ನವದೆಹಲಿ:ಮಹಾಮಾರಿ ಕರೊನಾ ವೈರಸ್​ ಸೋಂಕಿನಿಂದ ಮೃತಪಟ್ಟವರಿಗೆ ಆಯಾ ರಾಜ್ಯ ಸರ್ಕಾರಗಳು ತಲಾ 50 ಸಾವಿರ ರೂಪಾಯಿ ಪರಿಹಾರವನ್ನು ನೀಡಲಿವೆ ಎಂದು ಕೇಂದ್ರ ಸರ್ಕಾರ, ಸುಪ್ರೀಂಕೋರ್ಟ್​ಗೆ ಮಾಹಿತಿ ನೀಡಿದೆ.
ಕರೊನಾದಿಂದ ಇಲ್ಲಿಯವರೆಗೆ ಮೃತಪಟ್ಟಿರುವ ಕುಟುಂಬಗಳಿಗೆ ಮಾತ್ರವಲ್ಲದೆ, ಮುಂದೆಯು ಕೋವಿಡ್​ ಮಾರಿಗೆ ತುತ್ತಾದವರಿಗೂ 50 ಸಾವಿರ ರೂ. ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಉನ್ನತ ನ್ಯಾಯಾಲಯ ಆದೇಶಿಸಿದೆ.
ರಾಜ್ಯ ವಿಪತ್ತು ನಿರ್ವಹಣಾ ನಿಧಿಯಿಂದ ಆಯಾ ರಾಜ್ಯಗಳು ಕರೊನಾ ಸಂತ್ರಸ್ತ ಕುಟುಂಬಗಳಿಗೆ ಪರಿಹಾರವನ್ನು ಭರಿಸಲಿವೆ. ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಅಥವಾ ಜಿಲ್ಲಾಡಳಿತ ಮುಖೇನ ಪರಿಹಾರ ವಿತರಣಾ ಪ್ರಕ್ರಿಯೆ ನಡೆಯಲಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೊರ್ಟ್​ಗೆ ಹೇಳಿದೆ.
ಭಾರತದಲ್ಲಿ 2020ರ ಜನವರಿಯಲ್ಲಿ ಕೋವಿಡ್ ಸ್ಫೋಟ ಆದಾಗಿನಿಂದ ಇಲ್ಲಿಯವರೆಗೂ 4.45 ಲಕ್ಷಕ್ಕೂ ಅಧಿಕ ಮಂದಿ ಕರೊನಾ ಮಾರಿಗೆ ಬಲಿಯಾಗಿದ್ದಾರೆ. ಈಗಾಗಲೇ ದೇಶದಲ್ಲಿ ಒಂದು ಮತ್ತು ಎರಡನೇ ಅಲೆ ಬಂದು ಹೋಗಿದ್ದು, ಲಕ್ಷಾಂತರ ಮಂದಿಯನ್ನು ಬಲಿ ಪಡೆದುಕೊಂಡಿದೆ. ಇದೀಗ ಮೂರನೇ ಅಲೆ ಭೀತಿ ಶುರುವಾಗಿದ್ದು, ಮುಂದೆ ಯಾರೇ ಕರೊನಾದಿಂದ ಮೃತಪಟ್ಟರು ಅವರಿಗೂ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್​ ಆದೇಶಿಸಿದೆ.
ಮೃತ ಕುಟುಂಬದವರು ರಾಜ್ಯ ಸರ್ಕಾರ ಬಿಡುಗಡೆ ಮಾಡುವ ಸಂಬಂಧಪಟ್ಟ ಅರ್ಜಿಯನ್ನು ಪಡೆದು, ಅರ್ಜಿಯಲ್ಲಿ ಕೇಳಲಾದ ದಾಖಲಾತಿಗಳ ಸಮೇತ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಬೇಕಾಗಿದೆ. ಅರ್ಜಿ ಸಲ್ಲಿಸಿದ 30 ದಿನಗಳ ಒಳಗೆ ಪರಿಹಾರದ ಮೊತ್ತ ಬಿಡುಗಡೆಯಾಗಲಿದೆ. ಆಧಾರ್​ ಲಿಂಕ್​ ಆದ ಬ್ಯಾಂಕ್​ ಖಾತೆಗಳಿಗೆ ನೇರವಾಗಿ ಪರಿಹಾರದ ಮೊತ್ತ ಜಮಾ ಆಗಲಿದೆ ಎಂದು ಅಫಿಡೆವಿಟ್​ನಲ್ಲಿ ಕೇಂದ್ರ ಸರ್ಕಾರ ತಿಳಿಸಿದೆ.(ಏಜೆನ್ಸೀಸ್​)
ಅಪ್ಪಿತಪ್ಪಿ ಗೂಗಲ್​ನಲ್ಲಿ ಇವುಗಳನ್ನು ಹುಡುಕಬೇಡಿ: ಒಂದು ವೇಳೆ ಹುಡುಕಿದ್ರೆ ಬೆಲೆ ತೆರಬೇಕಾಗುತ್ತೆ ಹುಷಾರ್..!​

ಸಮಂತಾ-ನಾಗಚೈತನ್ಯ ಮನಸ್ತಾಪಕ್ಕೆ ಇದೇ ಕಾರಣನಾ? ಟಾಲಿವುಡ್​ ಅಂಗಳದಲ್ಲಿ ಹೀಗೊಂದು ಬಿಸಿ ಬಿಸಿ ಚರ್ಚೆ..!

ಭಾರತದ ಇನ್ನೆರಡು ಬೀಚ್​​ಗಳಿಗೆ ಅಂತಾರಾಷ್ಟ್ರೀಯ ಬ್ಲೂ ಫ್ಲ್ಯಾಗ್​ ಮಾನ್ಯತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − 2 =
Remember me
