ಇಂದೋರ್​:ಹಿಂದು ದೇವಾನುದೇವತೆಗಳನ್ನು ಅವಹೇಳನ ಮಾಡುವವರಿಗೆ ಇದೊಂದು ಎಚ್ಚರಿಕೆ ಗಂಟೆ ಎನ್ನಬಹುದು. ಏಕೆಂದರೆ ದೇವರು- ದೇವತೆಗಳನ್ನು ಅಪಹಾಸ್ಯ ಮಾಡಿದ ಒಬ್ಬ ಸ್ಟ್ಯಾಂಡಪ್​ ಕಾಮಿಡಿಯನ್​ ಈಗ ಕಂಬಿ ಹಿಂದೆ ನಿಲ್ಲುವಂತಾಗಿದೆ. ಅವನ ಜತೆಗೆ ಇನ್ನು ನಾಲ್ವರೂ ಬಂಧನಕ್ಕೀಡಾಗಿದ್ದು, ದೇವರನ್ನೇ ಕಾಮಿಡಿ ಮಾಡಿದ್ದ ಇವರೇ ಈಗ ಅಲ್ಲಿನ ಜನರ ಮುಂದೆ ಕಾಮಿಡಿ ಪೀಸ್​ಗಳಂತಾಗಿದ್ದಾರೆ.
ದೇವರನ್ನು ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಕಾಮಿಡಿ ಶೋನಲ್ಲಿ ಅಪಹಾಸ್ಯ ಮಾಡಿದ್ದವನ ವಿರುದ್ಧ ಬಿಜೆಪಿ ಶಾಸಕಿಯ ಪುತ್ರನೇ ದೂರು ನೀಡಿದ್ದು, ಪೊಲೀಸರು ಈಗ ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. ಗುಜರಾತ್​ನ ಮುನಾವರ್​ ಫರೂಕಿ ಬಂಧಿತ. ಮಧ್ಯಪ್ರದೇಶದ ಇಂದೋರ್​ನಲ್ಲಿ ಶುಕ್ರವಾರ ನಡೆದ ಕಾಮಿಡಿ ಶೋನಲ್ಲಿ ಆತ ಈ ಅವಹೇಳನ ಮಾಡಿದ್ದ.
ಇದನ್ನೂ ಓದಿ:‘ನಂಗೆ ಬಿಜೆಪಿ ಬಗ್ಗೆ ನಂಬಿಕೆ ಇಲ್ಲ, ಕರೊನಾ ಲಸಿಕೆ ತೆಗೆದುಕೊಳ್ಳುವುದಿಲ್ಲ!’ ಕರೊನಾ ಲಸಿಕೆಯ ಬಗ್ಗೆ ಅಪನಂಬಿಕೆ ವ್ಯಕ್ತಪಡಿಸಿದ ನಾಯಕ
ಬಿಜೆಪಿ ಶಾಸಕಿ ಮಾಲಿನಿ ಲಕ್ಷ್ಮಣ್ ಸಿಂಗ್ ಅವರ ಪುತ್ರ ಏಕಲವ್ಯ ಸಿಂಗ್ ಕೌರ್ ಈ ಬಗ್ಗೆ ದೂರು ನೀಡಿದ್ದರು. ಸ್ನೇಹಿತರ ಜತೆ ಪ್ರೇಕ್ಷಕನಾಗಿ ನಾನು ಆ ಕಾಮಿಡಿ ಶೋಗೆ ಹೋಗಿದ್ದು, ಅಲ್ಲಿ ಮುನಾವರ್​ ದೇವರನ್ನು ಹಾಗೂ ಅಮಿತ್ ಷಾ ಅವರನ್ನು ಅಪಮಾನಿಸಿದ್ದ. ಅದನ್ನು ನಾವು ಆಕ್ಷೇಪಿಸಿದ್ದೆವು ಎಂದು ಏಕಲವ್ಯ ದೂರು ನೀಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಮುನಾವರ್ ಜತೆ ಎಡ್ವಿನ್ ಆ್ಯಂಟನಿ, ಪ್ರಕಾಶ್​ ವ್ಯಾಸ್​, ಪ್ರಿಯಂ ವ್ಯಾಸ್ ಮತ್ತು ನಳಿನ್ ಯಾದವ್ ಎಂಬವರನ್ನೂ ಪೊಲೀಸರು ಬಂಧಿಸಿದ್ದಾರೆ. (ಏಜೆನ್ಸೀಸ್​)
‘ನನ್ನನ್ನು ರಕ್ಷಿಸಿ..’ ಎಂದು ಅಪ್ಪನ ವಿರುದ್ಧವೇ ದೂರು ಕೊಟ್ಟಳು ಮಾಜಿ ಸಚಿವರ ಮಗಳು!

ಯುವ ಧೂಮಪಾನಿಗಳಿಗಿದು ‘ಉಸಿರುಗಟ್ಟಿಸೋ’ ಸುದ್ದಿ; ಅವರನ್ನೇ ಗುರಿಯಾಗಿಸಿದೆ ಕೇಂದ್ರ ಸರ್ಕಾರದ ಹೊಸ ‘ಬಿಲ್ಲು’!

ಅಮ್ಮ ಸತ್ತಿಲ್ಲ, ಮಲಗಿದ್ದಾಳೆ! 20 ದಿನದಿಂದ ಶವವನ್ನೇ ಪೂಜಿಸುತ್ತಿರುವ ಮಕ್ಕಳು! ಕಣ್ಣೀರು ತರಿಸುತ್ತೆ ಈ ಮಕ್ಕಳ ನಂಬಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + 18 =
Remember me
