ನವದೆಹಲಿ:ಸ್ಟೇಡಿಯಂ ಗಾತ್ರದ ಬೃಹತ್​ ಕ್ಷುದ್ರಗ್ರಹವು ಅತ್ಯಂತ ವೇಗವಾಗಿ ಭೂಮಿಯತ್ತ ಧಾವಿಸಿ ಬರುತ್ತಿದ್ದು, ‘2008Go20’ ಹೆಸರಿನ ಕ್ಷುದ್ರಗ್ರಹವು ಜುಲೈ 24ರಂದು ಭೂಮಿಯ ಹಿಂದೆ ಸುರಕ್ಷಿತವಾಗಿ ಹಾದು ಹೋಗಲಿದೆ.
ಕ್ಷುದ್ರಗ್ರಹವು ಪ್ರತಿ ಸೆಕೆಂಡ್​ಗೆ 8 ಕಿ.ಮೀ ವೇಗದಲ್ಲಿ ಅಂದರೆ, ಪ್ರತಿ ಗಂಟೆಗೆ 28,800 ಕಿ.ಮೀ ವೇಗದಲ್ಲಿ ಕ್ಷುದ್ರಗ್ರಹ ಚಲಿಸುತ್ತಿದೆ. ಇದು ಊಹೆಗೂ ಮೀರಿದ ವೇಗವಾಗಿದ್ದು, ಕ್ಷುದ್ರಗ್ರಹದ ಹಾದಿಯಲ್ಲಿ ಏನೇ ಎದುರಾದರೂ ಅದರ ಪರಿಸ್ಥತಿ ಅತ್ಯಂತ ದುರಂತವಾಗಿರುತ್ತದೆ.
ಕ್ಷುದ್ರಗ್ರಹವನ್ನು ಭೂಮಿಯ ಹತ್ತಿರದ ವಸ್ತು (ಎನ್​ಇಒ) ಅಂತಲೂ ಕರೆಯಲಾಗುತ್ತದೆ. 20 ಮೀಟರ್​ ಅಗಲವಾಗಿರುವ ಕ್ಷುದ್ರಗ್ರವು, ಭೂಮಿ ಮತ್ತು ಚಂದ್ರನ ನಡುವಿನ ಎಂಟು ಪಟ್ಟು ಅಂದರೆ 28,70,847,607 ಕಿ.ಮೀ ದೂರದಲ್ಲಿಯೂ ಜೂಮ್​ ಆಗಲಿದೆ. ಆದರೆ, ಈ ಕ್ಷುದ್ರಗ್ರಹದಿಂದ ಭೂಮಿಗೆ ಯಾವುದೇ ತೊಂದರೆ ಇಲ್ಲ. ಜುಲೈ 24ರಂದು ಭೂಮಿಯ ಹಿಂದೆ ಸುರಕ್ಷಿತವಾಗಿ ಹಾದು ಹೋಗಲಿದೆ.
ಗ್ರಹಕ್ಕೆ ಹತ್ತಿರವಿರುವ ಅದರ ಕಕ್ಷೆಯನ್ನು ಅಪೊಲೋ ಎಂದು ವರ್ಗೀಕರಿಸಲಾಗಿದೆ. ಅಪೊಲೋ ಅತ್ಯಂತ ಅಪಾಯಕಾರಿ ಕ್ಷುದ್ರಗ್ರಹಗಳನ್ನು ಹೊಂದಿದೆ. ನಾಸಾ ನಿರಂತರವಾಗಿ ಕ್ಷುದ್ರಗ್ರಹವನ್ನು ಮೇಲ್ವಿಚಾರಣೆ ಮಾಡುತ್ತಿದೆ.
ಇದಕ್ಕು ಮುಂಚೆ ಜೂನ್​ನಲ್ಲಿ 2021KT1 ಹೆಸರಿನ ಐಫೆಲ್​ ಟವರ್ ಗಾತ್ರದ​ ಕ್ಷುದ್ರಗ್ರಹವು ಭೂಮಿಯ ಹತ್ತಿರಕ್ಕೆ ಬಂದಿತ್ತು. ಇದನ್ನು “ಸಂಭಾವ್ಯ ಅಪಾಯಕಾರಿ” ಎಂದು ವರ್ಗೀಕರಿಸಲಾಗಿದೆ. 2021KT1 ಕ್ಷುದ್ರಗ್ರಹವು 1 4.5 ದಶಲಕ್ಷ ಕಿ.ಮೀ ದೂರದಲ್ಲಿ ಭೂಮಿಗೆ ಹತ್ತಿರದ ಮಾರ್ಗದಲ್ಲಿ ಬಂದಿತ್ತು.(ಏಜೆನ್ಸೀಸ್​)
BBK8: ಎಂಟು ಸ್ಪರ್ಧಿಗಳಿಗೆ ಗೊತ್ತಾಗಿದೆ ಬಿಗ್​ಬಾಸ್​ ಸೀಸನ್​ 8ರ ವಿನ್ನರ್​​ ನೇಮ್​..!​

ಸಾಕಪ್ಪ ಸಾಕು ರಾಜ್​ ಕುಂದ್ರಾ ಸಹವಾಸ: 2019ರಲ್ಲಿ ನಡೆದ ಕರಾಳ ಘಟನೆ ಬಿಚ್ಚಿಟ್ಟ ಪೂನಂ ಪಾಂಡೆ..!

ಸರ್ಕಾರಿ ನೌಕರರಿಗೆ ಡಿಎ ಗಿಫ್ಟ್: ಶೇ. 11 ತುಟ್ಟಿಭತ್ಯೆ ಹೆಚ್ಚಳ, 13.5 ಲಕ್ಷ ಮಂದಿಗೆ ಲಾಭ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × five =
Remember me
