ರಾಮೇಶ್ವರಂ:ತಮಿಳುನಾಡಿನ ರಾಮೇಶ್ವರಂನಿಂದ ಪಾಲ್ಕ್​ ಬೇಗೆ ತೆರಳಿದ್ದ ಭಾರತೀಯ ಮೀನುಗಾರಿಕೆ ದೋಣಿಗಳಿಗೆ ಶ್ರೀಲಂಕಾದ ನೌಕಾಪಡೆಯ ಸಿಬ್ಬಂದಿ ಕಲ್ಲುಗಳನ್ನು ತೂರಿದ್ದಾರೆ. ಈ ಘಟನೆಯಲ್ಲಿ 60 ದೋಣಿಗಳಿಗೆ ಹಾನಿಯುಂಟಾಗಿದೆ ಎಂದು ಮೀನುಗಾರರು ಆರೋಪಿಸಿದ್ದಾರೆ ಎನ್ನಲಾಗಿದೆ.
ಕಳೆದ ರಾತ್ರಿ ಕಟ್ಚತೀವು ಬಳಿ ಮೀನು ಹಿಡಿಯುತ್ತಿರುವಾಗ, ಸುಮಾರು 25 ದೋಣಿಗಳ ಫಿಶಿಂಗ್​ ನೆಟ್​ಗಳನ್ನೂ ನೌಕಾಪಡೆಯ ಸಿಬ್ಬಂದಿ ಹಾನಿಗೊಳಿಸಿದ್ದಾರೆ. ಐದು ವೆಸೆಲ್​ಗಳಲ್ಲಿ ಬಂದು ಕಲ್ಲು ತೂರಿದ್ದಾರೆ. ಆದರೆ ಈ ಘಟನೆಯಲ್ಲಿ ಯಾವ ಮೀನುಗಾರರಿಗೂ ಏಟು ಬಿದ್ದಿಲ್ಲ ಎಂದು ಮೀನುಗಾರರು ದೂರು ಸಲ್ಲಿಸಿರುವುದಾಗಿ ಮೀನುಗಾರಿಕಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಸಂಸದನಿಂದ ರೇಪ್​ ಆರೋಪಿಸಿ ಸುಪ್ರೀಂ ಕೋರ್ಟ್​ ಮುಂದೆ ಬೆಂಕಿ ಹಚ್ಚಿಕೊಂಡರು!
ಶನಿವಾರ ರಾತ್ರಿ ಸುಮಾರು 556 ದೋಣಿಗಳು ಮೀನುಗಾರಿಕೆಗಾಗಿ ಪಾಲ್ಕ್​ ಬೇಗೆ ತೆರಳಿದ್ದವು. ಅವುಗಳಲ್ಲಿ ಕೆಲವನ್ನು ಶ್ರೀಲಂಕಾದ ನೌಕಾ ಪಡೆ ಟಾರ್ಗೆಟ್​ ಮಾಡಿದೆ ಎಂದು ರಾಮೇಶ್ವರಂನ ಮೀನುಗಾರರ ಸಂಘದ ಪ್ರತಿನಿಧಿ ಎಸ್​.ಎಮೆರಿಟ್​​ ಹೇಳಿದ್ದಾರೆ. ಈ ತೆರನ ಘಟನೆಗಳು ಆಗಾಗ್ಗೆ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾಳಜಿ ವಹಿಸಿ, ತಮ್ಮ ಜೀವನೋಪಾಯಕ್ಕೆ ಭದ್ರತೆ ಒದಗಿಸಬೇಕು ಎಂದು ಕೋರಿದ್ದಾರೆ.(ಏಜೆನ್ಸೀಸ್)
‘ಸಂಸ್ಕೃತ ದಿನ’ಕ್ಕೆ ಸಂಸ್ಕೃತದಲ್ಲೇ ಟ್ವೀಟ್​ ಮಾಡಿದ ಪ್ರಧಾನಿ ಮೋದಿ!

ವೈದ್ಯಕೀಯ ಸಿಬ್ಬಂದಿ ರಕ್ಷಣೆಗೆ ಕಾನೂನು: ಮೊದಲ ಹೆಜ್ಜೆ ಇಡುತ್ತಿದೆ ಈ ರಾಜ್ಯ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 5 =
Remember me
