ಚೆನ್ನೈ:ತಮಿಳುನಾಡಿನ ಡಿಎಂಕೆ ಸರ್ಕಾರವು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್ ಅವರನ್ನು ರಾಜ್ಯದ ಉಪಮುಖ್ಯಮಂತ್ರಿ ಹುದ್ದೆಗೆ ನೇಮಕ ಮಾಡಲು ನಿರ್ಧರಿಸಿದೆ. ಆಗಸ್ಟ್​​ 22ರಂದು ಸಿಎಂ ಸ್ಟಾಲಿನ್ ಅವರ ಪ್ರವಾಸ ನಿಗದಿಯಾಗಿದ್ದು, ಅದಕ್ಕೂ ಮೊದಲು ಈ ಕ್ರಮವು ಜಾರಿಗೆ ಬರಲಿದೆ ಎಂಬ ರಾಜ್ಯ ಸರ್ಕಾರದ ಉನ್ನತ ಮೂಲಗಳನ್ನು ಉಲ್ಲೇಖಿಸಿ ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಇದನ್ನು ಓದಿ:ಪ್ರಧಾನಿ ಅಣಕಿಸಿದ ಪತ್ರಕರ್ತೆಗೆ ಬಿತ್ತು ಭಾರೀ ಮೊತ್ತದ ದಂಡ!; ಎಷ್ಟು ಗೊತ್ತಾ?
2009ರ ಲೋಕಸಭಾ ಚುನಾವಣೆಯ ನಂತರ ಸ್ಟಾಲಿನ್​ ಅವರು ಕರುಣಾನಿಧಿ ಅವರ ಉಪಮುಖ್ಯಮಂತ್ರಿಯಾಗಿ ನೇಮಕಗೊಂಡಿದ್ದರು. ಅದೇ ರೀತಿ ಉದಯನಿಧಿ ಸ್ಟಾಲಿನ್ ಅವರನ್ನು ಉಪಮುಖ್ಯಮಂತ್ರಿ ಹುದ್ದೆಗೆ ನೇಮಕಗೊಳಿಸುವ ನಿರ್ಧಾರವು ಅನೇಕ ರೀತಿಯಲ್ಲಿ ಸ್ಟಾಲಿನ್ ಅವರ ಪಥವನ್ನು ಹೋಲುತ್ತದೆ ಎನ್ನಲಾಗಿದೆ. ಸರ್ಕಾರದೊಳಗೆ ತಮ್ಮ ಸ್ಥಾನವನ್ನು ಹೆಚ್ಚಿಸಲು ಮತ್ತು ಆಡಳಿತದ ಜವಾಬ್ದಾರಿಗಳನ್ನು ನಿರ್ವಹಿಸುವಲ್ಲಿ ಅವರ ತಂದೆಗೆ ಸಹಾಯ ಮಾಡಲು ಉದಯನಿಧಿ ಉಪಮುಖ್ಯಮಂತ್ರಿ ಸ್ಥಾನವನ್ನು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೆ 2026ರ ಅಸೆಂಬ್ಲಿ ಚುನಾವಣೆಗಳು ಸಮೀಪಿಸುತ್ತಿದ್ದು, ಹೆಚ್ಚಿನ ಜವಾಬ್ದಾರಿಗಳನ್ನು ಹೊರಲು ಇದು ಅವರಿಗೆ ಅನುವು ಮಾಡಿಕೊಡುತ್ತದೆ ಎಂದು ಡಿಎಂಕೆ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.
ರಾಜ್ಯದ ರಾಜಕೀಯ ವಲಯದಲ್ಲಿ ಉದಯನಿಧಿ ಅವರ ರಾಜಕೀಯ ಬದ್ಧತೆಯ ಬಗ್ಗೆ ಮಿಶ್ರ ಅಭಿಪ್ರಾಯಗಳು ವ್ಯಕ್ತವಾಗಿದ್ದು ಪಕ್ಷದ ಹಿರಿಯ ಸಚಿವರು ಇದನ್ನು ತಳ್ಳಿಹಾಕಿದ್ದಾರೆ. ಹುದ್ದೆಯನ್ನು ಉದಯನಿಧಿಗೆ ವಿಧಿಸಲಾಗಿಲ್ಲ ಅವರೇ ವಿನಂತಿಸಿದ್ದಾರೆ. ಅವರು ಒಲ್ಲದ ಮನಸ್ಸಿನ ರಾಜಕಾರಣಿ ಅಲ್ಲ. ಇಷ್ಟವಿಲ್ಲದ ರಾಜಕಾರಣಿಯಾಗಿದ್ದರೆ, ಭಾರವಾದ ಹುದ್ದೆಗೆ ಬೇಡಿಕೆಯಿಡುವುದಿಲ್ಲ. ಅವರಿಗಿರುವ ಸೆಲೆಬ್ರಿಟಿ ಸ್ಥಾನಮಾನದ ಕಾರಣದಿಂದ ಈ ವದಂತಿಗಳು ಹುಟ್ಟಿಕೊಂಡಿವೆ ಎಂದು ಹೇಳಿದ್ದಾರೆ. ಕೆಲವೇ ತಿಂಗಳುಗಳ ಹಿಂದೆ ಉದಯನಿಧಿ ಸ್ಟಾಲಿನ್ ಉಪಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತಿತ್ತು. ಆ ಸಮಯದಲ್ಲಿ ಸ್ಟಾಲಿನ್​​​ ಅವರು ಆಧಾರವಿಲ್ಲದ ವದಂತಿಗಳು, ಇದು ತಮ್ಮ ರಾಜಕೀಯ ಪ್ರತಿಸ್ಪರ್ಧಿಗಳ ಕೈವಾಡ ಎಂದು ಸ್ಪಷ್ಟನೆ ನೀಡಿದ್ದರು.(ಏಜೆನ್ಸೀಸ್​​)
ಬಾಂಗ್ಲಾದಲ್ಲಿ ಹಿಂಸಾತ್ಮಕ ಪ್ರತಿಭಟನೆ; ಭಾರತೀಯರಿಗೆ ಹೊರಬಾರದಂತೆ ಸೂಚನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − sixteen =
Remember me
