ನವದೆಹಲಿ: ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸುವ ಡಾಕ್ಟರ್​ಗಳಿಗೆ ಪಿಜಿ ಅಡ್ಮಿಷನ್​ನಲ್ಲಿ ಕೋಟಾ ನಿರ್ಧರಿಸುವ ಅಧಿಕಾರ ಆಯಾ ರಾಜ್ಯ ಸರ್ಕಾರಗಳದ್ದು ಎಂದು ಸುಪ್ರೀಂ ಕೋರ್ಟ್ ಸೋಮವಾರ ಸ್ಪಷ್ಟಪಡಿಸಿದೆ.
ನ್ಯಾಯಮೂರ್ತಿ ಅರುರ್ಣ ಮಿಶ್ರಾ ನೇತೃತ್ವದ ಪಂಚ ಸದಸ್ಯ ಸಾಂವಿಧಾನಿಕ ಪೀಠ ಈ ತೀರ್ಪು ನೀಡಿದೆ. ಮೀಸಲಾತಿಯಲ್ಲಿ ಬದಲಾವಣೆ ಮಾಡುವ ಶಾಸನಾತ್ಮಕ ಅಧಿಕಾರ ಇರುವಂಥದ್ದು ರಾಜ್ಯಗಳಿಗೆ. ಅವುಗಳು ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಬಹುದು ಎಂದು ನ್ಯಾಯಪೀಠ ಸ್ಪಷ್ಟವಾಗಿ ಹೇಳಿದೆ.
ಇದನ್ನೂ ಓದಿ:ನ್ಯಾಯಾಂಗ ನಿಂದನೆ ಕೇಸ್ – ಪ್ರಶಾಂತ್ ಭೂಷಣ್​ಗೆ 1 ರೂಪಾಯಿ ದಂಡ
ಮೆಡಿಕಲ್ ಕೌನ್ಸಿಲ್​ ಆಫ್ ಇಂಡಿಯಾ ಶಾಸನಬದ್ಧ ಸಂಸ್ಥೆಯೇ ಹೊರತು, ಅದಕ್ಕೆ ಮೀಸಲಾತಿ ನೀಡುವ ಅಧಿಕಾರವಿಲ್ಲ. ಮೆಡಿಕಲ್ ಕೌನ್ಸಿಲ್​ ಆಫ್ ಇಂಡಿಯಾ ಪ್ರಕಟಿಸಿರುವ ಮೀಸಲು ನಿಯಮ ಅಸಾಂವಿಧಾನಿಕ ಎಂದು ಹೇಳಿದ ನ್ಯಾಯಪೀಠ ಆ ನಿಯಮವನ್ನು ಅನೂರ್ಜಿತಗೊಳಿಸಿದೆ.
ಇದನ್ನೂ ಓದಿ:ಕರೊನಾ ಹೆಚ್ಚಳಕ್ಕೆ ಗಂಟೆ ಬಾರಿಸಿ, ಚಪ್ಪಾಳೆ ತಟ್ಟಿದ್ದೇ ಕಾರಣ ಎಂದ ದಿನೇಶ್‌ ಗುಂಡೂರಾವ್‌: ಕಮೆಂಟಿಗರು ಕಿಡಿಕಿಡಿ…
ತಮಿಳುನಾಡು ಮೆಡಿಕಲ್ ಆಫೀಸರ್ಸ್​ ಅಸೋಸಿಯೇಷನ್ ಮತ್ತು ಇತರರು ಎಂಸಿಐ ತೀರ್ಮಾನದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯಪೀಠ ಈ ತೀರ್ಪು ನೀಡಿದೆ. ನ್ಯಾಯಪೀಠದಲ್ಲಿ ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ, ವಿನೀತ್​ ಶರಣ್​, ಎಂ.ಆರ್.ಶಾ, ಅನಿರುದ್ಧಾ ಬೋಸ್ ಕೂಡ ಇದ್ದರು. (ಏಜೆನ್ಸೀಸ್)
ಮುಂದ್ರಾ ಡಾಕ್​ಯಾರ್ಡ್​ನಲ್ಲಿದ್ದ ಐಎಸ್​ಐ ಏಜೆಂಟ್​ ಎನ್​ಐಎ ಬಲೆಗೆ ಬಿದ್ದ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:16 − 10 =
Remember me
