ತಿರುವನಂತಪುರಂ:ಯುವತಿಯನ್ನು ಹಿಂಸಿಸಿ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿ, ಬೆಂಕಿಯಿಟ್ಟಿದ್ದ ಆರೋಪಿಗೆ ಕೇರಳ ನ್ಯಾಯಾಲಯ ಜೀವಾವಧಿ ಶಿಕ್ಷೆ ಜತೆಗೆ 5 ಲಕ್ಷ ರೂ. ದಂಡ ವಿಧಿಸಿದೆ.
ನೀತು (22) ಕೊಲೆಯಾದ ಯುವತಿ. 2019ರ ಏಪ್ರಿಲ್​ನಲ್ಲಿ ಕೇರಳದ ತಿಸ್ಸೂರ್​ನ ಚಿಯರಾಮ್​ನಲ್ಲಿರುವ ನೀತು ಮನೆಯಲ್ಲಿ ಘಟನೆ ನಡೆದಿತ್ತು. ವಡಕ್ಕೆಕಾದ್ ನಿವಾಸಿ ಆರೋಪಿ ನಿಧೀಶ್​, ನೀತು ಮನೆಗೆ ನುಗ್ಗಿ ಸುಮಾರು 12 ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿದ ಬಳಿಕ ಶವಕ್ಕೆ ಬೆಂಕಿ ಇಟ್ಟಿಟ್ಟು ಎಸ್ಕೇಪ್​ ಆಗಲು ಯತ್ನಿಸಿದಾಗ ಸ್ಥಳೀಯರು ಹಿಡಿದು ಪೊಲೀಸ್​ ಠಾಣೆಗೆ ಒಪ್ಪಿಸಿದ್ದರು. ​
ಇದನ್ನೂ ಓದಿ:2 ಸಾವಿರ ವರ್ಷಗಳ ಹಿಂದೆ ಜ್ವಾಲಾಮುಖಿಗೆ ಬಲಿಯಾಗಿದ್ದರ ದೇಹ ಪತ್ತೆ; ಶ್ರೀಮಂತ, ಬಡವನ ಜೋಡಿ ಎಂದ ತಜ್ಞರು
ಪ್ರಕರಣ ಸಂಬಂಧ ಇಂದು (ನ. 23) ತೀರ್ಪು ಪ್ರಕಟಿಸಿದ ತಿಸ್ಸೂರ್​ ಜಿಲ್ಲೆಯ ಪ್ರಿನ್ಶಿಪಲ್​ ಸೆಸ್ಸನ್​ ಕೋರ್ಟ್​ ನಿಧೀಶ್​ಗೆ ಜೀವಾವಧಿ ಶಿಕ್ಷೆ ಜತೆಗೆ 5 ಲಕ್ಷ ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ.
ನೀತು ಕೊಡಕರಾದ ಆ್ಯಕ್ಸಿಸ್​ ಇಂಜಿನಿಯರ್​ ಕಾಲೇಜ್ ವಿದ್ಯಾರ್ಥಿನಿಯಾಗಿದ್ದಳು. ತಾಯಿ ನಿಧನದ ಬಳಿಕ ತಂದೆ ಮತ್ತೊಂದು ಮದುವೆ ಆಗಿದ್ದರಿಂದ ನೀತು ತನ್ನ ಅಜ್ಜಿಯ ಮನೆಯಲ್ಲಿ ವಾಸವಿದ್ದಳು. 27 ವರ್ಷ ನಿಧೀಶ್​ ಕೊಚ್ಚಿಯ ಬಿಪಿಓ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ. ನೀತುವನ್ನು ಪ್ರೀತಿಸುತ್ತಿದ್ದ ಆತ ಮದುವೆ ಆಗುವಂತೆ ಒತ್ತಾಯಿಸುತ್ತಿದ್ದ. ಆದರೆ, ನೀತುಗೆ ಇಷ್ಟವಿರಲಿಲ್ಲ. ಮದುವೆ ಪ್ರಸ್ತಾವನೆಯನ್ನು ನಿರಾಕರಿಸಿದ ಕೋಪದಲ್ಲಿ ಆರೋಪಿ ನಿಧೀಶ್​, ನೀತುವನ್ನು ಕೊಲೆ ಮಾಡಿದ್ದ.(ಏಜೆನ್ಸೀಸ್​)
ಮುಸ್ಲಿಂ ಆದರೇನಂತೆ, ಸಂಸ್ಕೃತದಲ್ಲೇ ಪ್ರಮಾಣ ವಚನ ಸ್ವೀಕರಿಸುತ್ತೇನೆ! ಬಿಹಾರದ ಶಾಸಕನ ಸಂಸ್ಕೃತ ಅಭಿಮಾನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 2 =
Remember me
