ಆತ್ಮಹತ್ಯಾ ಬಾಂಬರ್​ಗಳು ಮೂರು ಚರ್ಚ್​ ಹಾಗೂ ಕೊಲಂಬೋದ ಮೂರು ಲಕ್ಸುರಿ ಹೋಟೆಲ್​ಗಳ ಮೆಲೆ ದಾಳಿ ನಡೆಸಿದ್ದರು. ಇದರಲ್ಲಿ 11 ಭಾರತೀಯರು ಸೇರಿ 260ಕ್ಕೂ ಅಧಿಕ ಜನರು ಹತ್ಯೆಗೀಡಾಗಿದ್ದರು. ಐಸಿಸ್​ನ ಅಂಗಸಂಸ್ಥೆಯಾದ ಸ್ಥಳೀಯ ಉಗ್ರ ಸಂಘಟನೆ ನ್ಯಾಷನಲ್​ ತವಾಹೀದ್​ ಜಮಾತ್​ನ ಸದಸ್ಯರಾಗಿದ್ದರು. ಇದರಲ್ಲಿ ಒಬ್ಬನ ಪತ್ನಿ ಭಾರತದಲ್ಲಿ ತಲೆಮರೆಸಿಕೊಂಡಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ;ಚಿನ್ನ ಕಳ್ಳಸಾಗಣೆಯಿಂದ ಗಳಿಸಿದ್ದನ್ನೆಲ್ಲ ಬಚ್ಚಿಟ್ಟಿದ್ದೆಲ್ಲಿ ಸ್ವಪ್ನಾ ಸುರೇಶ್​?
ಪಶ್ಚಿಮ ಕರಾವಳಿಯ ನಗರವಾದ ನೆಗೆಂಬೋದಲ್ಲಿನ ಸೇಂಟ್​ ಸೆಬಾಸ್ಟೀನ್​ ಚರ್ಚ್​ನಲ್ಲಿ ಸ್ಫೋಟಿಸಿಕೊಂಡ ಆತ್ಮಹತ್ಯಾ ಬಾಂಬ್​ ದಾಳಿಕೋರ ಅಚ್ಚಿ ಮೊಹಮ್ಮದನ್​ ಪತ್ನಿ ಪುಲಸ್ತೀನಿ ರಾಜೇಂದ್ರನ್​ ಅಲಿಯಾಸ್​ ಸಾರಾ ಸೆಪ್ಟಂಬರ್​ನಲ್ಲಿಯೇ ಸಮುದ್ರ ಮಾರ್ಗದ ಮೂಲಕ ಭಾರತಕ್ಕೆ ತೆರಳಿದ್ದಾಳೆ ಎಂದು ಹೇಳಲಾಗಿದೆ.
ಸಾರಾಳ ಪರಾರಿಗೆ ಸಹಕರಿಸಿದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಮುಖ್ಯ ತನಿಖಾಧಿಕಾರಿ ಅರ್ಜುನ್​ ಮಹೀನ್​ಕಂದಾ ತಿಳಿಸಿದ್ದಾರೆ. ಸರಣಿ ಬಾಂಬ್​ ದಾಳಿಗೆ ಸಂಬಂಧಿಸಿದಂತೆ ಶ್ರೀಲಂಕಾ ಪೊಲೀಸರು 200ಕ್ಕೂ ಅಧಿಕ ಜನರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ;ಮಕ್ಕಳು ಬೇಡ, ಪೊಲೀಸರೇ ಅಂತ್ಯಕ್ರಿಯೆ ನೆರವೇರಿಸಲಿ; ಡೆತ್​ನೋಟ್​ ಬರೆದಿಟ್ಟು ಪಯಣ ಮುಗಿಸಿದ ದಂಪತಿ
ಉಗ್ರ ಸಂಘಟನೆಯ ಅಡಗುತಾಣದಲ್ಲಿದ್ದ ಸಾರಾ ದಾಳಿ ಬಳಿಕ ಅಲ್ಲಿಂದ ಪಾರಾಗಿ ಪೂರ್ವ ಕರಾವಳಿಯ ಬಟ್ಟಿಕೊಲಾವಾ ನಗರದ ಮಾನ್​ಕಾಡು ಪ್ರದೇಶದಲ್ಲಿದ್ದಳು ಎಂಬ ಮಾಹಿತಿ ದೊರೆತಿತ್ತು.
ಸಾರಾಳ ಸಹೋದರ ಹಾಗೂ ಆಕೆಯ ಸಂಬಂಧಿಯೊಬ್ಬರ ಸಹಾಯದಿಂದ ಮನ್ನಾರ್ ಪ್ರದೇಶದಿಂದ ದೋಣಿಯಲ್ಲಿ ಭಾರತಕ್ಕೆ ತೆರಳಿದ್ದಾಳೆ ಎಂಬುದು ಗೊತ್ತಾಗಿದೆ ಎಂದು ತನಿಖಾಧಿಕಾರಿ ಹೇಳಿದ್ದಾರೆ.
ಧರ್ಮ ಮುಚ್ಚಿಟ್ಟು ಪ್ರೀತಿ ನಾಟಕ; ಲವ್​ ಜಿಹಾದ್​ಗೆ ಮಹಿಳೆ- ಮಗಳು ಬಲಿ; ಇಬ್ಬರನ್ನೂ ಕೊಂದು ಮನೆಯಲ್ಲಿ ಹೂತು ಹಾಕಿದ ಪಾಪಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + 4 =
Remember me
