ನವದೆಹಲಿ:ಲಾಕ್​ಡೌನ್​ ಹಿನ್ನೆಲೆಯಲ್ಲಿ ಸರ್ಕಾರಗಳ ಬೊಕ್ಕಸಕ್ಕೆ ತುಂಬಲಾರದ ನಷ್ಟ ಉಂಟಾಗಿದ್ದು, ಅದನ್ನು ಭರ್ತಿ ಮಾಡುವ ಸಂಬಂಧ ಮದ್ಯದಂಗಡಿಗಳನ್ನು ತೆರೆಯಲು ಹಲವು ರಾಜ್ಯ ಸರ್ಕಾರಗಳೇನೋ ಆದೇಶ ಹೊರಡಿಸಿಬಿಟ್ಟವು. ಅದರಂತೆ ಅಂಗಡಿಗಳೂ ತೆರೆದವು. ಬೊಕ್ಕಸವೂ ಭರ್ತಿಯಾಗುತ್ತ ಬಂದಿದೆ.
ಅದೇ ಇನ್ನೊಂದೆಡೆ, ಕರೊನಾ ವೈರಸ್​ ಹರಡುವಿಕೆಯ ಭೀತಿಯ ಈ ದಿನಗಳಲ್ಲಿ, ಮದ್ಯದಂಗಡಿ ತೆರೆದಿರುವುದಕ್ಕೆ ತೀವ್ರ ಆಕ್ಷೇಪಗಳೂ ಬರುತ್ತಿವೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ, ಮದ್ಯದ ನಶೆಯಲ್ಲಿ ಏನು ಮಾಡುತ್ತಿದ್ದೇವೆ ಎಂಬುದನ್ನು ತಿಳಿಯದೇ ವೈರಸ್​ ಹರಡುವಲ್ಲಿ ಎಣ್ಣೆಪ್ರಿಯರು ಬಹುದೊಡ್ಡ ಪಾತ್ರ ವಹಿಸುತ್ತಿದ್ದಾರೆ ಎನ್ನುವುದೂ ನಿಜವೇ.
ಇದನ್ನೂ ಓದಿ:ತಾಯಿಯನ್ನು ಜೀವಂತ ಸಮಾಧಿ ಮಾಡಿದ ಮಗ, 3 ದಿನಗಳ ನಂತರ ಕಾದಿತ್ತೊಂದು ಅಚ್ಚರಿ!
ಕರೊನಾ ಸೋಂಕನ್ನು ತಾವಷ್ಟೇ ತಂದುಕೊಳ್ಳುವುದಲ್ಲದೇ, ಅವರಿಗೆ ಸಮಾಜಕ್ಕೂ ಅಪಾಯ ಇರುವ ಹಿನ್ನೆಲೆಯಲ್ಲಿ, ಮದ್ಯದಂಗಡಿಗಳನ್ನು ಮುಚ್ಚಲು ಸರ್ಕಾರಗಳಿಗೆ ಆದೇಶಿಸುವಂತೆ ಕೋರಿ ಸುಪ್ರೀಂಕೋರ್ಟ್​ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು.
ಆದರೆ ಈ ರೀತಿ ಸರ್ಕಾರಗಳಿಗೆ ಆದೇಶಿಸಲು ನಿರಾಕರಿಸಿ ಕೋರ್ಟ್​, ವೈರಸ್​ ತಡೆಗಟ್ಟುವ ನಿಟ್ಟಿನಲ್ಲಿ ಮದ್ಯವನ್ನು ನೇರವಾಗಿ ಮಾರಾಟ ಮಾಡದೆ ಮನೆಗೆ ಸರಬರಾಜು ಮಾಡುವ ಬಗ್ಗೆ ರಾಜ್ಯ ಸರ್ಕಾರಗಳು ಪರಿಶೀಲನೆ ಮಾಡಬೇಕು. ಸಾಮಾಜಿಕ ಅಂತರ ಕಾಯ್ದಕೊಳ್ಳುವಿಕೆ ಸೇರಿದಂತೆ ಲಾಕ್​ಡೌನ್​ ನಿಯಮಗಳ ಅನ್ವಯ ಮದ್ಯಪೂರೈಕೆ ಮಾಡಲು ಹೇಗೆ ಸಾಧ್ಯ ಎಂಬ ಬಗ್ಗೆ ಸರ್ಕಾರಗಳು ಚಿಂತನೆ ಮಾಡಬೇಕು ಎಂದಿದೆ.
ಇದನ್ನೂ ಓದಿ:ಕಂದಮ್ಮಗಳನ್ನೂ ಬಿಡದ ಕರೊನಾ ಮಾರಿ: ಒಂದೇ ದಿನದಲ್ಲಿ ನಾಲ್ಕು ನಗರ ತತ್ತರ!
ಮದ್ಯದಂಗಡಿ ತೆರೆದಿರುವುದರಿಂದ ಆಗುತ್ತಿರುವ ಹಾಗೂ ಮುಂದೆ ಆಗಬಹುದಾದ ಅನಾಹುತಗಳ ಬಗ್ಗೆ ಎಚ್ಚರಿಸಿದ್ದ ಅರ್ಜಿದಾರರು, ಅಂಗಡಿ ತೆರೆದಿರುವುದಕ್ಕೆ ಅರ್ಜಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಕುರಿತ ವಿಚಾರಣೆಯನ್ನು ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆಸಿದ ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ಪೀಠ, “ಈ ಪಿಐಎಲ್ ಗೆ ಸಂಬಂಧಿಸಿದಂತೆ ನಾವು ಯಾವುದೇ ಆದೇಶ ನೀಡುವುದಿಲ್ಲ.
ಆದರೆ ರಾಜ್ಯ ಸರ್ಕಾರಗಳು ಸಾಮಾಜಿಕ ಅಂತರವನ್ನು ಜನರು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಮದ್ಯವನ್ನು ನೇರವಾಗಿ ಮಾರಾಟ ಮಾಡದೇ ಮನೆಗೆ ಸರಬರಾಜು ಮಾಡುವ ಬಗ್ಗೆ ಆಲೋಚಿಸಬೇಕು” ಎಂದು ತಿಳಿಸಿದೆ.
ಇದನ್ನೂ ಓದಿ:ಊರಿಗೆ ಹೋಗುವ ಧಾವಂತ- ಅಪಘಾತಗಳಿಗೆ ಜೀವಕೊಟ್ಟ ವಲಸೆ ಕಾರ್ಮಿಕರು!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × five =
Remember me
