ಮಥುರಾ:ಮಥುರಾ ಜಂಕ್ಷನ್​ನಲ್ಲಿ ಮಂಗಳವಾರ ನಡೆದಿದ್ದ ಎಲಕ್ಟ್ರಿಕ್​ ಮಲ್ಟಿಪಲ್​ ಯೂನಿಟ್​ (EMU) ಅವಘಡಕ್ಕೆ ಸಂಬಂಧಿಸಿದಂತೆ ತನಿಖೆ ವೇಳೆ ಸ್ಪೋಟಕ ವಿಚಾರ ಒಂದು ಹೊರಬಿದಿದ್ದು, ಈ ಸಂಬಂಧ ಐವರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.
ಸಿಬ್ಬಂದಿಯ ಅಜಾಗರೂಕತೆಯಿಂದಾಗಿ ರೈಲು ಫ್ಲಾಟ್​ಫಾರ್ಮ್​ ಏರಿ ಹೋಗಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ರೈಲು ಮಥುರಾ ಜಂಕ್ಷನ್​ ತಲುಪಿದ ಬಳಿಕ ಲೋಕೋಪೈಲಟ್​ ರೈಲನ್ನು ಎಲೆಕ್ಟ್ರಿಕ್​ ಹೆಲ್ಪರ್​ ಸಿಬ್ಬಂದಿಯ ನಿಗಾಕ್ಕೆ ಬಿಟ್ಟು ಕೆಳಗಿಳಿಯುವುದು ಕಂಡುಬರುತ್ತದೆ. ಸಚಿನ್​ ಎಂಬ ಸಿಬ್ಬಂದಿ ಎಲೆಕ್ಟ್ರಿಕ್​ ಹೆಲ್ಪರ್​ ಸಿಬ್ಬಂದಿ ರೈಲಿನ ​ಕ್ಯಾಬಿನ್​ ಪ್ರವೇಶಿಸುವ ವೇಳೆ ಫೋನ್​ ಬಳಸುತ್ತಾ ಬರುತ್ತಿರುವುದು ಕಂಡು ಬರುತ್ತದೆ.
Mathura local train ramming into platform: As per report of the probe team, negligent act of helper Sachin engrossed in mobile caused the accident. He put his bag on the throttle which put the train in motion at the dead end forcing it to climb the platform. Sachin's breath…pic.twitter.com/E9nShbnvjN
ಇದನ್ನೂ ಓದಿ:ಫುಟ್​ಬಾಲ್​ ಪಂದ್ಯದ ವೇಳೆ ಮೈದಾನಕ್ಕೆ ಬಡಿದ ಸಿಡಿಲು; ಇಬ್ಬರು ಸಾವು, ಮೂವರು ಚಿಂತಾಜನಕ
ಬಳಿಕ ಆ ಸಿಬ್ಬಂದಿ ತನ್ನ ಬ್ಯಾಗನ್ನು ರೈಲಿನ ಇಂಜಿನ್​ ಹ್ಯಾಂಡಲ್​ಗೆ ನೇತು ಹಾಕಿ ಮೊಬೈಲ್​ನಲ್ಲಿ ವಿಡಿಯೋ ನೋಡುವುದನ್ನು ಮುಂದುವರೆಸುತ್ತಾನೆ. ಬ್ಯಾಗ್​ನ ಬಾರ್ಕಕೆ ರೈಲಿನ ಇಂಜಿನ್​ ಹ್ಯಾಂಡಲ್​ ಮುಂದಕ್ಕೆ ಜರುಗಿದ್ದು, ಏಕಾಏಕಿ ವೇಗವಾಗಿ ಚಲಿಸಲು ಶುರುವಾಗಿದ್ದು, ಮುಂದೆ ಇದ್ದ ತಡೆಗೋಡೆಗೆ ಡಿಕ್ಕಿ ಹೊಡೆದು ಫ್ಲಾಟ್​ಫಾರ್ಮ್​ ಏರಿ ನಿಂತಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಈ ಕುರಿತು ಪ್ರತಿಕ್ರಿಯಿಸಿರುವ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ತೇಜ್​ಪ್ರಕಾಶ್​ ಅಗರ್​ವಾಲ್, ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ಈ ಅವಘಡ ಸಂಭವಿಸಿದ್ದು, ಇಂಜಿನ್​ ಕೋಚ್​ನಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮರಾದಲ್ಲಿಸಂಪೂರ್ಣ ಘಟನೆ ಸೆರೆಯಾಗಿದೆ. ಈ ಸಂಬಂಧ ಐವರನ್ನು ಅಮಾನತು ಮಾಡಲಾಗಿದ್ದು, ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − seven =
Remember me
