ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಐದನೇ ಹಾಗೂ ಕೊನೇ ಹಂತದ ಆರ್ಥಿಕ ಪ್ಯಾಕೇಜನ್ನು ಭಾನುವಾರ ಘೋಷಣೆ ಮಾಡಿದ್ದಾರೆ. ರಾಜ್ಯಗಳಿಗೆ ಆರ್ಥಿಕ ಹರಿವು ಹೆಚ್ಚಳ, ಕಾರ್ವಿುಕರಿಗೆ ಉದ್ಯೋಗ, ಆರೋಗ್ಯ ಕ್ಷೇತ್ರ ಸಬಲೀಕರಣ, ಶಿಕ್ಷಣ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನ ಬಳಕೆ… ಇನ್ನಿತರ ಅಂಶಗಳು ಘೋಷಣೆಯಲ್ಲಿವೆ. ಅವುಗಳ ಕುರಿತ ಸಂಕ್ಷಿಪ್ತ ವಿವರ ಇಲ್ಲಿದೆ.
ದೇಶದ ಜನರ ಆರೋಗ್ಯ ರಕ್ಷಣೆಯ ನಿಟ್ಟಿನಲ್ಲಿ ಸಾರ್ವಜನಿಕ ವೆಚ್ಚವನ್ನು ಹೆಚ್ಚಿಸಲಾಗುವುದು. ತಳ ಮಟ್ಟದ ಆರೋಗ್ಯ ಸಂಸ್ಥೆಗಳ ಮೇಲೆ ಹೆಚ್ಚಿನ ಹೂಡಿಕೆ ಮಾಡಲಾಗುತ್ತದೆ. ಭವಿಷ್ಯದಲ್ಲೂ ಯಾವುದೇ ಸಾಂಕ್ರಾಮಿಕ ರೋಗವನ್ನು ಎದುರಿಸಲು ಭಾರತವನ್ನು ಸನ್ನದ್ಧಗೊಳಿಸಲು ಅನುವಾಗುವಂತೆ ಗ್ರಾಮೀಣ ಮತ್ತು ನಗರ ಪ್ರದೇಶಗಳ ಆರೋಗ್ಯ ಕೇಂದ್ರಗಳನ್ನು ಸುಧಾರಿಸುವುದು ಹಾಗೂ ಉನ್ನತ ದರ್ಜೆಗೇರಿಸುವುದು. ಎಲ್ಲ ಜಿಲ್ಲೆಗಳಲ್ಲಿ ಸಾಂಕ್ರಾಮಿಕ ರೋಗಗಳ ಆಸ್ಪತ್ರೆ ಬ್ಲಾಕ್​ಗಳನ್ನು ನಿರ್ವಿುಸುವುದು. ಪ್ರಯೋಗಾಲಯ ಜಾಲ ಮತ್ತು ನಿಗಾ ವ್ಯವಸ್ಥೆಯನ್ನು ಬಲಪಡಿಸುವುದು. ಎಲ್ಲ ಜಿಲ್ಲೆಗಳು, ಬ್ಲಾಕ್ ಮಟ್ಟಗಳಲ್ಲಿ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯಗಳನ್ನು ಹಾಗೂ ಸಾರ್ವಜನಿಕ ಆರೋಗ್ಯ ಘಟಕಗಳನ್ನು ರೂಪಿಸಿ ಬಲಪಡಿಸುವುದು. ಸಾಂಕ್ರಾಮಿಕ ವ್ಯಾಧಿಗಳನ್ನು ನಿರ್ವಹಿಸಲು ಅವುಗಳನ್ನು ಸನ್ನದ್ಧಗೊಳಿಸುವುದು ಸರ್ಕಾರದ ಗುರಿಯಾಗಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ರಾಷ್ಟ್ರೀಯ ಸಾಂಸ್ಥಿಕ ವೇದಿಕೆಗಳ ಸಂಶೋಧನೆಗಳಿಗೆ ಪೋ›ತ್ಸಾಹ, ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಮಿಷನ್ ನೀಲನಕ್ಷೆ ಅನುಷ್ಠಾನಗೊಳಿಸುವುದು.
ಪಿಎಂ ಇ-ವಿದ್ಯಾ ಯೋಜನೆ ಜಾರಿ:ಡಿಜಿಟಲ್/ಆನ್​ಲೈನ್ ಶಿಕ್ಷಣಕ್ಕಾಗಿ ಪಿಎಂ ಇ-ವಿದ್ಯಾ ಕಾರ್ಯಕ್ರಮವನ್ನು ತಕ್ಷಣವೇ ಆರಂಭಿಸಲಾಗುವುದು. ಇದರಲ್ಲಿ ಹಲವು ಅಂಶಗಳು ಒಳಗೊಂಡಿರುತ್ತವೆ. ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಶಾಲಾ ಶಿಕ್ಷಣಕ್ಕಾಗಿ ದೀಕ್ಷಾ ಯೋಜನೆ. ಇದರನ್ವಯ ಎಲ್ಲ ತರಗತಿಗಳಿಗೆ ಇ-ಕಂಟೆಂಟ್ ಹಾಗೂ ಕ್ಯೂಆರ್ ಕೋಡ್​ಯುುಕ್ತ ಚೈತನ್ಯದಾಯಕ ಪಠ್ಯಪುಸ್ತಕ ರೂಪಿಸುವುದು. ಇದು ಏಕ ರಾಷ್ಟ್ರ-ಏಕ ಡಿಜಿಟಲ್ ವೇದಿಕೆ ಪರಿಕಲ್ಪನೆಗೆ ಅನುಗುಣವಾಗಿರುತ್ತದೆ. ಒಂದರಿಂದ ಹನ್ನೆರಡನೆ ತರಗತಿ ವರೆಗೆ ಪ್ರತಿ ತರಗತಿಗೆ ತಲಾ ಒಂದು ಟಿವಿ ಚಾನೆಲ್​ಗಳ ಆರಂಭ (ಒಂದು ತರಗತಿ-ಒಂದು ಚಾನೆಲ್). ರೇಡಿಯೊ, ಸಾಮುದಾಯಿಕ ರೇಡಿಯೊ ಮತ್ತು ಪಾಡ್​ಕಾಸ್ಟ್​ಗಳ ವ್ಯಾಪಕ ಬಳಕೆ. ಅಂಧ ಹಾಗೂ ಕಿವುಡ ವಿದ್ಯಾರ್ಥಿಗಳಿಗಾಗಿ ವಿಶೇಷ ಇ-ಕಂಟೆಂಟ್ ರೂಪಿಸಲಾಗುವುದು.
ಕರೊನಾ ಸಂಕಷ್ಟದ ಸಮಯದಲ್ಲಿ ಕೇಂದ್ರ ರಾಜ್ಯಗಳಿಗೆ ಉದಾರ ನೆರವು ನೀಡಿದೆ. ಆದಾಯದಲ್ಲಿ ತೀವ್ರ ಪ್ರಮಾಣದ ಕುಸಿತವಾದರೂ ಏಪ್ರಿಲ್ ತಿಂಗಳಲ್ಲಿ ರಾಜ್ಯಗಳ ಪಾಲಿನ 46,038 ಕೋಟಿ ರೂಪಾಯಿ ತೆರಿಗೆ ಹಣವನ್ನು ರಾಜ್ಯಗಳಿಗೆ ನೀಡಲಾಗಿದೆ. ರಾಜ್ಯಗಳ ಆದಾಯ ಕೊರತೆ ಅನುದಾನವನ್ನು (12,390 ಕೋಟಿ ರೂ) ಕೂಡ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಕ್ಲುಪ್ತ ಸಮಯದಲ್ಲಿ ನೀಡಲಾಗಿದೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಗೆ (ಮನರೇಗಾ) 40 ಸಾವಿರ ಕೋಟಿ ರೂ. ಹೆಚ್ಚುವರಿಯಾಗಿ ಒದಗಿಸಲಾಗುತ್ತದೆ. ಇದು ಒಟ್ಟು 300 ಕೋಟಿ ಮಾನವ ದಿನಗಳ ಸೃಷ್ಟಿಗೆ ನೆರವಾಗಲಿದೆ. ತವರಿಗೆ ಮರಳುತ್ತಿರುವ ವಲಸೆ ಕಾರ್ವಿುಕರ ಸಹಿತ ಹೆಚ್ಚು ಜನರಿಗೆ ಮಳೆಗಾಲದಲ್ಲೂ ಉದ್ಯೋಗ ಒದಗಿಸಲು ಇದರಿಂದ ಸಾಧ್ಯವಾಗುತ್ತದೆ. ದೊಡ್ಡ ಪ್ರಮಾಣದಲ್ಲಿ, ಬಾಳಿಕೆ ಬರುವ ಹಾಗೂ ಜಲ ಸಂರಕ್ಷಣೆ ಸಹಿತ ಜೀವನೋಪಾಯ ಆಸ್ತಿ ಸೃಜಿಸಲು ಇದು ನೆರವಾಗುತ್ತದೆ.
ರಾಜ್ಯಗಳಿಗೆ ಸಾಲ ಕೊಡುವಾಗ ರಾಜ್ಯ ಮಟ್ಟದ ಸುಧಾರಣೆಗಳನ್ನು ತರಬೇಕೆಂಬ ಷರತ್ತನ್ನು ವಿಧಿಸಲಾಗುತ್ತಿದೆ. ಹಣಕಾಸು ಆಯೋಗದ ಶಿಫಾರಸು ಸುಧಾರಣೆಗಳೂ ಇದರಲ್ಲಿವೆ.
ಕಂಪನಿಗಳು ಎಸಗುವ ಕೆಲವು ತಪ್ಪುಗಳನ್ನು ಕ್ರಿಮಿನಲ್ ಪ್ರಕರಣಗಳೆಂದು ಪರಿಗಣಿಸುವ ಕಾನೂನನ್ನು ತಿದ್ದುಪಡಿ ಮಾಡಿ ಕಂಪನಿಗಳಿಗೆ ಅನುಕೂಲ ಕಲ್ಪಿಸಲು ನಿರ್ಧರಿಸಲಾಗಿದೆ. ಕಾರ್ಪೆರೇಟ್ ಸಾಮಾಜಿಕ ಉಪಕ್ರಮ (ಸಿಎಸ್​ಆರ್) ಕುರಿತ ವರದಿಯಲ್ಲಿ ಕೊರತೆ, ಮಂಡಳಿಯ ವರದಿಗಳಲ್ಲಿ ಲೋಪ, ವರದಿಗಳ ಸಲ್ಲಿಕೆಯಲ್ಲಿ ತಪ್ಪು, ವಾರ್ಷಿಕ ಸರ್ವಸದಸ್ಯರ ಸಭೆ (ಎಜಿಎಂ) ನಡೆಸುವಲ್ಲಿ ವಿಳಂಬ ಮೊದಲಾದವನ್ನು ಕ್ರಿಮಿನಲ್ ಅಪರಾಧಗಳಲ್ಲ ಎಂದು ಪರಿಗಣಿಸಲಾಗುವುದು. ಈ ತಿದ್ದುಪಡಿಗಳು ಕ್ರಿಮಿನಲ್ ನ್ಯಾಯಾಲಯ ಹಾಗೂ ರಾಷ್ಟ್ರೀಯ ಕಂಪನಿಗಳ ಕಾನೂನು ನ್ಯಾಯಮಂಡಳಿಗಳಲ್ಲಿ ಮೊಕದ್ದಮೆಗಳು ಹೆಚ್ಚು ಪ್ರಮಾಣದಲ್ಲಿ ಬಾಕಿಯಿರುವ ಸಮಸ್ಯೆಯನ್ನು ಬಗೆಹರಿಸುತ್ತದೆ. 7 ಅಪರಾಧಗಳನ್ನು ಕೈಬಿಡಲಾಗಿದ್ದು 5 ಅಪರಾಧಗಳನ್ನು ಪರ್ಯಾಯ ಕಾನೂನು ಚೌಕಟ್ಟಿನಲ್ಲಿ ಪರಿಹರಿಸಲಾಗುತ್ತದೆ.
ಜಗತ್ತು ಕಳೆದ ಕೆಲವು ದಶಕಗಳಲ್ಲಿ ಬದಲಾಗಿದ್ದು ಅದಕ್ಕೆ ತಕ್ಕಂತೆ ಎಲ್ಲ ವಲಯಗಳನ್ನು ಖಾಸಗಿಗೆ ತೆರೆಯುವಂಥ ಸಮಗ್ರ ನೀತಿ ಅಗತ್ಯ. ಈ ಹಿನ್ನೆಲೆಯಲ್ಲಿ ಸರ್ಕಾರ ಒಂದು ಹೊಸ ನೀತಿಯನ್ನು ಶೀಘ್ರವೇ ಪ್ರಕಟಿಸಲಿದೆ. ಅದರ ಪ್ರಮುಖ ಅಂಶಗಳು ಹೀಗಿರಲಿವೆ:
ಕಾರ್ಪೋರೇಟ್​ಗಳಿಗೆ ಕಂಪನಿಗಳು ತಮ್ಮ ವ್ಯವಹಾರಗಳನ್ನು ಸುಗಮವಾಗಿ ನಡೆಸಿಕೊಂಡು ಹೋಗಲು (ಇಒಡಿಬಿ) ಕ್ರಮಕೈಗೊಳ್ಳವುದು. ಉದ್ಯಮವೊಂದರ ಆರಂಭದ ಸಂಬಂಧಿತ ಸರಳೀಕೃತ ನಿಯಮಗಳು ಹಾಗೂ ದಿವಾಳಿತನ ಇತ್ಯರ್ಥಪಡಿಸುವಲ್ಲಿನ ಸುಧಾರಣೆ ಭಾರತದ ಒಟ್ಟಾರೆ ಇಒಡಿಬಿ ರ‍್ಯಾಂಕಿಂಗ್ ಸುಧಾರಣೆಯಾಗಲು ಕಾರಣವಾಗಿವೆ.
ದೇಶದಲ್ಲಿ ವ್ಯಾಪಾರ ವ್ಯವಹಾರಗಳನ್ನು ಸುಗಮವಾಗಿ ನಡೆಸಲು ಇನ್ನಷ್ಟು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ದಿವಾಳಿತನ ಪ್ರಕ್ರಿಯೆ ಆರಂಭದ ಕನಿಷ್ಠ ಮಿತಿಯನ್ನು 1 ಲಕ್ಷ ರೂ.ನಿಂದ 1 ಕೋಟಿ ರೂ.ಗೆ ಏರಿಸುವುದು. ಇದರಿಂದ ಅತಿಸಣ್ಣ, ಸಣ್ಣ ಹಾಗೂ ಮಧ್ಯಮ ಪ್ರಮಾಣದ ಉದ್ಯಮಗಳಿಗೆ (ಎಂಎಸ್​ಎಂಇ) ನೆರವಾಗುತ್ತದೆ. ಹೊಸದಾಗಿ ದಿವಾಳಿ ಪ್ರಕ್ರಿಯೆ ಆರಂಭಿಸುವುದನ್ನು ಸಾಂಕ್ರಾಮಿಕ ರೋಗದ ಪರಿಸ್ಥಿತಿ ಅವಲಂಬಿಸಿ ಒಂದು ವರ್ಷ ರದ್ದು ಪಡಿಸಲಾಗುತ್ತದೆ. ಕೋವಿಡ್-19 ಸಂಬಂಧಿತ ಸಾಲವನ್ನು ದಿವಾಳಿ ಕಾನೂನಿನ ಅನ್ವಯದ ‘ಸುಸ್ತಿದಾರ’ ವ್ಯಾಖ್ಯಾನದಿಂದ ಹೊರಗಿಡುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ನೀಡುವುದು.
ರಾಜ್ಯದಲ್ಲಿ ಕೆಎಸ್​ಆರ್​ಟಿಸಿ ಬಸ್​ಗಳ ಸಂಚಾರ ಶೀಘ್ರವೇ ಆರಂಭ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 2 =
Remember me
