ಬೆಂಗಳೂರು:ಬಹುನಿರೀಕ್ಷಿತ 2019-20ನೇ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಇಂದು(ಸೋಮವಾರ) ಮಧ್ಯಾಹ್ನ ಪ್ರಕಟವಾಗಿದ್ದು, ಖಾಸಗಿ ಕಂಪನಿಯ ಸೂಪರ್​ವೈಸರ್​ ಶಂಕರ್​ ನಾರಾಯಣ್​ ಮತ್ತು ಕವಿತಾ ದಂಪತಿಯ ಪುತ್ರ ಕೆ.ಎಸ್​.ಚಿರಾಯು 625ಕ್ಕೆ 625 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದಾರೆ.
ಎಸ್​ಎಸ್​ಎಲ್​ಸಿ ಸಾಧಕ ಚಿರಾಯು ನಾಗಸಂದ್ರದ ಸೇಂಟ್​ ಮೇರಿಸ್​ ಹೈಸ್ಕೂಲ್​ನ ವಿದ್ಯಾರ್ಥಿ. ವಿಜಯವಾಣಿ ಜತೆ ಮಾತನಾಡಿದ ಅವರು, ‘ಸತತವಾಗಿ ಪರಿಶ್ರಮ ಪಟ್ಟು ಓದಿದರೆ ಯಶಸ್ಸು ಸಿಕ್ಕೇ ಸಿಗುತ್ತದೆ. ಕೆಲವರಿಗೆ ಕಡಿಮೆ ಪ್ರಮಾಣದಲ್ಲಿರಬಹುದು, ಇನ್ನೂ ಕೆಲವರಿಗೆ ಬೇಗ ಸಿಗಬಹುದು. ಕಷ್ಟಪಟ್ಟು ಕಲಿಯುವುದಕ್ಕಿಂತ ಇಷ್ಟಪಟ್ಟು ಕಲಿತರೆ ಪಠ್ಯ ಬೇಗ ಅರ್ಥವಾಗುತ್ತದೆ. ಕರೊನಾ ಲಾಕ್​ಡೌನ್​ ವೇಳೆ ಸಿಕ್ಕ 2 ತಿಂಗಳ ಸಮಯವನ್ನು ಸದ್ಬಳಕೆ ಮಾಡಿಕೊಂಡೆ. ಪ್ರತಿ ದಿನ 5 ತಾಸು ವ್ಯಾಸಂಗ ಮಾಡುತ್ತಿದ್ದೆ. ನಾನು ಮೊದಲ ಸ್ಥಾನ ಪಡೆಯುವ ನಿರೀಕ್ಷೆ ಹೊಂದಿರಲಿಲ್ಲ. ಆದರೆ, ಮೊದಲ ಸ್ಥಾನ ಬಂದದ್ದು ತುಂಬಾ ಖುಷಿಯಾಗಿದೆ’ ಎಂದು ಸಂತಸ ಹಂಚಿಕೊಂಡರು.
ಇದನ್ನೂ ಓದಿರಿಕರೊನಾ ಭಯದಲ್ಲೇ ಎಸ್ಸೆಸ್ಸೆಲ್ಸಿ ಎಕ್ಸಾಂ ಬರೆದ ತನ್ಮಯಿ ರಾಜ್ಯಕ್ಕೆ ಟಾಪರ್​
‘ಶಾಲಾ ಶಿಕ್ಷಕರು, ಪಾಲಕರು, ಸಹಪಾಠಿಗಳ ಪ್ರೋತ್ಸಾಹದಿಂದ ಈ ಸಾಧನೆ ಮಾಡಲು ಸಾಧ್ಯವಾಯಿತು. ರಜಾ ಅವಧಿಯಲ್ಲಿ ಆನ್​ಲೈನ್​ ಮೂಲಕವೂ ಪಾಠ ಮಾಡುತ್ತಿದ್ದದ್ದು ಸಾಕಷ್ಟು ಸಹಕಾರಿಯಾಗಿದೆ’ ಎಂದ ಚಿರಾಯು, ‘ಪಿಯುಸಿಯಲ್ಲಿ ಪಿಸಿಎಂಬಿ ವಿಷಯ ವ್ಯಾಸಂಗ ಮಾಡುವೆ. ಮುಂದೆ ವೈದ್ಯನಾಗಿ ಸೇವೆ ಸಲ್ಲಿಸುವೆ’ ಎನ್ನುವ ಮೂಲಕ ಮುಂದಿನ ಕನಸನ್ನು ಬಿಚ್ಚಿಟ್ಟರು.
ಮಗನ ಸಾಧನೆ ಬಗ್ಗೆ ಸಂತರ ವ್ಯಕ್ತಪಡಿಸಿದ ಪಾಲಕರು, ‘ಚಿರಾಯುವಿನ ಕಲಿಕೆಗೆ ಬೇಕಾದ ಪ್ರೋತ್ಸಾಹ ನೀಡಿದ್ದೇವೆ. ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವುದು ಹೆಮ್ಮೆ ಎನಿಸುತ್ತದೆ. ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. ಮುಂದೆಯೂ ಆತನ ಸಾಧನೆಗೆ ಪ್ರೋತ್ಸಾಹ ನೀಡುತ್ತೇವೆ’ ಎಂದರು.
ಇವರೇ ಎಸ್​ಎಸ್​ಎಲ್​ಸಿ ಟಾಪರ್ಸ್, 625ಕ್ಕೆ 625 ಅಂಕ ಪಡೆದ ಸಾಧಕರು

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:2 × one =
Remember me
