ಮುಂಬೈ:ದೇಶದೆಲ್ಲೆಡೆ ಗೌರಿ-ಗಣೇಶ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಗಿದೆ. ಹಬ್ಬ ಮುಗಿದರೂ ಪ್ರಮುಖ ನಗರಗಳಲ್ಲಿ ಈ ತಿಂಗಳ ಅಂತ್ಯದವರೆಗೂ ಗಣಪತಿ ಮೂರ್ತಿ ಉತ್ಸವ ನಡೆಯುತ್ತದೆ. ದೇಶದ ನಂಬರ್​ 1 ಶ್ರೀಮಂತ ಹಾಗೂ ರಿಲಯನ್ಸ್​ ಗ್ರೂಪ್​ ಚೇರ್ಮನ್​ ಮುಕೇಶ್​ ಅಂಬಾನಿಯ ಅಂಟಿಲಿಯಾ ಮನೆಯಲ್ಲೂ ಗಣೇಶ ಹಬ್ಬವನ್ನು ಆಚರಿಸಲಾಯಿತು. ಅಂಬಾನಿ ಮನೆ ಅಂದರೆ ಕೇಳಬೇಕಾ ಅಲ್ಲಿ ಸಂಭ್ರಮ ತುಸು ಹೆಚ್ಚೇ ಇರುತ್ತದೆ. ಇಡೀ ಕುಟುಂಬ ಮಾತ್ರವಲ್ಲದೆ, ಬಾಲಿವುಡ್​ ಮಂದಿಯೂ ಭಾಗವಹಿಸಿ ಸಂಭ್ರಮವನ್ನು ದ್ವಿಗುಣಗೊಳಿಸಿದ್ದಾರೆ.
ಸೆ. 19ರಂದು ಮುಕೇಶ್​ ಅಂಬಾನಿ ಅವರ ಮನೆಯಲ್ಲಿ ಅದ್ಧೂರಿಯಾಗಿ ಗಣೇಶ ಚತುರ್ಥಿ ಆಚರಿಸಲಾಯಿತು. ನೀತಾ ಅಂಬಾನಿ ಕುಟುಂಬದ ಸದಸ್ಯರು ಸೇರಿದಂತೆ, ಬಾಲಿವುಡ್ ಚಿತ್ರರಂಗದ ಶಾರುಖ್ ಖಾನ್ ಕುಟುಂಬ, ರಣವೀರ್ ಸಿಂಗ್, ದೀಪಿಕಾ ಪಡುಕೋಣೆ, ಆಲಿಯಾ ಭಟ್, ನಿರ್ದೇಶಕ ಅಯಾನ್ ಮುಖರ್ಜಿ, ಐಶ್ವರ್ಯ ರೈ, ಸಲ್ಮಾನ್ ಖಾನ್, ಕಿಯಾರಾ ಅಡ್ವಾಣಿ, ಸಿದ್ಧಾರ್ಥ್ ಮಲ್ಹೋತ್ರಾ, ವಿಕ್ಕಿ ಕೌಶಲ್, ಅಜಯ್ ದೇವಗನ್, ರೋಹಿತ್ ಶೆಟ್ಟಿ, ಶ್ರದ್ಧಾ ಕಪೂರ್, ಮೌನಿ ರಾಯ್, ದಿಶಾ ಪಡೋರ್, ಹೇಮಾ ಮಾಲಿನಿ, ಅನನ್ಯಾ ಪಾಂಡೆ, ರಶ್ಮಿಕಾ ಮಂದನಾ, ಜವಾನ್​ ಸಿನಿಮಾ ನಿರ್ದೇಶಕ ಆಟ್ಲೀ ದಂಪತಿ ಹಾಗೂ ರೇಖಾ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ:ಕೇಂದ್ರ ಸರ್ಕಾರ ಮಂಡಿಸಿದ ಮಹಿಳಾ ಮೀಸಲಾತಿ ಮಸೂದೆ​​ ಮೆಚ್ಚಿ ಕೆಲ ಸಲಹೆಗಳನ್ನು ಕೊಟ್ಟ ಕಮಲ್​ ಹಾಸನ್
ಸಿನಿಮಾ ಮಂದಿ ಮಾತ್ರವಲ್ಲದೆ, ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ಭಾರತ ತಂಡದ ಆಟಗಾರ ಕೆಎಲ್ ರಾಹುಲ್ ಸಹ ಆಗಮಿಸಿದರು. ಸೆಲೆಬ್ರಿಟಿಗಳು ಸಾಂಪ್ರದಾಯಿಕ ಬಟ್ಟೆಗಳನ್ನು ಧರಿಸಿ, ಮಿಂಚಿದರು. ಈ ಆಚರಣೆಯು ಭಾವೈಕ್ಯತೆಗೆ ಸಾಕ್ಷಿಯಾಗಿತ್ತು. ವಿಶೇಷ ಪೂಜೆಯ ಬಳಿಕ ಔತಣಕೂಟವನ್ನು ಏರ್ಪಡಿಸಲಾಗಿತ್ತು. ಸೆಲೆಬ್ರಿಟಿಗಳ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.









ಇನ್ನು ಮುಕೇಶ್​ ಅಂಬಾನಿ ಅವರ ನಿವಾಸದ ಬಗ್ಗೆ ಹೇಳುವುದಾದರೆ, 27 ಅಂತಸ್ತಿನ ಬೃಹತ್​ ಮನೆಯಲ್ಲಿ ಈಜುಕೊಳದಿಂದ ಹೆಲಿಪ್ಯಾಡ್​ವರೆಗೆ ಹಲವು ಐಷಾರಾಮಿ ಸೌಲಭ್ಯಗಳಿವೆ.(ಏಜೆನ್ಸೀಸ್​)
ಕಾವೇರಿ ವರಿ; ತಮಿಳುನಾಡು ತಂತ್ರಕ್ಕೆ ಕರ್ನಾಟಕದ ಪ್ರತಿತಂತ್ರ

ಸಂವಿಧಾನ ಪೀಠಿಕೆಯಿಂದ ಜಾತ್ಯಾತೀತ, ಸಮಾಜವಾದಿ ಪದ ಕೈಬಿಡಲಾಗಿದೆ: ಅಧಿರ್​ ರಂಜನ್​ ಚೌಧರಿ ಆರೋಪ

ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಟ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
Sign in to your account
Please enter an answer in digits:19 + 19 =
Remember me
