ತ್ರಿಸ್ಸೂರು:ಎಷ್ಟೇ ಇದ್ದರೂ ಕೊಡುವ ಮನಸ್ಸು ಇರಬೇಕು ಎನ್ನುತ್ತಾರೆ. ಕೆಲವರ ಬಳಿ ಕೋಟಿ ರೂ. ಕೊಳೆಯುತ್ತಿದ್ದರೂ ಇತರರಿಗೆ ಒಂದೇ ಒಂದು ಬಿಡಿಗಾಸು ನೀಡುವುದಿಲ್ಲ. ಇಂಥವರಿಗೆ ಈ ಬಾಲಕಿ ನಿಜಕ್ಕೂ ಸ್ಫೂರ್ತಿಯಾದರೆ, ಬಹುತೇಕರ ಬಾಳು ಬೆಳಕಾಗುತ್ತದೆ.
ತ್ರಿಸ್ಸೂರು ಮೂಲದ ಪ್ರೇಮ ಎಂಬಾಕೆ ಸಂಕಷ್ಟದ ಸ್ಥಿತಿಯಲ್ಲಿದ್ದಾರೆ. ಕ್ಯಾನ್ಸರ್​ನಿಂದ ಬಳಲುತ್ತಿರುವ ಪ್ರೇಮಾ, ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದು, ಚಿಕಿತ್ಸೆಗೆ ಸಾಕಷ್ಟು ಹಣವಿಲ್ಲ. ತಮ್ಮ ನೆರೆಮನೆಯ ಪ್ರೇಮಾಳ ನೋವಿನ ಕಥೆಯನ್ನು ಆಕೆಯ ತಂದೆ ರಾಜನ್ ಹೇಳಿದಾಗಲೆಲ್ಲ ಬಾಲಕಿ ದೇವಿಕಾ ಮನಸ್ಸು ಮಿಡಿಯುತ್ತಿತ್ತು. ಏನಾದರೂ ಸಹಾಯ ಮಾಡಬೇಕು ಅನಿಸುತ್ತಿತ್ತು.
ಅಂದಹಾಗೆ ದೇವಿಕಾ, 7ನೇ ತರಗತಿ ವಿದ್ಯಾರ್ಥಿನಿ. ಇತ್ತೀಚೆಗಷ್ಟೇ ಆಕೆ ಸೂಪರ್​ ಮಾರ್ಕೆಟ್​ ಲಕ್ಕಿ ಡ್ರಾನಲ್ಲಿ 6500 ರೂ. ಮೌಲ್ಯದ ಬೈಸಿಕಲ್ ಬಹುಮಾನ ಗೆದ್ದಿದ್ದಳು. ಇಡೀ ಹಣವನ್ನು ಪ್ರೇಮಾರಿಗೆ ದೇವಿಕಾ ನೀಡಿದ್ದಾರೆ. ಇದೀಗ ಅದೇ ದೇವಿಕಾ ಕೇವಲ 6 ತಿಂಗಳ ಅಂತರದಲ್ಲಿ ಪೇಮಾ ಅವರ ಚಿಕಿತ್ಸೆಗೆ 3 ಲಕ್ಷ ರೂಪಾಯಿ ನೀಡಿದ್ದಾರೆ.
ದೊಡ್ಡ ಮನಸ್ಸಿನ ಪುಟ್ಟ ಹುಡುಗಿ. ನಾನು ಆಕೆಯನ್ನು ಭೇಟಿಯಾಗಿದ್ದು ತುಂಬಾ ಖುಷಿಯಾಯ್ತು. ಆಕೆಯ ಹೆಸರು ದೇವಿಕಾ. ಚೆಲಕ್ಕಾರದ ಎಲ್​ಎಫ್​ಜಿಎಚ್​ಎಸ್​ ಶಾಲೆಯ ವಿದ್ಯಾರ್ಥಿನಿ ಎಂದು ತ್ರಿಸ್ಸೂರು ಜಿಲ್ಲಾಧಿಕಾರಿ ವಿ.ಆರ್​. ಕೃಷ್ಣ ತೇಜ ತಮ್ಮ ಫೇಸ್​ಬುಕ್​ನಲ್ಲಿ ಪೋಸ್ಟ್​ ಮಾಡಿದ್ದಾರೆ. ಯಾವಾಗ ಜಿಲ್ಲಾಧಿಕಾರಿ ಪೋಸ್ಟ್​ ಮಾಡಿದರೋ ಇದೀಗ ದೇವಿಕಾ ಕೇರಳದಲ್ಲಿ ಭಾರೀ ಸುದ್ದಿಯಾಗಿದ್ದಾರೆ. ಎಲ್ಲ ಮಾಧ್ಯಮಗಳು ಆಕೆಯ ಬಗ್ಗೆ ವಿಶೇಷ ವರದಿ ಮಾಡುತ್ತಿವೆ.
ಇಷ್ಟು ಚಿಕ್ಕ ವಯಸ್ಸಿನಲ್ಲಿ ಕಷ್ಟಕ್ಕೆ ಮಿಡಿಯುವ ಮನಸ್ಸು ಹೊಂದಿರುವ ದೇವಿಕಾಳನ್ನು ನೋಡಿ ಎಲ್ಲರ ಮೆಚ್ಚಿಕೊಳ್ಳುತ್ತಿದ್ದಾರೆ. ದೇವಿಕಾ ನಿತ್ಯವು ಶಾಲೆಗೆ ತೆರಳಲು ಬಸ್​ಗಾಗಿ ಸುಮಾರು 2 ಕಿ.ಮೀ ವರೆಗೆ ನೆಡೆದುಕೊಂಡು ಹೋಗುತ್ತಾರೆ. ಬೈಸಿಕಲ್​ ಮೇಲೆ ತುಂಬಾ ಆಸೆಯನ್ನು ಇಟ್ಟುಕೊಂಡಿದ್ದ ದೇವಿಕಾ, ಪ್ರೇಮಾರ ಚಿಕಿತ್ಸೆಗಾಗಲಿ ಅಂತಾ ಅದನ್ನು ಕೊಟ್ಟು ಬಿಟ್ಟರು. ಪ್ರೇಮಾ ಅವರ ತಂದೆ ಒಂದು ಪಾನ್​ ಶಾಪ್​ ನಡೆಸುತ್ತಿದ್ದು, ಅಷ್ಟೊಂದು ಆದಾಯವಿಲ್ಲ.
ಸರಿಯಾಗಿ ಆರು ತಿಂಗಳ ಹಿಂದೆ ದೇವಿಕಾ ಸೂಪರ್ ಮಾರ್ಕೆಟ್​ನಿಂದ ಲಕ್ಕಿ ಡ್ರಾ ಗೆದ್ದಿದ್ದಳು. ಆದರೆ, ದೇವಿಕಾ ಸೈಕಲ್ ಬದಲಿಗೆ ಹಣ ಕೇಳಿದ್ದು, ಆಕೆಯ ಮನವಿಗೆ ಅಧಿಕಾರಿಗಳು ಮಣಿದಿದ್ದರು. ನಂತರ ಶಾಲೆಯ ಅಧಿಕಾರಿಗಳು ಕೂಡ ಆಕೆಗೆ 3500 ರೂಪಾಯಿ ನೀಡಿದರು. ಒಟ್ಟು 10,000 ರೂಪಾಯಿಯನ್ನು ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಪ್ರೇಮಾ ಅವರಿಗೆ ಹಸ್ತಾಂತರಿಸಲಾಯಿತು.
ಇಷ್ಟಕ್ಕೆ ಸುಮ್ಮನಾಗದ ದೇವಿಕಾ, ಹೆಚ್ಚು ಹಣ ಸಂಗ್ರಹಿಸಲು ‘ದೇವುಸ್ ವರ್ಲ್ಡ್’ ಎಂಬ ಯೂಟ್ಯೂಬ್ ಚಾನೆಲ್ ಆರಂಭಿಸಿದ್ದಾರೆ. ದೇವಿಕಾ ಅವರಿಗೆ ಹಲವಾರು ಸಂಸ್ಥೆಗಳಿಂದ 12 ಸೈಕಲ್‌ಗಳು ಬಂದಿವೆ. ಶಾಲಾ ಆಡಳಿದ ಸಹಾಯದಿಂದ ಅವರು ಪ್ರತಿಯೊಂದನ್ನು ವಿದ್ಯಾರ್ಥಿಗಳಿಗೆ ಮಾರಾಟ ಮಾಡಿದ್ದಾರೆ. ಸ್ವತಃ ದೇವಿಕಾ ಸೈಕಲ್‌ಗಾಗಿ ಹಂಬಲಿಸಿದರೂ, ಅದು ತನ್ನ ಯೋಜನೆ ಮೇಲೆ ಪರಿಣಾಮ ಬೀರುತ್ತದೆ ಎಂದು ಭಾವಿಸಿ, ಅದನ್ನು ನಿರಾಕರಿಸಿದ್ದಾರೆ. ಆರ್ಥಿಕ ನೆರವು ಮತ್ತು ಸೈಕಲ್ ಮಾರಾಟದಿಂದ ಒಟ್ಟು 3 ಲಕ್ಷ ರೂ. ಹಣ ಸಂಗ್ರಹವಾಗಿದ್ದು, ಪ್ರೇಮಾಗೆ ನೀಡಿದ್ದಾರೆ. ವೈದ್ಯರು ಚಿಕಿತ್ಸೆ ಮುಂದುವರಿಸುವುದಾಗಿ ತಿಳಿಸಿದ ಬಳಿಕ ದೇವಿಕಾ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಪ್ರೇಮಾ ಅವರ ಪತಿ ಕೂಲಿ ಕಾರ್ಮಿಕರಾಗಿದ್ದು, ಚಿಕಿತ್ಸೆಗೆ ಹಣ ಹೊಂದಿಸಲು ಹರಸಾಹಸ ಪಡುತ್ತಿದ್ದಾರೆ.(ಏಜೆನ್ಸೀಸ್​)
ಟೀಮ್​ ಇಂಡಿಯಾಗೆ ಮಧ್ಯಮ ಕ್ರಮಾಂಕದ ಬಲ: ಇವರು ನಿಂತರೆ ಗೆಲುವು ದಕ್ಕದೇ ಇರಲ್ಲ!

ಗಾಜಾ ಮೇಲಿನ ಹಿಡಿತ ಕಳೆದುಕೊಂಡ ಹಮಾಸ್​ ದಕ್ಷಿಣಕ್ಕೆ ಪರಾರಿ: ಇಸ್ರೇಲ್​ ರಕ್ಷಣಾ ಸಚಿವರ ಹೇಳಿಕೆ

ದೀಪಾವಳಿ ಸಂಭ್ರಮ; ದೇಶಾದ್ಯಂತ 3.75 ಲಕ್ಷ ಕೋಟಿ ರೂ. ವ್ಯಾಪಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five − 1 =
Remember me
