ಸುಬ್ರಹ್ಮಣ್ಯ:ದಕ್ಷಿಣಕನ್ನಡ ಜಿಲ್ಲೆಯ ‌ಸುಳ್ಯ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯದ ಕುಮಾರಸ್ವಾಮಿ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್​ನ ವಿದ್ಯಾರ್ಥಿ ಎ.ಎಲ್. ಅನುಷ್ ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಅದ್ವಿತೀಯ ಸಾಧನೆ ಮಾಡಿದ್ದಾರೆ.
ಇಂದು ಪ್ರಕಟವಾದ 2019-20ನೇ ಸಾಲಿನ ಎಸ್​ಎಸ್​ಎಲ್​ಸಿ ಫಲಿತಾಂಶದಲ್ಲಿ 625-625 ಅಂಕ ಪಡೆದು ರಾಜ್ಯಕ್ಕೆ ಟಾಪರ್​ ಆಗಿ ಹೊರಹೊಮ್ಮಿರುವ ಅನುಷ್​ಗೆ ಅರಣ್ಯಾಧಿಕಾರಿ ಆಗುವ ಹೆಬ್ಬಯಕೆ ಇದೆ. ವಿಜಯವಾಣಿ ಜತೆ ಮಾತನಾಡಿದ ಅವರು, ‘ಗ್ರಾಮೀಣ ಭಾಗದಲ್ಲಿ ಬೆಳೆದಿರುವ ನನಗೆ ಪರಿಸರದ ಬಗ್ಗೆ ಹೆಚ್ಚು ಆಸಕ್ತಿ. ಮುಂದೆ ಐಎಫ್​ಎಸ್​ ಮಾಡಿ ಅರಣ್ಯಾಧಿಕಾರಿಯಾಗಿ ಪರಿಸರ ಸಂರಕ್ಷಣೆಗೆ ಒತ್ತು ನೀಡುವೆ’ ಎಂದು ತಮ್ಮ ಮುಂದಿನ ಗುರಿ ಬಗ್ಗೆ ಬಿಚ್ಚಿಟ್ಟರು.
ಇದನ್ನೂ ಓದಿರಿಸರ್ಕಾರಿ ಶಾಲೆಯ ಸನ್ನಿಧಿ ಎಸ್​ಎಸ್​ಎಲ್​ಸಿ ಟಾಪರ್​
‘620ಕ್ಕಿಂತ ಅಧಿಕ ಅಂಕ ಸಿಗಬಹುದೆಂದು ಅಂದಾಜಿಸಿದ್ದೆ. ಆದರೆ, 625 ಅಂಕ ಬಂದಿರುವುದು ತುಂಬ ಖುಷಿಯಾಗಿದೆ. ನಾನು ಯಾವುದೇ ಕೋಚಿಂಗ್​ಕ್ಲಾಸ್​ಗೆ ಹೋಗಿಲ್ಲ. ಶಾಲೆಯಲ್ಲಿ ಗಮನವಿಟ್ಟು ಪಾಠ ಕೇಳುತ್ತಿದ್ದೆ. ಮನೆಯಲ್ಲಿ ಪುನರ್​ಮನನ ಮಾಡುತ್ತಿದ್ದೆ. ಬಾಯಿ ಪಾಠ ಮಾಡುತ್ತಿರಲಿಲ್ಲ, ವಿಷಯವನ್ನು ಮನಸ್ಸಿಗೆ ಇಳಿಸುತ್ತಿದ್ದೆ. ರಾತ್ರಿ ನಿದ್ದೆ ಬಿಟ್ಟು ಓದಿಲ್ಲ, ಆರೋಗ್ಯಕರ ಅಧ್ಯಯನ ನಡೆಸಿದ್ದೇನೆ’ ಎಂದು ಯಶಸ್ಸಿನ ಸೂತ್ರ ಬಿಚ್ಚಿಟ್ಟರು ಅನುಷ್.
‘ಕರೊನಾ ಲಾಕ್​ಡೌನ್​ ಅವಧಿಯಲ್ಲಿ ಶಾಲೆಯಿಂದ ಉತ್ತಮ ಪ್ರೋತ್ಸಾಹ ಸಿಕ್ಕಿತ್ತು. ಶಿಕ್ಷಕರು ಫೋನ್​ ಮೂಲಕ ಉತ್ತೇಜನ ನೀಡುತ್ತಿದ್ದರು. ಇದರಿಂದಾಗಿ ರಜಾ ಅವಧಿಯಲ್ಲಿ ನಿರಂತರ ಅಧ್ಯಯನದಲ್ಲಿ ತೊಡಗಿಸಿಕೊಳ್ಳುವುದು ಸಾಧ್ಯವಾಯಿತು. ತಂದೆ ಮತ್ತುತಾಯಿಯಿಂದಲೂ ಉತ್ತಮ ಸಹಕಾರ ಸಿಕ್ಕಿದೆ. ಓದುವಂತೆ ಯಾರಿಂದಲೂ ಒತ್ತಡ ಇರಲಿಲ್ಲ. ನಿತ್ಯ ಕೆಲ ಸಮಯ ಟಿವಿ ನೋಡುತ್ತಿದ್ದೆ’ ಎಂದ ಅನುಷ್​, ‘ಆಸಕ್ತಿಯಿಂದ ಪಾಠ ಕೇಳಿ ಅದನ್ನು ಪುನರ್​ ಮನನ ಮಾಡಿದರೆ ಸಾಕು’ ಎಂದು ಯಶಸ್ಸಿನ ಟಿಪ್ಸ್​ ನೀಡಿದರು. ಸಂಸದರ ಆದರ್ಶ ಗ್ರಾಮ ಬಳ್ಪದ ಎಣ್ಣೆಮಜಲು ನಿವಾಸಿ ಲೋಕೇಶ್​ ಮತ್ತು ಉಷಾ ದಂಪತಿ ಪುತ್ರ ಅನುಷ್​.
ಇವರೇ ಎಸ್​ಎಸ್​ಎಲ್​ಸಿ ಟಾಪರ್ಸ್, 625ಕ್ಕೆ 625 ಅಂಕ ಪಡೆದ ಸಾಧಕರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 3 =
Remember me
