ವಿಶಾಖಪಟ್ಟಣಂ:ಆಂಧ್ರ ಪ್ರದೇಶದ ರಣಸ್ಥಳಂ ಮಂಡಲದ ಪಂಚಾಯಿತಿ ಅಧಿಕಾರಿಯೊಬ್ಬರ ಮನೆಯಲ್ಲಿ ಭಾರಿ ನಗದು, ಚಿನ್ನಾಭರಣ ಸೇರಿದಂತೆ ಬರೋಬ್ಬರಿ 1.38 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿಯನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಶನಿವಾರ ವಶಪಡಿಸಿಕೊಂಡಿದ್ದು, ಅಧಿಕಾರಿಯನ್ನು ಬಂಧಿಸಿದೆ.
ಬಂಧಿತ ಹಣದಾಹದ ಅಧಿಕಾರಿಯನ್ನು ಅಗುರು ವೆಂಕಟ ರಾವ್​ (52) ಎಂದು ಗುರುತಿಸಲಾಗಿದೆ. ಈತ ಶ್ರೀಕಾಕುಳಂನ ರಣಸ್ಥಳಂ ಮಂಡಲದ ಪಂಚಾಯಿತಿ ಅಧಿಕಾರಿ. ಸದ್ಯ ಅಧಿಕಾರಿನ್ನು ಬಂಧಿಸಿದ್ದು, ಎಸಿಬಿ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.
ವಿಶಾಖಪಟ್ಟಣಂ ನಿವಾಸ ಮತ್ತು ಪೈದಿಭೀಮಾವರಂನಲ್ಲಿನ ಕಚೇರಿಯ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ಪರಿಶೀಲಿಸಿದ್ದಾರೆ. ಇಷ್ಟೇ ಅಲ್ಲದೆ, ಬಂಧು ಬಳಗದ ಮನೆಯ ಮೇಲೂ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿರಿ:ಕರೊನಾದಿಂದ ಕೊನೆಯುಸಿರೆಳೆದ ಭಾರತದ ಪ್ರಥಮ ಮಹಿಳಾ ಹಾಕಿ ತೀರ್ಪುಗಾರ್ತಿ ಪುಚ್ಚಿಮಂಡ ಅನುಪಮಾ
ವೆಂಕಟ್​ ರಾವ್​ 1995ರಲ್ಲಿ ಪಂಚಾಯಿತಿ ಕಾರ್ಯದರ್ಶಿಯಾಗಿ ನೇಮಕವಾದರು. ಇವರು ವಿಸ್ತರಣಾಧಿಕಾರಿ, ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಹೆಚ್ಚುವರಿ ಅಧಿಕಾರವನ್ನು ಸಹ ಹೊಂದಿದ್ದರು.
ಕುಟುಂಬದ ಸದಸ್ಯರ ಹೆಸರಿನಲ್ಲಿರುವ ಅಕ್ರಮ ಆಸ್ತಿಯನ್ನು ಎಸಿಬಿ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಹಲವೆಡೆ ಫ್ಲ್ಯಾಟ್​ಗಳು, ಸೈಟ್​ ಸೇರಿದಂತೆ ಭಾರಿ ನಗದು ಮತ್ತು ಚಿನ್ನಾಭರಣಗಳನ್ನು ಅಧಿಕಾರಿಗಳು ದಾಳಿ ಪತ್ತೆಹಚ್ಚಿದ್ದಾರೆ.(ಏಜೆನ್ಸೀಸ್​)
ಜೆಇಇ ಮೈನ್​ : ಏಪ್ರಿಲ್ ಪರೀಕ್ಷೆಗಳ ಮುಂದೂಡಿಕೆ

ಬೆಂಗಳೂರಿನಲ್ಲಿ ಹೆಮ್ಮಾರಿ ಕರೊನಾ ನಿಯಂತ್ರಣಕ್ಕೆ ಸಿದ್ದವಾಗುತ್ತಿದೆ ಮಾಸ್ಟರ್ ಪ್ಲ್ಯಾನ್

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:3 × four =
Remember me
