ಕೋಲ್ಕತ:ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ ಸರ್ಕಾರವನ್ನು ತೊರೆದು ಬಿಜೆಪಿ ಸೇರಲು ಟಿಎಂಸಿ ನಾಯಕರು ಸಿದ್ಧರಿದ್ದಾರೆ. ಯಾವುದೇ ಸಮಯದಲ್ಲಿ ಅವರು ಬಿಜೆಪಿ ಸೇರಿಕೊಳ್ಳಬಹುದು ಎಂದು ಹೇಳಿದ್ದ ಬಿಜೆಪಿ ನಾಯಕನ ಹೇಳಿಕೆಗೆ ಟಿಎಂಸಿ ನಾಯಕ ಸೌಗತ ರಾಯ್​ ಖಡಕ್​ ಉತ್ತರ ಕೊಟ್ಟಿದ್ದಾರೆ.
ಇದನ್ನೂ ಓದಿ:ಪಾಕಿಸ್ತಾನದಲ್ಲಿ ತಳ್ಳದೆ ಬಸ್​ ಕೂಡ ಮುಂದೋಗಲ್ಲ; ಭಯಂಕರ ಟ್ರೋಲ್​ ಆಗುತ್ತಿದೆ ಈ ವಿಚಾರ
ಇದು ಬಿಜೆಪಿಯ ಪ್ರಚಾರ ಕಲೆ. ಈ ರೀತಿ ಅರೋಪಗಳನ್ನು ಮಾಡುವಲ್ಲಿ ಬಿಜೆಪಿಯ ಅರ್ಜುನ್​ ಸಿಂಗ್​ ಬಾಹುಬಲಿ ಇದ್ದಂತೆ. ನಾನು ರಾಜಕೀಯವನ್ನು ತ್ಯಜಿಸಿ ಸಾಯಲು ಸಿದ್ಧನಿದ್ದೇನಾದರೂ ಬಿಜೆಪಿ ಸೇರಲು ಎಂದಿಗೂ ಸಿದ್ಧನಿಲ್ಲ. ಅವರ ಜತೆ ನನ್ನ ಜೀವನದಲ್ಲಿ ಕೈ ಜೋಡಿಸುವ ಮಾತೇ ಇಲ್ಲ. ಅವರೆಂದುಕೊಂಡಿರವ ಮಾರಾಟದ ಸರಕು ನಾನಲ್ಲ ಎಂದು ಸೌಗತ ರಾಯ್​ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಇದನ್ನೂ ಓದಿ:ಮೆದುಳಿನ ಶಸ್ತ್ರ ಚಿಕಿತ್ಸೆ ಸಮಯದಲ್ಲೂ ಬಿಗ್​ ಬಾಸ್​ ನೋಡಿದ ರೋಗಿ; ಕಾರಣವೇನು ಗೊತ್ತಾ?
ಸೌಗತ ರಾಯ್​ ಅವರು ಕ್ಯಾಮೆರಾ ಎದುರಿಗೆ ಮಾತ್ರ ಟಿಎಂಸಿ ನಾಯಕರಾಗಿ ಕಾರ್ಯನಿರ್ವಹಿಸುತ್ತಾರೆ. ಕ್ಯಾಮೆರಾ ತೆಗೆದರೆ ಅವರು ಬಿಜೆಪಿಯವರೇ, ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಸೌಗತ್​ ರಾಯ್​ ಮತ್ತು ನಾಲ್ವರು ಸಂಸದರು ಬಿಜೆಪಿ ಪರವಾಗಿ ಇರಲಿದ್ದಾರೆ ಎಂದು ಬಿಜೆಪಿ ಸಂಸದ ಅರ್ಜುನ್​ ಸಿಂಗ್ ಅವರು ಹೇಳಿದ್ದರು. (ಏಜೆನ್ಸೀಸ್​)
ದೀದಿಗೆ ಕೈ ಕೊಡಲು ಸಿದ್ಧರಾಗಿದ್ದಾರಂತೆ ಅವರ ಬಲಗೈ ಬಂಟ; ಅಮಿತ್​ ಷಾ ಕಾಲಿಟ್ಟ ನೆಲದಲ್ಲಿ ಭಾರಿ ಸಂಚಲನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 2 =
Remember me
