ನವದೆಹಲಿ:ರಾಷ್ಟ್ರದಲ್ಲಿ ಕರೊನಾ ವೈರಸ್​ ಸೋಂಕು ಹರಡುವಿಕೆ 2ನೇ ಹಂತದಲ್ಲಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮಹಾ ನಿರ್ದೇಶಕ ಬಲರಾಮ್​ ಭಾರ್ಗವ ಹೇಳಿದ್ದಾರೆ.
ರಾಷ್ಟ್ರದಲ್ಲಿ 3ನೇ ಹಂತದ ಕರೊನಾ ವೈರಸ್​ ಸೋಂಕು ಹರಡಿದರೆ ಅಪಾಯ. ಹೀಗಾಗಿ ನಾವು ಎಚ್ಚರಿಕೆ ವಹಿಸಬೇಕು. ಅಂತಾರಾಷ್ಟ್ರೀಯ ಗಡಿಗಳನ್ನು ಮುಚ್ಚುವುದರ ಮೂಲಕ 3ನೇ ಹಂತದ ಕರೊನಾ ವೈರಸ್​ ಸೋಂಕು ಹರಡುವುದನ್ನು ತಡೆಯಬೇಕು ಎಂದರು.
ಕರೊನಾ ವೈರಸ್​ ಸೋಂಕು ಹರಡುವಿಕೆಯನ್ನು 4 ಹಂತಗಳಲ್ಲಿ ಗುರುತಿಸುತ್ತೇವೆ. ಮೊದಲನೆ ಹಂತಲ್ಲಿ ಸೋಂಕು ಹೊಂದಿದ ವಿದೇಶಿಯರೊಂದಿಗೆ ಸಂಪರ್ಕ. 2ನೇ ಹಂತ ವಿದೇಶಿಯರಿಂದ ಇಬ್ಬರು ಹಾಗೂ ಮೂವರಿಗೆ ಸೋಂಕು ಹರಡುವುದು. 3ನೇ ಹಂತ ಭಾರತೀಯರಿಂದಲೇ ಸೋಂಕು ಹರಡುವುದು. 4ನೇ ಹಂತ ಅಪಾಯಕಾರಿಯಾಗಿದೆ. ಈ ಹಂತ ಚೀನಾದಲ್ಲಿ ಸಂಭವಿಸಿದೆ ಎಂದು ಅವರು ಹೇಳಿದರು.
ಭಾರತದಲ್ಲಿ 3ನೇ ಹಂತಕ್ಕೆ ಸೋಂಕು ಹರಡುವುದನ್ನು ಬಿಡಬಾರದು. ಬಿಟ್ಟರೆ ಅಪಾಯ ಹೀಗಾಗಿ 2ನೇ ಹಂತದಲ್ಲಿ ಸೋಂಕು ನಿವಾರಣೆ ಮಾಡಲು ಸರ್ಕಾರ ಕೆಲವು ಕ್ರಮಗಳನ್ನು ಜರುಗಿಸಬೇಕು. ಸರ್ಕಾರದೊಂದಿಗೆ ಸಾರ್ವಜನಿಕರು ಕೈಜೋಡಿಸಬೇಕು ಎಂದರು.
ರಾಷ್ಟ್ರದಲ್ಲಿ ಫೆಬ್ರವರಿ 2 ರಂದು ಸೋಂಕು ಹರಡಿದ 3 ಪ್ರಕರಣಗಳು ಇದ್ದವು. ಮಾರ್ಚ್​ 17ರಂದು ಈ ಸಂಖ್ಯೆ 137ಕ್ಕೆ ತಲುಪಿದೆ. ರಾಷ್ಟ್ರದ 13 ರಾಜ್ಯಗಳಿಗೆ ಸೋಂಕು ಹರಡಿದೆ. (ಏಜೆನ್ಸೀಸ್​)
ಕರೊನಾ ವೈರಸ್​ ಎಫೆಕ್ಟ್​: ಕುಕ್ಕೆಸುಬ್ರಮಣ್ಯ ದೇವಾಲಯದಲ್ಲಿ ಕೇವಲ ದೇವರ ದರ್ಶನಕ್ಕೆ ಮಾತ್ರ ಅವಕಾಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 − four =
Remember me
