ನವದೆಹಲಿ:ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪ್ರಸಕ್ತ ಶೈಕ್ಷಣಿಕ ವ್ಯವಸ್ಥೆಯಲ್ಲಿ ಹಲವು ಬದಲಾವಣೆಗಳನ್ನು ತರಲಿದೆ. 34 ವರ್ಷಗಳ ಬಳಿಕ ಜಾರಿಗೊಳಿಸಲಾಗುತ್ತಿರುವ ಶಿಕ್ಷಣ ನೀತಿಯ ಪರಿಷ್ಕರಣೆ ಹಲವು ಕಾರಣಗಳಿಂದಾಗಿ ಮಹತ್ವ ಪಡೆದಿದೆ.
ನೂತನ ಶಿಕ್ಷಣ ನೀತಿಯಲ್ಲಿ ಪರೀಕ್ಷೆಗಳಿಗೆ ನೀಡಲಾಗಿರುವ ಪ್ರಾಧಾನ್ಯತೆಯನ್ನು ಕಡಿಮೆ ಮಾಡಲಾಗಿದೆ. ಸಮಗ್ರ ಕಲಿಕೆ ಮತ್ತು ಮೌಲ್ಯಮಾಪನಕ್ಕೆ ಒತ್ತು ನೀಡಲಾಗಿದೆ. ಈ ಕಾರಣಕ್ಕೆ ಬೋರ್ಡ್​ ಅಥವಾ ಮಂಡಳಿ ಪರೀಕ್ಷೆಗಳನ್ನು ಪಾಸ್​ ಮಾಡಲು ವಿದ್ಯಾರ್ಥಿಗಳಿಗೆ ವರ್ಷಕ್ಕೆರಡು ಅವಕಾಶ ಸಿಗಲಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್​ ಪೋಖ್ರಿಯಾಲ್​ ತಿಳಿಸಿದ್ದಾರೆ.
ಇದನ್ನೂ ಓದಿ;ರಾಷ್ಟ್ರೀಯ ಶಿಕ್ಷಣ ನೀತಿಗೆ ಕೆರಳಿದ ತಮಿಳುನಾಡು; ಬಿಜೆಪಿ ಅಂಗಪಕ್ಷ ವಿರೋಧಿಸುತ್ತಿರುವುದು ಏನನ್ನು?
10 ಮತ್ತು 12ನೇ ತರಗತಿಯ ಪರೀಕ್ಷೆಗಳನ್ನು ಸುಲಭವಾಗಿಸಲಾಗಿದೆ. ಈ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ವಿದ್ಯಾರ್ಥಿಗಳು ಎರಡು ಬಾರಿ ಹಾಜರಾಗಬಹುದು. ಕಳೆದ ಬಾರಿಯ ಕರಡು ನೀತಿಯಲ್ಲೂ ಈ ಅಂಶವನ್ನು ಉಲ್ಲೇಖಿಸಲಾಗಿತ್ತು. ಅಂತಿಮ ನೀತಿಯಲ್ಲೂ ಇದನ್ನು ಉಳಿಸಿಕೊಳ್ಳಲಾಗಿದೆ.
ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಸ್ಪರ್ಧಾತ್ಮಕತೆಯನ್ನು ಓರೆಗೆ ಹಚ್ಚಲಾಗುತ್ತದೆಯೇ ಹೊರತು, ಅವರ ಸ್ಮರಣ ಶಕ್ತಿಯನ್ನಲ್ಲ. ಏಕೆಂದರೆ, ವಿದ್ಯಾರ್ಥಿಗಳು ಕೋಚಿಂಗ್​ ಸೆಂಟರ್​ನಲ್ಲಿ ಕಲಿತದ್ದನ್ನು ಅಥವಾ ಊರು ಹೊಡೆದಿದ್ದನ್ನು ಅವಲಂಬಿಸದೆ ನೈಜ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು ಎಂಬುದು ಇದರ ಉದ್ದೇಶವಾಗಿದೆ ಎಂದು ಸಚಿವರು ಹೇಳಿದ್ದಾರೆ.
ಇದನ್ನೂ ಓದಿ;ಎಂಫಿಲ್​ ರದ್ದು, ಪದವಿ ಶಿಕ್ಷಣ ಸ್ವರೂಪದಲ್ಲಿ ಬದಲಾವಣೆ; ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಏನೇನಿದೆ?
ಶೈಕ್ಷಣಿಕ ವರ್ಷದ ಯಾವುದೇ ಸಮಯದಲ್ಲಿ ಎಲ್ಲ ವಿದ್ಯಾರ್ಥಿಗಳು ಎರಡು ಬಾರಿ ಪರೀಕ್ಷೆಗೆ ಹಾಜರಾಗಬಹುದು. ಒಂದು ಮುಖ್ಯ ಪರೀಕ್ಷೆ ಹಾಗೂ ಇನ್ನೊಂದು ಅದನ್ನು ಉತ್ತಮಪಡಿಸಿಕೊಳ್ಳುವ ಅವಕಾಶವಾಗಿರಲಿದೆ. ಇದು ವಾರ್ಷಿಕ ಪರೀಕ್ಷೆಯ ಭೀತಿಯನ್ನು ಹೋಗಲಾಡಿಸಲಿದೆ.
ಮುಂದಿನ ದಿನಗಳಲ್ಲಿ ಸೆಮಿಸ್ಟರ್​ ಮಾದರಿಯಲ್ಲಿ ಬೋರ್ಡ್​ ಪರೀಕ್ಷೆ, ಸಬ್ಜೆಕ್ಟಿವ್​ ಹಾಗೂ ಆಬ್ಜೆಕ್ಟಿವ್​ ಪ್ರಶ್ನೆಗಳಿಗೆ ಪ್ರತ್ಯೇಕ ಪರೀಕ್ಷೆ ನಡೆಸುವ ಉದ್ದೇಶವನ್ನು ಹೊಂದಲಾಗಿದೆ.
15ನೇ ವರ್ಷಕ್ಕೆ ಮದುವೆ, ಎರಡೂವರೆ ವರ್ಷದ ಮಗುವಿನ ತಾಯಿಯೀಗ ಪಿಯು ಪರೀಕ್ಷೆಯಲ್ಲಿ ಅಗ್ರ ಸಾಧಕಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:1 × three =
Remember me
