ನವದೆಹಲಿ:ಲಾಕ್​ಡೌನ್​ನಿಂದಾಗಿ ಅತಂತ್ರ ಸ್ಥಿತಿಯಲ್ಲಿರುವ ವಲಸೆ ಕಾರ್ವಿುಕರಿಗೆ ಸುಪ್ರೀಂಕೋರ್ಟ್ ತುಸು ನಿರಾಳತೆ ನೀಡಿದೆ. ಕಾರ್ವಿುಕರಿಗೆ ಎಲ್ಲ ರೀತಿಯ ಅಗತ್ಯ ವ್ಯವಸ್ಥೆ ಒದಗಿಸುವಂತೆ ರಾಜ್ಯಗಳಿಗೆ ಗುರುವಾರ ಸೂಚನೆ ನೀಡಿದೆ.
ಕಾರ್ವಿುಕರು ತಮ್ಮ ರಾಜ್ಯಗಳಿಗೆ ತೆರಳಲು ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಡುವಂತೆ ರಾಜ್ಯ ಸರ್ಕಾರಗಳಿಗೆ ಆದೇಶಿಸಿದೆ. ದೇಶದಲ್ಲಿ ವಲಸಿಗರು ಅನುಭವಿಸುತ್ತಿರುವ ಸಮಸ್ಯೆಗಳ ಕುರಿತ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಮಧ್ಯಂತರ ಆದೇಶ ಹೊರಡಿಸಿದೆ.
ಇದನ್ನೂ ಓದಿದಂಡು ದಂಡಾಗಿ ಬಂದಿರುವ ಮಿಡತೆಗಳಿಂದ ಸಮಸ್ಯೆಯಾಗದು: ವಿಜ್ಞಾನಿಗಳ ತಂಡದ ಸ್ಪಷ್ಟನೆ ಹೀಗಿದೆ…
ವಲಸಿಗರು ಅವರ ರಾಜ್ಯಕ್ಕೆ ತೆರಳಲು ಬಯಸಿದರೆ ಅದನ್ನು ಸರ್ಕಾರ ತಡೆಯುವಂತಿಲ್ಲ. ಅವರಿಗೆ ಶ್ರಮಿಕ ವಿಶೇಷ ರೈಲು ಅಥವಾ ಬಸ್ಸಿನ ವ್ಯವಸ್ಥೆ ಮಾಡಿಕೊಡಬೇಕು. ಬಸ್ಸು ಮತ್ತು ರೈಲಿಗೆ ಶುಲ್ಕ ವಿಧಿಸುವಂತಿಲ್ಲ. ಅದನ್ನು ಇಲಾಖೆ ಮತ್ತು ರಾಜ್ಯ ಸರ್ಕಾರ ಭರಿಸಬೇಕು. ಸ್ಥಳದಲ್ಲಿರುವ ಮತ್ತು ರೈಲಿನಲ್ಲಿ ಪ್ರಯಾಣ ಮಾಡುವ ವಲಸಿಗರಿಗೆ ಊಟದ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಮಾಡಬೇಕು. ಊರಿಗೆ ತೆರಳಲು ಬಯಸುವ ವಲಸಿಗರ ನೋಂದಾವಣಿ ಕಾರ್ಯವನ್ನು ರಾಜ್ಯ ಸರ್ಕಾರವೇ ನೋಡಿಕೊಳ್ಳಬೇಕು. ನೋಂದಣಿ ಮಾಡಿಸಿಕೊಂಡ ವಲಸಿಗರು ನಿಗದಿ ಪಡಿಸಲಾದ ದಿನದಂದು ಬಸ್ಸು ಅಥವಾ ರೈಲನ್ನು ಹತ್ತಿದ್ದಾರೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು. ಸಂಬಂಧ ಪಟ್ಟವರಿಗೆ ಸಂಪೂರ್ಣ ಮಾಹಿತಿಯನ್ನು ನೀಡಬೇಕು. ರಸ್ತೆಗಳಲ್ಲಿ ಕಾಲ್ನಡಿಗೆ ಮೂಲಕ ತೆರಳುತ್ತಿರುವ ವಲಸಿಗರಿಗೆ ಆಹಾರ, ಆಶ್ರಯ ಸೇರಿ ಎಲ್ಲ ರೀತಿಯ ಸೌಲಭ್ಯ ನೀಡಬೇಕು ಎಂದು ನ್ಯಾಯಾಲಯ ತಿಳಿಸಿದೆ.
97 ಲಕ್ಷ ವಲಸಿಗರ ಸ್ಥಳಾಂತರ:ಮೇ 1ರಿಂದ ಶ್ರಮಿಕ ವಿಶೇಷ ರೈಲಿನಲ್ಲಿ 91 ಲಕ್ಷ ವಲಸಿಗರನ್ನು ಸ್ಥಳಾಂತರಿಸಲಾಗಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್​ಗೆ ತಿಳಿಸಿದೆ. ತಮ್ಮ ಊರಿಗೆ ಮರಳಲು ಬಯಸುವ ಎಲ್ಲ ವಲಸಿಗರು ಸ್ಥಳಾಂತರವಾಗುವವರೆಗೂ ಶ್ರಮಿಕ ವಿಶೇಷ ರೈಲು ಸೌಲಭ್ಯ ಮುಂದುವರಿಸುವುದಾಗಿ ತಿಳಿಸಲಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ವಲಸಿಗರ ಬಗ್ಗೆ ತೆಗೆದುಕೊಂಡಿರುವ ಕ್ರಮಗಳ ವರದಿ ನೀಡುವಂತೆ ನ್ಯಾಯಾಲಯ ಕೇಳಿತ್ತು.
ವಿಶೇಷ ವಿಮಾನದಲ್ಲಿ ವಲಸಿಗರ ಸ್ಥಳಾಂತರ: ಮುಂಬೈನಲ್ಲಿ ಸಿಲುಕಿದ್ದ ಜಾರ್ಖಂಡ ಮೂಲದ ವಲಸಿಗರನ್ನು ಗುರುವಾರ ವಿಶೇಷ ವಿಮಾನದ ಮೂಲಕ ಕಳುಹಿಸಿಕೊಡಲಾಗಿದೆ. ಬೆಳಗ್ಗೆ 6 ಗಂಟೆಗೆ ಮುಂಬೈ ವಿಮಾನ ನಿಲ್ದಾಣದಿಂದ ಹೊರಟ ವಿಮಾನ 8.50ಕ್ಕೆ ರಾಂಚಿಗೆ ತಲುಪಿದೆ. ರಾಜ್ಯ ದೊಳಗೆ ವಲಸಿರನ್ನು ಹೊತ್ತೊಯ್ದ ಮೊದಲ ವಿಶೇಷ ವಿಮಾನ ಇದಾಗಿದೆ.
ಪಿಎಸ್‌ಐ ನೇಮಕಾತಿ ವಯೋಮಿತಿ ಹೆಚ್ಚಳಕ್ಕೆ ಸಚಿವ ಸಂಪುಟ ಅಸ್ತು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 5 =
Remember me
