ಚೆನ್ನೈ:ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಫ್ಯಾಸಿಸ್ಟ್​ ಆಡಳಿತವನ್ನು ಕಿತ್ತೊಗೆಯಲು ವಿಪಕ್ಷಗಳು ತಮ್ಮ ಮೈತ್ರಿಕೂಟಕ್ಕೆ I.N.D.I.A ಎಂದು ಹೆಸರಿಟ್ಟ ಬೆನ್ನಲ್ಲೇ ಬಿಜೆಪಿ ದೇಶದ ಹೆಸರನ್ನು ಬದಲಾಯಿಸಲು ಹೊರಟಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್​ ಆರೋಪಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿರುವ ಅವರು ದೇಶವನ್ನು ಪರಿವರ್ತನೆ ಮಾಡುವುದಾಗಿ ಭರವಸೆ ನೀಡಿದ್ದ ಬಿಜೆಪಿ ಕೊನೆಗೆ ಬದಲಾಯಿಸಿದ್ದು ಹೆಸರು ಮಾತ್ರ ಎಂದು ಟೀಕಿಸಿದ್ದಾರೆ.
After Non-BJP forces united to dethrone the fascist BJP regime and aptly named their alliance#INDIA, now the BJP wants to change 'India' for 'Bharat.'BJP promised to TRANSFORM India, but all we got is a name change after 9 years!Seems like the BJP is rattled by a single term…
ಇದನ್ನೂ ಓದಿ:ಸನಾತನ ಧರ್ಮದ ಕುರಿತು ಹೇಳಿಕೆ; ಉದಯನಿಧಿ ತಲೆ ಕಡಿದವರಿಗೆ 10 ಕೋಟಿ ರೂ. ಬಹುಮಾನ ಘೋಷಿಸಿದ ಪರಮಹಂಸ ಆಚಾರ್ಯ
ಬಿಜೆಪಿಯೇತರ ಪಕ್ಷಗಳು ಫ್ಯಾಸಿಸ್ಟ್​ ಆಡಳಿತವನ್ನು ಕಿತ್ತೊಗೆಯಲು ಒಗ್ಗೂಡಿ ತಮ್ಮ ಮೈತ್ರಿಕೂಟಕ್ಕೆ I.N.D.I.A ಎಂದು ಹೆಸರಿಟ್ಟ ಬೆನ್ನಲ್ಲೇ ಬಿಜೆಪಿ ದೇಶದ ಹೆಸರನ್ನು ಭಾರತ್​ ಎಂದು ಬದಲಾಯಿಸಲು ಬಯಸಿದೆ. ಬಿಜೆಪಿ I.N.D.I.A ಎಂಬ ಒಂದೇ ಒಂದು ಪದದಿಂದ ಗಲಿಬಿಲಿಗೊಂಡಂತೆ ಕಾಣುತ್ತಿದೆ.
ಬಿಜೆಪಿ ನಾಯಕರು ವಿಪಕ್ಷಗಳ ಒಗ್ಗಟ್ಟನ್ನು ನೋಡಿ ಭಯಬಿದ್ದಂತೆ ಕಾಣುತ್ತಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ I.N.D.I.A ಮೈತ್ರಿಕೂಟ ಅಧಿಕಾರಕ್ಕೆ ಬರುವುದು ನಿಶ್ಚಿತ. ದೇಶವನ್ನು ಪರಿವರ್ತನೆ ಮಾಡುವುದಾಗಿ ಭರವಸೆ ನೀಡಿದ್ದ ಬಿಜೆಪಿ ಕೊನೆಗೆ ಬದಲಾಯಿಸಿದ್ದು ಹೆಸರು ಮಾತ್ರ. ಮುಂಬರುಚ ಚುನಾವಣೆಯಲ್ಲಿ ದೇಶದ ಜನರು ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್​ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + twenty =
Remember me
