ರಾಜಕೋಟ್​:ಅವರೆಲ್ಲ ಬಹುಶಃ ನಿರುದ್ಯೋಗಿಗಳು, ಲಾಕ್​ಡೌನ್​ನಿಂದಾಗಿ ಕೆಲಸ ಕಳೆದುಕೊಂಡವರು. ಹೀಗಾಗಿ ಅವರಿಗೆ ಹೊಟ್ಟೆ ಹೊರೆಯುವುದು ಹೇಗಪ್ಪಾ ಎಂಬ ಚಿಂತೆಯಷ್ಟೇ ಅವರಿಗಿತ್ತು.
ಜುನಾಗಢದ ವೈಭವ್​ ಚೌಕ್​ನಲ್ಲಿದ್ದ ಗಜಾನಂದ ಪರಾಠಾ ಹೌಸ್​ಗೆ ನುಗ್ಗಿದ ಐವರು ಅಡುಗೆ ಮನೆಗೆ ಬಂದಿದ್ದಾರೆ. ಅಲ್ಲಿ ಅವರಿಗೆ ತಿನ್ನಲು ಏನೂ ಸಿಕ್ಕಿಲ್ಲ. ಹೀಗಾಗಿ ಅಲ್ಲಿದ್ದ ಅಕ್ಕಿಯಿಂದ ಅನ್ನ ತಯಾರಿಸಿದ್ದಾರೆ. ಬಳಿಕ ಆಲೂಡ್ಡೆಯ ಸಾಂಬಾರನ್ನು ಮಾಡಿಕೊಂಡಿದ್ದಾರೆ. ಐವರು ಊಟ ಮಾಡಿಕೊಂಡು ತೆರಳಿದ್ದಾರೆ. ಬೇರೆ ಏನನ್ನೂ ಅವರು ಮುಟ್ಟಿಲ್ಲ. ಈ ದೃಶ್ಯವೆಲ್ಲ ಅಲ್ಲಿನ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ.
ಇದನ್ನೂ ಓದಿ;ಟ್ರಕ್​ ಅಪಘಾತಕ್ಕೆ ಬಲಿಯಾದ 23 ವಲಸೆ ಕಾರ್ಮಿಕರು
ಬೆಳಗ್ಗೆ ಹೋಟೆಲ್​ ಅಡುಗೆಮನೆಯ ಬಾಗಿಲು ತೆರೆದಿರುವುದನ್ನು ಗಮನಿಸಿ ಸ್ಥಳೀಯರು ಮಾಲೀಕ ಜಿತೇಶ್​ ತಂಕ್​ಗೆ ಫೋನ್​ ಮಾಡಿ ವಿಷಯ ತಿಳಿಸಿದ್ದಾರೆ. ಆತ ಬಂದು ಪರಿಶೀಲಿಸಿದಾಗ ಹೋಟೆಲ್​ನಲ್ಲಿ ಏನೂ ಕಳವಾಗದಿರುವುದು ಕಂಡುಬಂದಿದೆ.
ಟೇಬಲ್​ ಮೇಲಿದ್ದ ಐದು ಪ್ಲೇಟ್​ಗಳಿಂದ ಅವರು ಊಟ ಮಾಡಿದ್ದು ಗೊತ್ತಾಗಿದೆ. ಅಡುಗೆ ತಯಾರಿಸಿದ್ದ ಪಾತ್ರೆಗಳನ್ನು ಹಾಗೆಯೇ ಬಿಟ್ಟಿದ್ದರು. ಬಂದವರು ಊಟ ತಯಾರಿಸಿಕೊಂಡು ತಿಂದು ಬರಿಗೈಯಲ್ಲಿ ಹೋಗಿದ್ದರು. ಇದರಿಂದಾಗಿ ಪೊಲೀಸರಿಗೆ ದೂರನ್ನು ನೀಡಿರಲಿಲ್ಲ.
ಇದನ್ನೂ ಓದಿ;4ಜಿ ಸ್ಮಾರ್ಟ್​ಫೋನ್​ ಬಳಕೆದಾರರೇ ಇನ್ನೆರಡು ವರ್ಷ ನಿಮಗಿಲ್ಲ ಚಿಂತೆ..!
ಆದರೆ, ಸಿಸಿ ಕ್ಯಾಮರಾದಲ್ಲಿನ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳನ್ನು ಅಪಲೋಡ್​ ಮಾಡಿದ್ದರಿಂದ ಪೊಲೀಸರಿಗೆ ವಿಷಯ ಗೊತ್ತಾಗಿದೆ. ಸ್ಥಳೀಯ ಪೊಲೀಸರು ಸಿಸಿ ಕ್ಯಾಮರಾ ದೃಶ್ಯಗಳನ್ನು ವಶಕ್ಕೆ ಪಡೆದು ಮಾಲೀಕರ ಹೇಳಿಕೆ ದಾಖಲಿಸಿಕೊಂಡಿದ್ದಾರೆ.
ಎರಡು ದಶಕಗಳಷ್ಟು ಹಿಂದಿನಂತಿದ್ದ ದೆಹಲಿ ಮತ್ತೆ ಮೊದಲಿನಂತಾಯ್ತು…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + 9 =
Remember me
