ಗುವಾಹಾಟಿ:ಈಕೆ 20ರ ಯುವತಿ ಜನ್ಮೋನಿ ಗೊಗೊಯ್. ಅಸ್ಸಾಂನ ದಿಬ್ರುಘರ್​ ಗ್ರಾಮದವಳು. ಈಕೆ 2 ವರ್ಷದವಳಿದ್ದಾಗಿನಂದ ತಂದೆಗೆ ಅನಾರೋಗ್ಯ. ಹಾಗೀಗೂ ಮಾಡಿ ಪ್ರಾಥಮಿಕ ಶಾಲೆ ಪೂರೈಸಿದಳು ಈ ಹುಡುಗಿ.ಆದರೆ ಹೈಸ್ಕೂಲ್​ಗೆ ಹೋಗುವಷ್ಟರಲ್ಲಿಯೇ ತಂದೆಯ ಆರೋಗ್ಯ ತೀರಾ ಹದಗೆಟ್ಟಿತ್ತು. ತಾಯಿ ಕೂಲಿ ನಾಲಿ ಮಾಡಿದರಷ್ಟೇ ಮೂವರ ಹೊಟ್ಟೆ ತುಂಬುವಂಥಾಯಿತು ಪರಿಸ್ಥಿತಿ.
ಇದನ್ನೂ ಓದಿ:ಕರೊನಾ ಗಲಾಟೆ: ಮೇ 17ರಂದು ಇಂಟರ್​ನೆಟ್​ ಸೇವೆ ಸ್ಥಗಿತ
ತಾಯಿಯ ಕಷ್ಟ ನೋಡಲಾಗದೇ ಈ ಬಾಲಕಿ ತರಕಾರಿ ಮಾರುವ ನಿರ್ಧಾರಕ್ಕೆ ಬಂದಳು.ಸರಿ. ಅಪ್ಪನ ಹಳೆಯ ಸೈಕಲ್​ ಮೇಲೇರಿ ದಿನವೂ ಹತ್ತಾರು ಕಿ.ಮೀ. ದೂರ ಪಟ್ಟಣಕ್ಕೆ ಹೋಗಿ ತರಕಾರಿ ಮಾರಿ ಬರುತ್ತಿದ್ದಳು. ಹಾಗೂ ಹೀಗೂ ಸಂಸಾರ ಸಾಗುತ್ತಿತ್ತು.
ಆದರೆ ಲಾಕ್​ಡೌನ್​ ಇವರ ಜೀವನವನ್ನು ಅಕ್ಷರಶಃ ಕಸಿದುಕೊಂಡು ಬಿಟ್ಟಿತು. ಆದರೆ ಧೃತಿಗೆಡದ ಜನ್ಮೋನಿ, ತರಕಾರಿಗಳನ್ನು ಪ್ಯಾಕ್​ ಮಾಡಿಕೊಂಡು, ತಾನೂ ವೈರಸ್​ ತಗುಲದಂತೆ ಎಲ್ಲಾ ಎಚ್ಚರಿಕೆ ತೆಗೆದುಕೊಂಡು ಸೈಕಲ್​ ಏರಿ ಹೊರಟು ನಿಂತಳು. ಈ ಸಮಯದಲ್ಲಿ ಅಮ್ಮನಿಗೆ ಹೊರಗಡೆ ಹೋಗುವುದು ಸಾಧ್ಯವಾಗಿರಲಿಲ್ಲ. ಆದ್ದರಿಂದ ಒಬ್ಬಳೇ ಸೈಕಲ್​ ಏರಿ ಬಹುದೂರದವರೆಗೆ ಹೋಗಿ ತರಕಾರಿ ಮಾರಿ ಬರುತ್ತಿದ್ದಳು.
ಇದನ್ನೂ ಓದಿ:ವಿಮಾನ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಾರಾಟಕ್ಕೆ ಮುಹೂರ್ತ ಫಿಕ್ಸ್​- ಇಲ್ಲಿದೆ ನೋಡಿ ಸಂಪೂರ್ಣ ವಿವರ
ಲಾಕ್​ಡೌನ್​ನಿಂದಾಗಿ ತಮ್ಮ ಸಮಸ್ಯೆಗಳನ್ನೇ ಹೇಳಿಕೊಳ್ಳುತ್ತಾ ಸರ್ಕಾರ ನೀಡುವ ಸೌಲಭ್ಯಗಳಿಗೆ ಕಾಯುತ್ತಾ ಕುಳಿತ ಪುರುಷರು ಒಂದೆಡೆಯಾದರೆ, ಕಷ್ಟಪಟ್ಟು, ಕಿಲೋಮೀಟರ್​ಗಟ್ಟಲೆ ಒಂಟಿಯಾಗಿ ಜೀವ ಸವೆಸುತ್ತಿರುವ ಈ ಯುವತಿ ಇನ್ನೊಂದೆಡೆ. ಈಕೆಯ ಇಂಥ ಪ್ರಯತ್ನವನ್ನು ಕಂಡ ಕೆಲವು ಮಾಧ್ಯಮದವರು ಇವಳ ಬಗ್ಗೆ ವರದಿ ಮಾಡಿದವು.ಪತ್ರಿಕೆಗಳಲ್ಲಿ ಬಂದಿರುವ ವರದಿಯನ್ನು ಪೊಲೀಸ್​ ಇಲಾಖೆ ಗಮನಿಸಿತು. ಯುವತಿಯ ಶ್ರಮಕ್ಕೆ ಪೊಲೀಸ್​ ಇಲಾಖೆಯ ಅಧಿಕಾರಿಗಳು ಭಾರಿ ಪ್ರಶಂಸೆ ವ್ಯಕ್ತಪಡಿಸಿದರು. ಇದು ಅಸ್ಸಾಂ ಪೊಲೀಸ್​ ಆಯು್ತಕ ಭಾಸ್ಕರ್​ ಜ್ಯೋತಿ ಮಹಂತಾ ಅವರ ಗಮನಕ್ಕೂ ಬಂತು. ಈ ಯುವತಿಯ ಸಾಹಸಕ್ಕೆ ಕಂಡ ಅವರು, ಈಕೆಗೆ ಸಹಾಯಹಸ್ತ ಚಾಚಬೇಕೆಂದುಕೊಂಡರು.
ಇದನ್ನೂ ಓದಿ:VIDEO: ಕೋಲಿನಿಂದ ಮರುಜೀವ ಪಡೆದ ಯುವಕ! ವೀಡಿಯೋ ಭಾರಿ ವೈರಲ್​
ಅದೊಂದು ದಿನ ಯುವತಿಯ ಮನೆಯ ಮುಂದೆ ಪೊಲೀಸರು ನಿಂತಿದ್ದರು. ಆಕೆಗೋ ಅಕ್ಷರಶಃ ಬೆವರಿದಳು. ನಂತರ ವಿಚಾರಿಸಿದಾಗ ಪೊಲೀಸ್​ ಅಧಿಕಾರಿಗಳು ಅವಳಿಗೆ ಮೊಪೆಡ್ ಬೈಕು ಉಡುಗೊರೆಯಾಗಿ ನೀಡುವ ಬಗ್ಗೆ ವಿವರಿಸಿದರು. ಕುಟುಂಬದ ಮೇಲೆ ಆಕೆಗಿರುವ ಕಾಳಜಿ ಬಗ್ಗೆ ಪ್ರಶಂಸಿಸಿದರು. ಇದರಿಂದ ಯುವತಿ ಕಣ್ಣೀರಾದಳು. ಬಹುಬೇಗನೆ ಅದನ್ನು ಓಡಿಸಲು ಕಲಿತಿರುವ ಯುವತಿ ಅದರಲ್ಲಿಯೇ ಈಗ ತರಕಾರಿ ಮಾರಾಟ ಮಾಡಿ ಬರುತ್ತಿದ್ದಾಳೆ. ಇದಕ್ಕೆ ಪೊಲೀಸ್​ ಇಲಾಖೆ ಕೂಡ ನೆರವಾಗುತ್ತಿದೆ(ಏಜೆನ್ಸೀಸ್​)
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:4 × 5 =
Remember me
