ನವದೆಹಲಿ:ಕರೊನಾ ಸಂಕಷ್ಟದ ಸಮಯದಲ್ಲಿ ಪರೀಕ್ಷೆಗಳನ್ನು ನಡೆಸುವ ಕೇಂದ್ರ ಸರ್ಕಾರದ ನಿಲುವನ್ನು ವಿರೋಧಿಸಿ ಆರು ರಾಜ್ಯಗಳು ಸುಪ್ರೀಂ ಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿವೆ.
ಪಶ್ಚಿಮ ಬಂಗಾಳ, ಜಾರ್ಖಂಡ್, ಚತ್ತೀಸ್​ಗಢ್​, ಮಹಾರಾಷ್ಟ್ರ, ಪಂಜಾಬ್​ ಹಾಗೂ ರಾಜಸ್ಥಾನ ಸರ್ಕಾರಗಳು ಸುಪ್ರೀಂ ಕೋರ್ಟ್​ ಆಗಸ್ಟ್​ 17ರಂದು ನೀಡಿರುವ ಆದೇಶವನ್ನು ಪ್ರಶ್ನಿಸಿವೆ.
ಇದನ್ನೂ ಓದಿ;ಹಿರಿಯರು ಅಲ್ಲ, ಕಿರಿಯರೂ ಅಲ್ಲ; ಕೋವಿಡ್​ ಹರಡಲು ಇವರೇ ಕಾರಣ….!
ವೈದ್ಯಕೀಯ ಕಾಲೇಜುಗಳ ಪ್ರವೇಶಕ್ಕೆ ನಡೆಸಲಾಗುವ ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆ (ನೀಟ್​) ಸೆ.16ರಮದು ನಿಗದಿಯಾಗಿದೆ. ಪ್ರತಿಷ್ಠಿತ ಇಂಜಿನಿಯರಿಂಗ್​ ಕಾಲೇಜುಗಳಲ್ಲಿ ಕಲಿಕೆಗೆ ನಡೆಸುವ ಜೆಇಇಯನ್ನು ಸೆ. 1-6ರ ವರೆಗೆ ನಡೆಸಲಾಗುತ್ತಿದೆ.
ಆದರೆ, ಕರೊನಾ ಸಂಕಷ್ಟದ ಸಮಯದಲ್ಲಿ 28 ಲಕ್ಷ ವಿದ್ಯಾರ್ಥಿಗಳ ಭವಿಷ್ಯವನ್ನು ಅಪಾಯಕ್ಕೆ ತಳ್ಳಲು ಸಾಧ್ಯವಿಲ್ಲ. ಪರೀಕ್ಷೆಯನ್ನು ಮುಂದೂಡುವಂತೆ ರಾಜ್ಯ ಸರ್ಕಾರಗಳು ಸುಪ್ರೀಂ ಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿವೆ.
ಇದನ್ನೂ ಓದಿ;ಅಂತಿಮ ಪರೀಕ್ಷೆ ಬರೆಯಲೇ ಬೇಕು; ಯುಜಿಸಿ ನಿರ್ದೇಶನಕ್ಕೆ ಸುಪ್ರೀಂ ಕೋರ್ಟ್​ ವ್ಯಾಖ್ಯಾನವೇನು?
ಇದಕ್ಕೂ ಮುನ್ನ, ಪರೀಕ್ಷೆ ಮುಂದೂಡಿಕೆಗೆ ಇಂಜಿನಿಯರಿಂಗ್​ ಹಾಗೂ ಮೆಡಿಕಲ್​ ಕಾಲೇಜುಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್​, ವಿದ್ಯಾರ್ಥಿಗಳ ಜೀವನದ ಒಂದು ಅಮೂಲ್ಯ ವರ್ಷವನ್ನು ಹಾಳು ಮಾಡುವುದು ಸರಿಯಲ್ಲ, ಕರೊನಾ ನಡುವೆಯೂ ಬದುಕು ಸಾಗಿಸಲೇಬೇಕಿದೆ. ಹೀಗಾಗಿ ಪರೀಕ್ಷೆ ಮುಂದೂಡುವುದಿಲ್ಲ ಎಂದು ಆದೇಶ ನೀಡಿತ್ತು.
ಶುರುವಾಯ್ತು 225 ರೂ. ಬೆಲೆಯ ಕರೊನಾ ಲಸಿಕೆ ಕ್ಲಿನಿಕಲ್​ ಟ್ರಯಲ್​; ಮೈಸೂರು ಸೇರಿ 17 ಕಡೆ ಪ್ರಯೋಗ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − ten =
Remember me
