ಬೆಂಗಳೂರು:ಸದಾ ಒಂದಿಲ್ಲೊಂದು ಸುದ್ದಿಗೆ ಗ್ರಾಸವಾಗುತ್ತಿರುವ ಕನ್ನಡ ನಟ ಪ್ರಕಾಶ್​ ರೈ ಹಾಗೂ ಕಾಶ್ಮೀರ್​ ಫೈಲ್ಸ್​ ನಿರ್ದೇಶಕ ವಿವೇಕ್​ ರಂಜನ್​ ಅಗ್ನಿಹೋತ್ರಿ ನಡುವೆ ಇದೀಗ ಸ್ಟಾರ್ ವಾರ್ ಭುಗಿಲೆದ್ದಿದೆ.
ಇತ್ತೀಚೆಗೆ ನಟ ಪ್ರಕಾಶ್ ರೈ, ಕಾರ್ಯಕ್ರಮವೊಂದರಲ್ಲಿ ‘ವಿವೇಕ್​ ಅಗ್ನಿಹೋತ್ರಿಗೆ ಆಸ್ಕರ್​ ಅಲ್ಲ, ಭಾಸ್ಕರ್​ ಕೂಡ ಸಿಗುವುದಿಲ್ಲ, ಕಾಶ್ಮೀರ್​ ಫೈಲ್ಸ್​ ಒಂದು ನಾನ್​ಸೆನ್ಸ್​ ಸಿನಿಮಾ. ಈ ಸಿನಿಮಾವನ್ನು ಇಂಟರ್ನ್ಯಾಷನಲ್ ಜ್ಯೂರಿ ಕೂಡ ರಿಜೆಕ್ಟ್ ಮಾಡಿದ್ದಾರೆ’ ಎಂದಿದ್ದರು. ಇದೇ ಸಂದರ್ಭ ಅವರು ‘ಪಠಾಣ್ ಸಿನಿಮಾ ಸಕ್ಸಸ್ ಬಗ್ಗೆ ಮಾತನಾಡಿ ಬೋಗಳೋ ನಾಯಿಗಳು ಕಡಿಯೋದಿಲ್ಲ’ ಎಂದು ಕಾಲೆಳೆದಿದ್ದರು., ಇದಕ್ಕೆ ಸಂಬಂಧಿಸಿದಂತೆ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ತಿರುಗೇಟು ನೀಡಿದ್ದಾರೆ.
ಈ ಬಗ್ಗೆ ವಿವೇಕ್ ಅಗ್ನಿ ಹೋತ್ರಿ ರೈಗೆ ಟಾಂಗ್ ನೀಡಿದ್ದು ‘ಕಾಶ್ಮೀರ್ ಫೈಲ್ಸ್ ಚಿಕ್ಕ ಸಿನಿಮಾ, ಚಿಕ್ಕವರ ಸಿನಿಮಾ. ಆದರೆ ಕೆಲವು ಅರ್ಬನ್ ನಕ್ಸಲರಿಗೆ ಈ ಸಿನಿಮಾ ನಿದ್ದೆಗೆಡಿಸಿದೆ. ಪ್ರಕಾಶ್​ ರೈ ಪ್ರೇಕ್ಷಕರನ್ನನು ಬೋಗಳೊ ನಾಯಿಗಳು ಎಂದಿದ್ದಾರೆ. ಮಿಸ್ಟರ್ ‘ಅಂಧಕಾರ್ ರಾಜ್’, ಭಾಸ್ಕರ್ ಅವಾರ್ಡ್ ಹೇಗೆ ತಗೋಬೇಕು ಅಂತ ಗೊತ್ತು. ಆದರೆ ಅವರು ಯಾವಾಗಲೂ ನಿಮಗೆ ಸ್ವಂತ’ ಎಂದು ಖಾರವಾಗಿ ರಿಯಾಕ್ಟ್ ಮಾಡಿದ್ದಾರೆ.
ಈ ಮಾತುಗಳ ಮೂಲಕ ಪ್ರಕಾಶ್​ ರೈ ವಿರುದ್ಧ ಟ್ವೀಟ್​ ಮೂಲಕ ಆಕ್ರೋಷ ಹೊರ ಹಾಕಿರುವ ವಿವೇಕ್​ ಅಗ್ನಿಹೋತ್ರಿ, ಕೇರಳದ ಫೆಸ್ಟಿವಲ್ ನಲ್ಲಿ ಪ್ರಕಾಶ್ ರಾಜ್ ಮಾತನಾಡಿದ ವೀಡಿಯೋ ಶೇರ್ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಪ್ರಪಂಚದ ಶ್ರೇಷ್ಟ ಖಳನಟನಿಗೆ ಕೇವಲ 20 ಸಾವಿರ ಲೈಕ್ ಮಾತ್ರ ಎಂದು ವ್ಯಂಗವಾಡಿದ್ದಾರೆ.
A small, people’s film#TheKashmirFileshas given sleepless nights to#UrbanNaxalsso much that one of their Pidi is troubled even after one year, calling its viewer’s barking dogs. And Mr. Andhkaar Raj, how can I get Bhaskar, she/he is all yours. Forever.pic.twitter.com/BbUMadCN8F— Vivek Ranjan Agnihotri (@vivekagnihotri)February 9, 2023
A small, people’s film#TheKashmirFileshas given sleepless nights to#UrbanNaxalsso much that one of their Pidi is troubled even after one year, calling its viewer’s barking dogs. And Mr. Andhkaar Raj, how can I get Bhaskar, she/he is all yours. Forever.pic.twitter.com/BbUMadCN8F
Only 20k votes for World’s biggest villain? Gosh!https://t.co/8TGGQdpkgZ— Vivek Ranjan Agnihotri (@vivekagnihotri)February 9, 2023
Only 20k votes for World’s biggest villain? Gosh!https://t.co/8TGGQdpkgZ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 4 =
Remember me
