ಹೈದರಾಬಾದ್​:ಯಮದೊಂಗ, ಮಗಧೀರ, ಬಾಹುಬಲಿ ಮತ್ತು ಆರ್​ಆರ್​ಆರ್​ನಂತಹ ಹಿಟ್ ಸಿನೆಮಾಗಳನ್ನು ನೀಡಿದ ಖ್ಯಾತ ನಿರ್ದೇಶಕ ರಾಜ್​ಮೌಳಿ ತಮ್ಮ ಕನಸಿನ ಯೋಜನೆಯ ಬಗ್ಗೆ ಮಾತನಾಡಿದ್ದಾರೆ. ಇತ್ತೀಚೆಗೆ ಈ ಕುರಿತು ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್​ಮೌಳಿ ಮಹಾಭಾರತ ಸಿನಿಮಾ ನಿರ್ಮಾಣದ ಬಗ್ಗೆ ಮಾತನಾಡಿದ್ದಾರೆ.
ಖ್ಯಾತ ನಿರ್ದೇಶಕ ರಾಜ್​ಮೌಳಿಗೆ ಕಾರ್ಯಕ್ರಮವೊಂದರಲ್ಲಿ, ಟಿವಿಯಲ್ಲಿ ಪ್ರಸಾರವಾದ ಮಹಾಭಾರತ ಸಿನಿಮಾ 266 ಎಪಿಸೋಡ್​ಗಳನ್ನು ಒಳಗೊಂಡಿತ್ತು. ನಿಮ್ಮ ಕನಸಿನ ನೀವು ಈ ಹಿಂದೆ ಈ ಚಿತ್ರದ ಕುರಿತಾಗಿ ಮಾತನಾಡಿದ್ದೀರಿ, ಒಂದು ವೇಳೆ ನೀವು ಚಿತ್ರವನ್ನು ಮಾಡುವುದಾದರೆ ಎಷ್ಟು ಭಾಗಗಳಲ್ಲಿ ಚಿತ್ರವನ್ನು ತೆರೆಗೆ ತರುತ್ತಿರಾ? ಎಂಬ ಪ್ರಶ್ನೆಯನ್ನು ಕೇಳಲಾಗಿತ್ತು.
ಇದನ್ನೂ ಓದಿ:ಸಿಟಿ ರವಿ ಆಸ್ಪತ್ರೆಗೆ ದಾಖಲು; ಮಧ್ಯರಾತ್ರಿ ಆರೋಗ್ಯದಲ್ಲಿ ಏರುಪೇರು
ಇದಕ್ಕೆ ಉತ್ತರಿಸಿದ ರಾಜಮೌಳಿ, ಈ ಚಿತ್ರವನ್ನು ಮಾಡುವ ಮೊದಲು ದೇಶದ ಎಲ್ಲ ಆವೃತ್ತಿಗಳಲ್ಲಿ ಸಿಗುವ ಮಹಾಭಾರತವನ್ನು ಓದಿ ಅರ್ಥೈಸಿಕೊಳ್ಳಲು ಕನಿಷ್ಠ ಒಂದು ವರ್ಷ ಸಮಯಾವಕಾಶ ಬೇಕು. ಅದನ್ನು ಫೀಚರ್ ಫಿಲ್ಮ್ ರೀತಿ ಮಾಡಬೇಕಾದರೆ ಕನಿಷ್ಠ 10 ಭಾಗಗಳನ್ನಾಗಿ ಮಾಡಬೇಕು. ಆದರೆ ನಿಖರವಾಗಿ ಎಷ್ಟು ಆಗುತ್ತದೆ ಅಂತ ಗೊತ್ತಿಲ್ಲ ಎಂದಿದ್ದಾರೆ. ಇನ್ನು, ಈ ವಿಷಯವನ್ನು ಕೇಳಿದ್ದೆ ತಡ ಅಭಿಮಾನಿಗಳು, ರಾಜ್​ಮೌಳಿ ನಿರ್ದೇಶನದಲ್ಲಿ ಹೇಗೆ ಮೂಡಿ ಬರಬಹುದೆಂದು ವಿಚಾರ ಮಾಡುತ್ತಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:twenty − 12 =
Remember me
