ಕೋಲ್ಕತ್ತಾ:ಇಂದಿನ ದಿನಗಳಲ್ಲಿ ಆನ್​ಲೈನ್​ ಮಾರಾಟ ಭಾರೀ ಜನಪ್ರಿಯತೆ ಪಡೆದುಕೊಳ್ಳುತ್ತಿದ್ದು, ಮನೆಯಲ್ಲಿದ್ದೇ ಬೇಕಾದ ವಸ್ತುಗಳನ್ನು ಖರೀದಿ ಮಾಡಬಹುದು.
ತರಕಾರಿ, ದಿನಸೀ, ಬಟ್ಟೆ ಹೀಗೆ ಎಲ್ಲವೂ ಮನೆಬಾಗಿಲಿಗೆ ಬಂದುಬಿಡುತ್ತದೆ. ಈಗ ಮದ್ಯಪ್ರಿಯರೂ ಕೂಡ ಮನೆಯಲ್ಲಿದ್ದೂ ತಮಗಿಷ್ಟವಾದ ಬ್ರಾಂಡ್​​ ಅನ್ನು ಖರೀದಿಸಬಹುದು. ಸಂಸ್ಥೆಯೊಂದು ಮನೆ ಬಾಗಿಲಿಗೇ ಮದ್ಯವನ್ನು ತಲುಪಿಸುತ್ತೇವೆ ಎಂದು ಹೇಳುವ ಮೂಲಕ ಮದ್ಯಪ್ರಿಯರಿಗೆ ಸಿಹಿಸುದ್ದಿ ನೀಡಿದೆ.
ಆರ್ಡರ್​ ಮಾಡಿದ ಕೆಲವೇ ಗಂಟೆಗಳಲ್ಲಿ ಮಾರುಕಟ್ಟೆಯಲ್ಲಿ ಸಿಗುವ ಎಲ್ಲಾ ವಸ್ತುಗಳು ಮನೆ ಬಾಗಿಲಿಗೆ ಬಂದು ತಲುಪುತ್ತವೆ. ಆದರೆ ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಸಂಸ್ಥೆಗಳು ಮದ್ಯಪ್ರಿಯರಿಗೂ ಇಂತಹ ಅವಕಾಶವನ್ನು ನೀಡಿದೆ.
ಆರ್ಡರ್​​ ಮಾಡಿ 10 ನಿಮಿಷದಲ್ಲೇ ಮನೆ ಬಾಗಿಲಿಗೆ ಬರುತ್ತೆ ಎಂದು ಹೈದರಾಬಾದ್ ಮೂಲದ ಸ್ಟಾರ್ಟ್​​ ಅಪ್​ ಕಂಪನಿ ಹೇಳಿಕೊಂಡಿದೆ.ಬೂಜಿ ಹೆಸರಿನ ಈ ಖಾಸಗಿ ಸಂಸ್ಥೆ ಮದ್ಯವನ್ನು ಆರ್ಡರ್​​ ಮಾಡಿದ ಕೆಲವೇ ನಿಮಿಷದಲ್ಲೇ ತಲುಪಿಸುತ್ತೇವೆ ಎಂದು ಘೋಷಿಸಿಕೊಂಡಿದೆ. ಸದ್ಯಕ್ಕೆ ಕೋಲ್ಕತ್ತಾ ನಗರದಲ್ಲಿ ಮಾತ್ರ ತನ್ನ ಸೇವೆ ನೀಡಲಿದ್ದು, ನಂತರದ ದಿನಗಳಲ್ಲಿ ಇತರೆ ನಗರಗಳಲ್ಲಿಯೂ ಸೇವೆ ಆರಂಭಿಸಲಾಗುವುದು ಎಂದು ಹೇಳಿದೆ.
ಕೆಲವು ಸಂಸ್ಥೆಗಳಲ್ಲಿ ಈಗಾಗಲೇ ಮಾರಾಟ ಮಾಡುತ್ತಿವೆ. ಆದರೆ ನಾವು ಅವರಿಗಿಂತ ವೇಗವಾಗಿ ನಿಮ್ಮ ಮನೆ ಬಾಗಿಲಿಗೆ ನಿಮಗಿಷ್ಟವಾದ ಮದ್ಯವನ್ನು ತಂದುಕೊಡುತ್ತೇವೆ ಎಂದು ತನ್ನ ಗ್ರಾಹಕರಿಗೆ ಈ ಸಂಸ್ಥೆ ಭರವಸೆ ನೀಡಿದೆ.(ಏಜೆನ್ಸೀಸ್​)
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:one × four =
Remember me
