ಸೊಲ್ಲಾಪುರ:ತಮ್ಮ ಸರ್ಕಾರ ಭಗವಾನ್ ರಾಮನ ಪ್ರಾಮಾಣಿಕತೆಯೊಂದಿಗೆ ಆಡಳಿತ ತತ್ವಗಳಿಂದ ಪ್ರೇರಿತವಾಗಿದೆ ಎಂದು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ದಿನವಾದ ಜ. 22ರಂದು ರಾಮ ಜ್ಯೋತಿಯನ್ನು ಬೆಳಗಿಸುವಂತೆ ಅವರು ಮನವಿ ಮಾಡಿದರು. ಇದು ಜನರ ಜೀವನದಿಂದ ಬಡತನವನ್ನು ತೊಡೆದುಹಾಕಲು ಸ್ಪೂರ್ತಿಯಾಗಲಿದೆ ಎಂದರು.
ವಿಶ್ವದ ಪ್ರಮುಖ ಮೂರು ಆರ್ಥಿಕತೆಗಳ ಪಟ್ಟಿಯಲ್ಲಿ ಭಾರತವನ್ನು ಸೇರಿಸುವುದು ‘ಮೋದಿ ಗ್ಯಾರಂಟಿ’ ಆಗಿದೆ. ತಮ್ಮ ಮೂರನೇ ಅವಧಿಯಲ್ಲಿ ಜನರ ಆಶೀರ್ವಾದದೊಂದಿಗೆ ಅದನ್ನು ಪೂರೈಸುವುದಾಗಿ ಪ್ರಧಾನಿ ಭರವಸೆ ನೀಡಿದರು. ಬದ್ಧತೆಗಳನ್ನು ಗೌರವಿಸಲು ಭಗವಾನ್ ರಾಮ ನಮಗೆ ಕಲಿಸಿದ್ದಾನೆ. ಬಡವರ ಕಲ್ಯಾಣ ಮತ್ತು ಅವರ ಸಬಲೀಕರಣಕ್ಕಾಗಿ ನಿಗದಿಪಡಿಸಿದ ಎಲ್ಲಾ ಗುರಿಗಳನ್ನು ಸರ್ಕಾರ ಪೂರೈಸಲಿದೆ ಎಂದು ಅವರು ಹೇಳಿದರು.
ಮಹಾರಾಷ್ಟ್ರದಲ್ಲಿ ಸುಮಾರು 2,000 ಕೋಟಿ ರೂಪಾಯಿ ಮೊತ್ತದ 8 ಅಮೃತ್ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ನಂತರ ಸೊಲ್ಲಾಪುರದಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಪ್ರಧಾನಿ ಮಾತನಾಡಿದರು. ಮಹಾರಾಷ್ಟ್ರದಲ್ಲಿ ಕೇಂದ್ರದ ವಿವಿಧ ಯೋಜನೆಯಡಿ ಪೂರ್ಣಗೊಂಡ 90,000ಕ್ಕೂ ಹೆಚ್ಚು ಮನೆಗಳನ್ನು ಪ್ರಧಾನಿ ಮೋದಿ ಲೋಕಾರ್ಪಣೆ ಮಾಡಿದರು. ಸೋಲಾಪುರದ ರಾಯನಗರ ಹೌಸಿಂಗ್ ಸೊಸೈಟಿಯ 15,000 ಮನೆಗಳನ್ನು ಪ್ರಧಾನಿ ವಿತರಣೆ ಮಾಡಿದರು. ಸಾವಿರಾರು ಕೈಮಗ್ಗ ಕಾರ್ವಿುಕರು, ಮಾರಾಟಗಾರರು, ಪವರ್ ಲೂಮ್ ಕಾರ್ವಿುಕರು, ಚಿಂದಿ ಆಯುವವರು, ಬೀಡಿ ಕಾರ್ವಿುಕರು ಮತ್ತು ಚಾಲಕರಿಗೆ ಈ ಮನೆಗಳನ್ನು ಹಸ್ತಾಂತರ ಮಾಡಲಾಯಿತು.
ಮೋದಿ ನಾಯಕತ್ವಕ್ಕೆ ಅಮೆರಿಕ ಗಾಯಕಿ ಮೆಚ್ಚುಗೆ:ಪ್ರಧಾನಿ ನರೇಂದ್ರ ಮೋದಿಯವರು ಭಾರತಕ್ಕೆ ಮಾತ್ರವಲ್ಲದೆ ಭಾರತ-ಅಮೆರಿಕ ಬಾಂಧವ್ಯಕ್ಕೂ ‘ಉತ್ತಮ ನಾಯಕ’ ಆಗಿದ್ದಾರೆ ಎಂದು ಜನಪ್ರಿಯ ಗಾಯಕಿ ಮೇರಿ ಮಿಲ್ಬೆನ್ ಮೆಚ್ಚುಗೆ ಸೂಚಿಸಿದ್ದಾರೆ. ಉಭಯ ದೇಶಗಳ ನಡುವಿನ ಸಂಬಂಧ ಇನ್ನಷ್ಟು ಎತ್ತರಕ್ಕೆ ಏರುವ ಸಲುವಾಗಿ ಮೋದಿ ಮರು-ಆಯ್ಕೆ ಆಗಬೇಕೆಂಬುದು ಅನೇಕ ಅಮೆರಿಕನ್ನರ ಇಚ್ಛೆಯಾಗಿದೆ ಎಂದು ಅವರು ಹೇಳಿದ್ದಾರೆ. ಅಮೆರಿಕದಲ್ಲಿ ಮೋದಿಗೆ ಬಹಳಷ್ಟು ಬೆಂಬಲಿಗರಿದ್ದಾರೆ ಎಂದು ಹಾಲಿವುಡ್​ನ ಪ್ರಮುಖ ಆಫ್ರಿಕನ್-ಅಮೆರಿಕನ್ ನಟಿ ಹಾಗೂ ಗಾಯಕಿ ಮಿಲ್ಬೆನ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಕಳೆದ ವರ್ಷ ರಾಷ್ಟ್ರಗೀತೆ ‘ಜನ ಗಣ ಮನ’ ಹಾಗೂ ‘ಓಂ ಜೈ ಜಗದೀಶ ಹರೇ’ ಹಿಂದಿ ಹಾಡನ್ನು ಹಾಡಿದ್ದ ಮೆಲ್ಬೆನ್​ಗೆ ಭಾರತದಲ್ಲಿ ಸಾಕಷ್ಟು ಅಭಿಮಾನಿಗಳಿದ್ದಾರೆ.
ತಮಿಳುನಾಡಲ್ಲಿ ರೋಡ್ ಷೋ:ಪ್ರಧಾನಿ ಮೋದಿ ಶುಕ್ರ ವಾರ ಚೆನ್ನೈನಲ್ಲಿ ರೋಡ್ ಷೋ ನಡೆಸಿದರು. ತಮಿಳುನಾಡಿಗೆ ಆಗಮಿಸಿದ ಅವರು ಸುಮಾರು 4 ಕಿಮೀ ಮಾರ್ಗದಲ್ಲಿ ರೋಡ್ ಷೋ ಕೈಗೊಂಡರು. ಭರತನಾಟ್ಯ ಮತ್ತು ಜಾನಪದ ಕಲೆಗಳ ಕಲಾವಿದರು ಪ್ರಧಾನಿಯನ್ನು ಸ್ವಾಗತಿಸಿದರು. ನಂತರ ಸಾಂಪ್ರದಾಯಿಕ ಸಂಗೀತವನ್ನು ನುಡಿಸಿದರು. ಪೆರಿಯಮೇಟ್ ನೆಹರೂ ಒಳಾಂಗಣ ಕ್ರೀಡಾಂಗಣದವರೆಗೆ ರಸ್ತೆಯ ಇಕ್ಕೆಲಗಳಲ್ಲಿ ಕಾರ್ಯಕರ್ತರು ಸಾಲುಗಟ್ಟಿ ನಿಂತಿದ್ದರು.
ಮನೆ ಹಸ್ತಾಂತರ ವೇಳೆ ಭಾವುಕ ಕ್ಷಣ:‘ನಾನು ಚಿಕ್ಕವನಿದ್ದಾಗ ಇಂತಹ ಮನೆಗಳಲ್ಲಿ ಇರಲು ಬಯಸಿದ್ದೆ. ಜನರ ಕನಸುಗಳು ನನಸಾಗುವಾಗ ಸಂತೋಷ ಆಗುತ್ತದೆ. ಅವರ ಆಶೀರ್ವಾದವೇ ನನ್ನ ದೊಡ್ಡ ಹೂಡಿಕೆ’ ಎಂದು ಪ್ರಧಾನಿ ಅವರು ಭಾವುಕವಾಗಿ ಹೇಳಿದರು. ರಾಮನು ತನ್ನ ಪ್ರಜೆಗಳನ್ನು ರಕ್ಷಣೆ ಮಾಡಿದ. ನನ್ನ ಸರ್ಕಾರ ಬಡವರ ಕಲ್ಯಾಣ ಮತ್ತು ಸಬಲೀಕರಣಕ್ಕೆ ಮೀಸಲಾಗಿದೆ. ಅವರ ಕಷ್ಟಗಳನ್ನು ನಿವಾರಿಸಲು ಹಲವು ಯೋಜನೆಗಳನ್ನು ಪ್ರಾರಂಭಿಸಿದ್ದೇವೆ. ಕಲ್ಯಾಣ ಯೋಜನೆಗಳಲ್ಲಿ ಮಧ್ಯವರ್ತಿಗಳ ಪಾತ್ರವನ್ನು ಸಂಪೂರ್ಣವಾಗಿ ನಿಮೂಲನೆ ಮಾಡಲಾಗಿದೆ. 10 ಕೋಟಿಗೂ ಹೆಚ್ಚು ಶೌಚಗೃಹ ನಿರ್ವಿುಸಿದ್ದೇವೆ. ಇದು ಮಹಿಳೆಯರಿಗೆ ಮೋದಿ ನೀಡಿದ ‘ಇಜ್ಜತ್ ಕಿ ಗ್ಯಾರಂಟಿ’ ಆಗಿದೆ. ಇದುವರೆಗೆ 4 ಕೋಟಿಗೂ ಹೆಚ್ಚು ಪಕ್ಕಾ ಮನೆಗಳನ್ನು ಬಡವರಿಗಾಗಿ ನಿರ್ಮಾಣ ಮಾಡಲಾಗಿದೆ ಎಂದು ಮೋದಿ ಹೇಳಿದರು.
ವಿಕಸಿತ ಭಾರತ ಗುರಿ:ಭಾರತವನ್ನು ‘ಆತ್ಮನಿರ್ಭರ್’ (ಸ್ವಾವಲಂಬಿ) ಮಾಡುವುದು ಮತ್ತು ‘ವಿಕಸಿತ ಭಾರತ’ (ಅಭಿವೃದ್ಧಿ ಹೊಂದಿದ ಭಾರತ) ಆಗಿ ಪರಿವರ್ತಿಸುವುದು ಮಹತ್ವದ ಗುರಿಯಾಗಿದೆ. ಜನರು ದೊಡ್ಡ ಕನಸುಗಳನ್ನು ಕಾಣಬೇಕು. ಯೋಜನೆಗಳು ಫಲಾನುಭವಿಗಳನ್ನು ತಲುಪದ ಕಾರಣ ‘ಗರೀಬಿ ಹಟಾವೋ’ ಕೇವಲ ಘೊಷಣೆಯಾಗಿತ್ತು. ಈ ಹಿಂದೆ ‘ಅರ್ಧ ರೊಟ್ಟಿ ತಿನ್ನುತ್ತೇವೆ’ ಎಂಬ ಘೋಷಣೆ ಚಾಲ್ತಿಯಲ್ಲಿತ್ತು. ಈಗ ಜನರು ಪೂರ್ಣ ರೊಟ್ಟಿ ತಿನ್ನುತ್ತಿದ್ದಾರೆಂದು ಮೋದಿ ಹೇಳಿದರು.
ಉದ್ದೇಶ, ನೀತಿ, ಬದ್ಧತೆ ಸ್ಪಷ್ಟ:ಹಿಂದಿನ ಸರ್ಕಾರದ ಉದ್ದೇಶ, ನೀತಿ, ಬದ್ಧತೆ ಸ್ಪಷ್ಟವಾಗಿರಲಿಲ್ಲ. ಆದರೆ ತಮ್ಮ ಸರ್ಕಾರದ ನಿಯತ್ತು ಸ್ಪಷ್ಟವಾಗಿದೆ. ಜನರನ್ನು ಸಬಲೀಕರಣಗೊಳಿಸುವ ಉದ್ದೇಶದ ಜತೆಗೆ ರಾಷ್ಟ್ರ ನಿಷ್ಠೆಯೊಂದಿಗೆ ಕೆಲಸ ಮಾಡುತ್ತಿದ್ದೇವೆ. ಕಳೆದ 10 ವರ್ಷಗಳಲ್ಲಿ 25 ಕೋಟಿ ಜನರು ಬಡತನದಿಂದ ಹೊರ ಬಂದಿದ್ದಾರೆಂದು ಮೋದಿ ಹೇಳಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × four =
Remember me
