ಚೆನ್ನೈ: ನಕಲಿ ಗುರುತಿನಡಿ ಕಳೆದ ಎರಡು ವರ್ಷಗಳಿಂದ ಭಾರತದಲ್ಲಿ ತಲೆಮರೆಸಿಕೊಂಡಿದ್ದ ಶ್ರೀಲಂಕಾದ ಡಾನ್ ಅಂಗೋಡಾ ಲೊಕ್ಕಾ ನಿಗೂಢವಾಗಿ ಸಾವನ್ನಪ್ಪಿದ್ದಾನೆ ಎಂದು ತಮಿಳುನಾಡು ಪೊಲೀಸರು ಖಚಿತಪಡಿಸಿದ್ದಾರೆ. ಜುಲೈ ಆರಂಭದಲ್ಲಿ ನಡೆದ ಈ ದರೋಡೆಕೋರನ ಸಾವಿನ ಕುರಿತು ಅಪರಾಧ ತನಿಖಾ ಇಲಾಖೆಯ ಅಪರಾಧ ವಿಭಾಗ (ಸಿಬಿಸಿಐಡಿ) ತನಿಖೆ ನಡೆಸಲಿದೆ.ತಮಿಳುನಾಡು ಪೊಲೀಸ್ ಮಹಾನಿರ್ದೇಶಕ ಜೆ.ಕೆ. ತ್ರಿಪಾಠಿ ಪ್ರಕರಣವನ್ನು ಕೊಯಮತ್ತೂರು ಪೊಲೀಸರಿಂದ ಸಿಬಿಸಿಐಡಿಗೆ ವರ್ಗಾಯಿಸಿದ್ದಾರೆ.
ಇದನ್ನೂ ಓದಿ:ಭಾರತದ ಟೆಕಿಗಳಿಗೆ ಬಿಗ್‌ ಶಾಕ್‌: ಅಮೆರಿಕದ ಅಧ್ಯಕ್ಷರಿಂದ ಮಹತ್ವದ ಆದೇಶಕ್ಕೆ ಸಹಿ
ಇಬ್ಬರು ಪುರುಷರು ಮತ್ತು ಮಹಿಳೆಯನ್ನು ಬಂಧಿಸಲಾಗಿದೆ. ಸಿಬಿಸಿಐಡಿ ಅಧಿಕಾರಿಯೊಬ್ಬರ ಪ್ರಕಾರ, ಮೊದಲೆರಡು ಎಫ್‌ಐಆರ್ ಗಳನ್ನು ಈಗಾಗಲೇ ನೋಂದಾಯಿಸಲಾಗಿದೆ. (ಒಂದು – ಅನುಮಾನಾಸ್ಪದ ಸಾವು ಮತ್ತು ಇನ್ನೊಂದು ಆಧಾರ್ ಕಾರ್ಡ್ ಪಡೆಯಲು ಸುಳ್ಳು ದಾಖಲೆಗಳನ್ನು ಸಲ್ಲಿಸಿದ್ದಕ್ಕೆ).ಲೋಕ್ಕಾ 2017 ರಲ್ಲಿ ತಮಿಳುನಾಡಿಗೆ ಬಂದು 2018 ರಿಂದ ಪ್ರದೀಪ್ ಸಿಂಗ್ ಹೆಸರಿನಲ್ಲಿ ಕೊಯಮತ್ತೂರಿನಲ್ಲಿ ವಾಸಿಸುತ್ತಿದ್ದು, ಅಲ್ಲಿನ ಜಿಮ್‌ಗಳಿಗೆ ಪ್ರೋಟೀನ್ ಪೂರಕಗಳನ್ನು ಪೂರೈಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.ಮಧುರೈ ಮೂಲದ ವಕೀಲೆ ಟಿ.ಶಿವಕಾಮಿ ಸುಂದರಿ ಮತ್ತು ಆಕೆಯ ತಿರುಪುರ ಸ್ನೇಹಿತ ಎಸ್.ಧ್ಯಾನೇಶ್ವರನ್ ಅವರ ಸಹಾಯದಿಂದ ಲೊಕ್ಕ ಕೊಯಮತ್ತೂರಿನಲ್ಲಿ ಬಾಡಿಗೆಗೆ ಅಪಾರ್ಟ್​​ಮೆಂಟ್ ತೆಗೆದುಕೊಂಡಿದ್ದ.
ಇದನ್ನು ಓದಿ:ನಾಳೆಯೇ ರಾಮಮಂದಿರ ಭೂಮಿಪೂಜೆ: ಇಂದು ಮಧ್ಯಪ್ರದೇಶ ಮಾಜಿ ಸಿಎಂ ಕಮಲನಾಥ್​ ಮನೆಯಲ್ಲಿ ಹನುಮಾನ್​ ಚಾಲೀಸಾ ಪಠಣ
ಆತ ಶ್ರೀಲಂಕಾದ ಮಹಿಳೆ ಅಮಾನಿ ಧಂಜಿಯ ಪತಿಯನ್ನು ಬಹಳ ಹಿಂದೆಯೇ ಕೊಂದಿದ್ದು, ಈಗ ಆಕೆಯೊಂದಿಗೆ ವಾಸಿಸುತ್ತಿದ್ದ, ಎಂದು ಪೊಲೀಸರು ತಿಳಿಸಿದ್ದಾರೆ.ಈ ಹಿಂದೆ ಸುಂದರಿ ಮಧುರೈನಲ್ಲಿರುವ ತಮ್ಮ ನಿವಾಸದಲ್ಲಿ ಕೆಲವು ತಿಂಗಳು ಲೊಕ್ಕಾಗೆ ಆಶ್ರಯ ನೀಡಿದ್ದರು.ಲೊಕ್ಕ ಜುಲೈ ಆರಂಭದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವಿಗೀಡಾಗಿದ್ದಾನೆ. ಆತನ ಸಾವಿನ ನಂತರ ಧಂಜಿಯ ಕೋರಿಕೆಯ ಮೇರೆಗೆ ಸುಂದರಿ ಕೊಯಮತ್ತೂರಿಗೆ ತೆರಳಿದ್ದು, ದರೋಡೆಕೋರ ತನ್ನ ಸೋದರಸಂಬಂಧಿ ಹಾಗೂ ಆತ ಹೃದಯ ಸ್ತಂಭನದಿಂದ ಸಾವನ್ನಪ್ಪಿದ್ದಾನೆ ಎಂದು ನಗರ ಪೊಲೀಸರಿಗೆ ತಿಳಿಸಿದ್ದಾಳೆ. ಮರಣೋತ್ತರ ಪರೀಕ್ಷೆಯ ನಂತರ ಸುಂದರಿ ಲೋಕ್ಕಾ ನ ಶವವನ್ನು ಮಧುರೈಗೆ ತೆಗೆದುಕೊಂಡು ಹೋಗಿ ಅಲ್ಲಿ ಅಂತ್ಯಕ್ರಿಯೆ ನಡೆಸಿದ್ದಾರೆ. ಪೊಲೀಸರು ಇದುವರೆಗೆ ಸುಂದರಿ, ಧಂಜಿ ಮತ್ತು ಧ್ಯಾನೇಶ್ವರನ್ ಅವರನ್ನು ಬಂಧಿಸಿದ್ದಾರೆ.
ನೆನಪಿನಶಕ್ತಿ ಕಳೆದುಕೊಂಡಿರುವ 75 ವರ್ಷದ ವೃದ್ಧೆ ಮೇಲೆ ಅಪರಿಚಿತನಿಂದ ಅತ್ಯಾಚಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × three =
Remember me
