ಹೈದರಾಬಾದ್​:ಕರೊನಾ ಸಮಯದಲ್ಲಿ ಆನ್​ಲೈನ್​ ಕ್ಲಾಸ್​ಗಳು ಹೆಚ್ಚಾಗಿ ನಡೆಯುತ್ತಿದ್ದು, ಸದಾ ಮೊಬೈಲ್​ನಲ್ಲಿ ಬಿಜಿಯಾಗಿರುವ ಮಕ್ಕಳ ಮೇಲೆ ಪಾಲಕರು ಎಚ್ಚರಿಕೆ ವಹಿಸದಿದ್ದಾರೆ ಏನಾಗಬಹುದು ಎಂಬುದಕ್ಕೆ ಸಾಕಷ್ಟು ಉದಾಹರಣೆಗಳು ಈಗಾಗಲೇ ಬಂದಿವೆ. ತಾಜಾ ಸೇರ್ಪಡೆ ಎಂಬಂತೆ 16 ವರ್ಷದ ವಿದ್ಯಾರ್ಥಿಯೊಬ್ಬ ತನ್ನ ಕ್ಲಾಸ್​ಮೇಟ್​ ಒಬ್ಬಳ ಫೋಟೋವನ್ನು ಕೆಟ್ಟದಾಗಿ ಎಡಿಟ್ ಮಾಡಿ ಆಕೆಯನ್ನು ಬೆದರಿಸಿರುವ ಘಟನೆ ಹೈದರಾಬಾದ್​ನಲ್ಲಿ ವರದಿಯಾಗಿದೆ.
ರಾಚಕೊಂಡ ಸೈಬರ್​ ಕ್ರೈಂ ಪೊಲೀಸರ ಪ್ರಕಾರ ಮೇಡ್ಚಲ್​ ಮಲ್ಕಜ್​ಗಿರಿ ಜಿಲ್ಲೆಯ ಮುಡ್ಚಿಂಟಲಪಲ್ಲಿ ಮಂಡಲದ ನಿವಾಸಿಯಾದ 16 ವರ್ಷದ ವಿದ್ಯಾರ್ಥಿ, 10ನೇ ತರಗತಿ ವಿದ್ಯಾರ್ಥಿಗಳ ವಾಟ್ಸ್​ಆ್ಯಪ್​ ಗ್ರೂಪ್​ನ ಸದಸ್ಯನಾಗಿದ್ದಾನೆ. ತನ್ನ ಕ್ಲಾಸ್​ಮೇಟ್​ ಫೋಟೋವನ್ನು ಗ್ರೂಪ್​ನಲ್ಲಿ ನೋಡಿದ್ದಾನೆ. ಬಳಿಕ ಆಕೆಗೆ ಸಂದೇಶವನ್ನು ಸಹ ಕಳುಹಿಸಿದ್ದಾನೆ. ಆದರೆ, ಆಕೆ ಯಾವುದೇ ಪ್ರತಿಕ್ರಿಯೆಯನ್ನು ನೀಡದಿದ್ದಾಗ ಆಕೆಯ ಹೆಸರು ಕೆಡಿಸುವ ಕೆಲಸಕ್ಕೆ ಮುಂದಾಗಿದ್ದಾನೆ.
ಇದನ್ನೂ ಓದಿರಿ:ಕಲ್ಲಂಗಡಿ ಹಣ್ಣು ತಿಂದು ಬಾಲಕರಿಬ್ಬರ ದುರ್ಮರಣ: ನಿಗೂಢ ಪ್ರಕರಣ ಬೆನ್ನತ್ತಿ ಹೋದ ಪೊಲೀಸರಿಗೆ ಕಾದಿತ್ತು ಶಾಕ್​!
ಬಳಿಕ ಆಕೆಯ ಪ್ರೊಫೈಲ್​ ಫೋಟೋವನ್ನು ತೆಗೆದುಕೊಂಡು ಫೋಟೋ ಎಡಿಟ್​ ಮಾಡುವ ಆ್ಯಪ್​ಗಳ ಮೂಲಕ ಆಕೆಯ ಫೋಟೋಗಳನ್ನು ಕೆಟ್ಟದಾಗಿ ಎಡಿಟ್​ ಮಾಡಿದ್ದಾನೆ. ಬಳಿಕ ನಕಲಿ ನಂಬರ್​ನಿಂದ ಆಕೆಯ ವಾಟ್ಸ್​ಆ್ಯಪ್​ಗೆ ಫೋಟೋಗಳನ್ನು ಕಳುಹಿಸಿದ್ದಾನೆ. ಬಳಿಕ ಬೆತ್ತಲೆ ವಿಡಿಯೋ ಕಾಲ್​ ಮಾಡುವಂತೆ ಒತ್ತಾಹಿಸಿದ್ದಾನೆ. ಇಲ್ಲದಿದ್ದರೆ ಬೆತ್ತಲೆ ಫೋಟೋಗಳನ್ನು ಗ್ರೂಪ್​ನಲ್ಲಿ ಶೇರ್​ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.
ಆದರೆ, ಸಂತ್ರಸ್ತೆ ಇದ್ಯಾವುದಕ್ಕೂ ಪ್ರತಿಕ್ರಿಯಿಸದೇ ಪೊಲೀಸರಿಗೆ ದೂರು ನೀಡಿದ್ದಾಳೆ. ಬಳಿಕ ಸೈಬರ್​ ಕ್ರೈಂ ಪೊಲೀಸರು ಆರೋಪಿಯನ್ನು ಸೆರೆಹಿಡಿದು ಪೊಕ್ಸೊ ಕಾಯ್ದೆ ಅಡಿಯಲ್ಲಿ ಬಂಧಿಸಲಾಗಿದೆ. ಆತ ತನ್ನ ಅಂಕಲ್​ ಮೊಬೈಲ್​ ಫೋನ್​ನಿಂದ ಗೂಗಲ್​ ಡ್ಯಾಶ್​ಬೋರ್ಡ್​ ಸಹಾಯದಿಂದ ತನ್ನ ಮಾಹಿತಿಗಳನೆಲ್ಲ ಅಳಿಸಿ ಹಾಕಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಸದ್ಯ ವಿಚಾರಣೆ ಮುಂದುವರಿದಿದೆ.(ಏಜೆನ್ಸೀಸ್​)
ಎರಡೆರಡು ಸಲ ಲಸಿಕೆ ಪಡೆದರೂ ಕರೊನಾ ಬಂತು!; ವ್ಯಾಕ್ಸಿನ್​ ತಗೊಂಡ ಜಿಲ್ಲಾಧಿಕಾರಿಗೂ ಸೋಂಕು!​

ಹಳ್ಳಕ್ಕೆ ಬಿದ್ದ ಬೈಕ್​: ಮೂವರು ಸವಾರರ ಪೈಕಿ ಇಬ್ಬರು ಸ್ಥಳದಲ್ಲೇ ಸಾವು, ಇನ್ನೊಬ್ಬನಿಗೆ ಗಂಭೀರ ಗಾಯ..

18 ತಾಸು ನಿಂತರೂ ಸಿಗುತ್ತಿರಲಿಲ್ಲ ಟ್ರಿಪ್​! ಆತ್ಮಹತ್ಯೆ ಮಾಡಿಕೊಂಡ ಕ್ಯಾಬ್​ ಡ್ರೈವರ್​ನ ನೋವಿನ ಕಥೆಯಿದು..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × three =
Remember me
