ಉತ್ತರಪ್ರದೇಶ:ಭಗವಾನ್ ಕೃಷ್ಣನ ವಿಗ್ರಹವನ್ನು ನೆಲದಡಿಯಲ್ಲಿ ಹೂಳಲಾಗಿದೆ. ನನ್ನ ಕನಸಿನಲ್ಲಿ ವಿಗ್ರಹ ಕಾಣಿಸಿಕೊಂಡಿದೆ  ಎಂದು ಬಾಲಕಿ ಹೇಳಿದ ಜಾಗ ಅಗೆದಾಗ ಅಚ್ಚರಿಯ ಸಂಗತಿಯೊಂದುಶಹಜಹಾನ್‌ಪುರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ನಿಗೋ ಪ್ರದೇಶದ 10 ವರ್ಷದ ಬಾಲಕಿ ತನ್ನ ಕನಸಿನಲ್ಲಿ ಕೃಷ್ಣನನ್ನು ಕಂಡಿದ್ದೇನೆ. ಭಗವಾನ್ ಕೃಷ್ಣನ ವಿಗ್ರಹವನ್ನು ನೆಲದಡಿಯಲ್ಲಿ ಹೂಳಲಾಗಿದೆ ಎಂದು ಹೇಳಿದ್ದಾಳೆ. ಬಾಲಕಿಯ ಕನಸನ್ನು ನಂಬಿ ಮಣ್ಣು ಅಗೆದ ಸ್ಥಳೀಯರಿಗೆ ಅಚ್ಚರಿ ಮೂಡಿದೆ. ಯಾಕೆಂದರೆ ಹುಡುಗಿ ಹೇಳಿದ ಜಾಗದಲ್ಲಿ ದೇವರ ವಿಗ್ರಹ ಸಿಕ್ಕಿದೆ.
ವಿನೋದ್ ಸಿಂಗ್ ಅವರ ಮಗಳು ಪೂಜಾಗೆ ಒಂದು ಕನಸು ಬಿದ್ದಿತ್ತು. ಜಿಂದ್‌ಪುರ ಗ್ರಾಮದ ಕಾಲುವೆಯ ಸಮೀಪವಿರುವ ಧಾರ್ಮಿಕ ಸ್ಥಳವೊಂದರ ಬಳಿಯ ನೆಲದಲ್ಲಿ ವಿಗ್ರಹವಿದೆ ಎಂದು ಕನಸಿನಲ್ಲಿ ಕಾಣಿಸಿಕೊಂಡಿದೆ. ತನ್ನ ಕನಸಿನ ಬಗ್ಗೆ ಕುಟುಂಬದ ಸದಸ್ಯರಿಗೂ ತಿಳಿಸಿದ್ದಾಳೆ. ಆದರೆ ಕುಟುಂಬದವರು ಸೇರಿದಂತೆ ಯಾರೂ ಆಕೆಯ ಮಾತಿಗೆ ಗಮನ ಕೊಡಲಿಲ್ಲ. ಪೂಜಾ ತನ್ನ ಕನಸನ್ನು ನಿಜವೆಂದು ನಂಬಿದ್ದಳು. ಹಾಗಾಗಿ ತಾನು ಹೇಳಿದ ಜಾಗದಲ್ಲಿ ವಿಗ್ರಹ ತೋಡುವವರೆಗೂ ಏನನ್ನೂ ತಿನ್ನುವುದಿಲ್ಲ ಎಂದು ಪೂಜಾ ಉಪವಾಸ ಸತ್ಯಾಗ್ರಹ ಆರಂಭಿಸಿದಳು. ಏಳು ದಿನಗಳ ಕಾಲ ಪೂಜಾ ಉಪವಾಸ ನಡೆಸಿದಳು. ಆಕೆಯ ಮಾತನ್ನು ನಂಬಿದ ಕುಟುಂಬಸ್ಥರು ಗ್ರಾಮಸ್ಥರೊಂದಿಗೆ ಮುಂಜಾಗ್ರತಾ ಕ್ರಮವಾಗಿ ದರ್ಗಾ ಬಳಿ ಪೊಲೀಸ್ ಬಂದೋಬಸ್ತ್‌ನೊಂದಿಗೆ ನೆಲ ಅಗೆದು ಶೋಧ ಮಾಡಿದರು.
ನೆಲ ಅಗೆದ ನಂತರ ಶ್ರೀಕೃಷ್ಣನ ವಿಗ್ರಹ ಕಂಡುಬಂದಿತು. ನಂತರ ಈ ವಿಗ್ರಹವನ್ನು ಗ್ರಾಮಸ್ಥರು ಅಲ್ಲಿಂದ ಎರಡೂವರೆ ಕಿಲೋಮೀಟರ್ ದೂರದಲ್ಲಿರುವ ಗದ್ದೆಯಲ್ಲಿ ಪ್ರತಿಷ್ಠಾಪಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − five =
Remember me
