ನವದೆಹಲಿ:ತೆಲುಗು ಸೂಪರ್​ಸ್ಟಾರ್ ಮಹೇಶ್ ಬಾಬು ಅವರ ಜನ್ಮ ದಿನದಂದು ಅವರ ಅಭಿಮಾನಿ ಬಳಗಕ್ಕೆ ನಿರ್ದೇಶಕ ಎಸ್. ಎಸ್. ರಾಜಮೌಳಿ ಬಹುದೊಡ್ಡ ನಿರಾಸೆ ಮೂಡಿಸಿದ್ದಾರೆ.ಏನಪ್ಪಾ ವಿಷಯ ಅಂದ್ರೆ, ಖ್ಯಾತ ನಿರ್ದೇಶಕ ರಾಜಮೌಳಿ ಈ ಹಿಂದೆ ಸಂದರ್ಶನವೊಂದರಲ್ಲಿ ಬಹು ಮಹತ್ವಾಕಾಂಕ್ಷಿ ಚಿತ್ರ ಆರ್​ಆರ್​​ಆರ್ ಕೆಲಸ ಮುಗಿದ ನಂತರ ತೆಲುಗು ಸೂಪರ್‌ಸ್ಟಾರ್ ಮಹೇಶ್ ಬಾಬು ಸಹಯೋಗದಲ್ಲಿ ಕೆಲಸ ಮಾಡುವುದಾಗಿ ಘೋಷಿಸಿದ್ದರು.
ಇದನ್ನೂ ಓದಿ:ನಟ ಸಂಜಯ್‌ ದತ್‌ಗೆ ಕ್ಯಾನ್ಸರ್‌ – ಚಿಕಿತ್ಸೆಗೆ ವಿದೇಶದ ಪ್ರಯಾಣ ಸಾಧ್ಯತೆ
ಆದರೆ ಬಾಬು ಜನ್ಮದಿನದ ಸಂದರ್ಭದಲ್ಲಿ ಈ ಯಾವುದನ್ನೂ ಅವರು ಅಧಿಕೃತವಾಗಿ ಘೋಷಿಸಲಿಲ್ಲ. ಇದರಿಂದ ಬಾಬು ಅಬಿಮಾನಿಗಳು ತೀವ್ರ ನಿರಾಶೆಗೊಂಡಿದ್ದಾರಂತೆ. ಪ್ರಸ್ತುತ ಫಾರ್ಮ್​​​​​ಹೌಸ್​​ನಲ್ಲಿ ದಿನ ಕಳೆಯುತ್ತಿದ್ದಾರೆ ರಾಜಮೌಳಿ.ಮೂಲಗಳ ಪ್ರಕಾರ, ಆರ್‌ಆರ್‌ಆರ್ ಇನ್ನೂ ಪ್ರೊಡಕ್ಷನ್ ಹಂತದಲ್ಲಿರುವ ಕಾರಣ, ರಾಜಮೌಳಿ ತಮ್ಮ ಮುಂದಿನ ಯೋಜನೆಗೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ಘೋಷಣೆ ಮಾಡಲು ಆಸಕ್ತಿ ಹೊಂದಿಲ್ಲ . ಆರ್​​ಆರ್​ಆರ್​​ಬಿಡುಗಡೆಯಾದ ನಂತರವೇ ಎಸ್.ಎಸ್.ರಾಜಮೌಳಿ ತಮ್ಮ ಮುಂದಿನ ಯೋಜನೆಯನ್ನು ಪ್ರಕಟಿಸಬಹುದು ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ:100ಕ್ಕೆ ಕರೆ ಮಾಡಿ ಪ್ರಧಾನಿ ಮೋದಿಗೆ ಬೆದರಿಕೆ ಹಾಕಿದ!
ಇದರಲ್ಲಿ ಯಂಗ್ ಟೈಗರ್ ಜೂನಿಯರ್ ಎನ್​​ಟಿಆರ್ ಮತ್ತು ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಮುಖ್ಯ ಪಾತ್ರದಲ್ಲಿದ್ದಾರೆ.ಆರ್‌ಆರ್‌ಆರ್ ಒಂದು ದೊಡ್ಡ ಬಜೆಟ್ ನ ಬಹುಭಾಷಾ ಚಲನಚಿತ್ರವಾಗಿದ್ದು, ಇದನ್ನು ಡಿವಿವಿ ಎಂಟರ್‌ಟೇನ್‌ಮೆಂಟ್ಸ್ ಅಡಿ ಡಿವಿವಿ ದನಯ್ ನಿರ್ಮಿಸುತ್ತಿದ್ದಾರೆ. ಈ ಚಿತ್ರದಲ್ಲಿ ಒಲಿವಾ ಮೊರಿಯಾ, ಆಲಿಯಾ ಭಟ್ ಮತ್ತು ಅಜಯ್ ದೇವ್‌ಗನ್ ಕೂಡ ಪ್ರಮುಖ ಪಾತ್ರಗಳಲ್ಲಿದ್ದಾರೆ.
ಇದನ್ನೂ ಓದಿ:ಪೈಲಟ್ ಬಣ ಒಪ್ಪಿದರೆ ಸರ್ಕಾರದಲ್ಲಿ ಸೇರ್ಪಡೆ: ವರಸೆ ಬದಲಿಸಿದ ಸಿಎಂ ಗೆಹ್ಲೋಟ್
ಏತನ್ಮಧ್ಯೆ, ಗೀತಾ ಗೋವಿಂದಂ ಖ್ಯಾತಿಯ ಪರಶುರಾಮ್ ನಿರ್ದೇಶನದಲ್ಲಿ ಮಹೇಶ್ ಬಾಬು ತಮ್ಮ ಮುಂದಿನ ಪ್ರಾಜೆಕ್ಟ್ ಸರ್ಕಾರು ವಾರಿ ಪಾಟ ಚಿತ್ರದ ಚಿತ್ರೀಕರಣ ಪ್ರಾರಂಭಿಸಲು ಸಿದ್ಧರಾಗಿದ್ದಾರೆ. ಇದೇ ಮೊದಲ ಬಾರಿಗೆ ಮಹೇಶ್ ಬಾಬು, ಕೀರ್ತಿ ಸುರೇಶ್ ಜತೆ ತೆರೆ ಮೇಲೆ ಬರಲಿದ್ದಾರೆ.ಏನೇ ಇರಲಿ, ರಾಜಮೌಳಿ ಮುಂದಿನ ನಡೆಯನ್ನು ಆರ್​ಆರ್​ಆರ್ ಬಿಡುಗಡೆಯಾಗುವವರೆಗೂ ಅಭಿಮಾನಿಗಳು ಕಾಯಲೇಬೇಕಿದೆ.
ಗಜ ಗಣತಿಯಲ್ಲಿ ಕರ್ನಾಟಕವೇ ಅಗ್ರಜ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 1 =
Remember me
