ನವದೆಹಲಿ:ಸಂಸತ್ತಿನ ಆವರಣದ ಮುಂಭಾಗದಲ್ಲಿದ್ದ ಮಹಾತ್ಮಗಾಂಧಿ, ಬಿ.ಆರ್.ಅಂಬೇಡ್ಕರ್ ಮತ್ತು ಛತ್ರಪತಿ ಶಿವಾಜಿ ಸೇರಿದಂತೆ ಇತರರ ಪ್ರತಿಮೆಗಳನ್ನು ಸಂಸತ್ತಿನ ಪುನರಾಭಿವೃದ್ಧಿ ಯೋಜನೆ ಭಾಗವಾಗಿ ಸ್ಥಳಾಂತರಿಸಲಾಗಿದ್ದು ಈ ಕ್ರಮವನ್ನು ಕಾಂಗ್ರೆಸ್​​ ಖಂಡಿಸಿದೆ.
ಇದನ್ನು ಓದಿ:ಮೋದಿ 3.0 ಪ್ರಮಾಣ ವಚನ ಸಮಾರಂಭಕ್ಕೆ ಯಾರೆಲ್ಲಾ ಬರಲಿದ್ದಾರೆ?: ಇಲ್ಲಿದೆ ಜಾಗತಿಕ ನಾಯಕರ ಪಟ್ಟಿ
ಬುಡಕಟ್ಟು ನಾಯಕ ಬಿರ್ಸಾ ಮುಂಡಾ ಮತ್ತು ಮಹಾರಾಣಾ ಪ್ರತಾಪ್ ಅವರ ಪ್ರತಿಮೆಗಳನ್ನು ಹಳೆಯ ಸಂಸತ್ತಿನ ಕಟ್ಟಡ ಮತ್ತು ಸಂಸತ್ತಿನ ಗ್ರಂಥಾಲಯದ ನಡುವಿನ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಈಗ ಎಲ್ಲ ಪ್ರತಿಮೆಗಳು ಒಂದೇ ಸ್ಥಳದಲ್ಲಿವೆ.
ಸಂಸತ್ ಭವನದ ಪ್ರಮುಖ ಸ್ಥಳಗಳಿಂದ ಛತ್ರಪತಿ ಶಿವಾಜಿ, ಮಹಾತ್ಮಗಾಂಧಿ ಮತ್ತು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಗಳನ್ನು ತೆಗೆದುಹಾಕಲಾಗಿದೆ. ಇದು ಅಮಾನುಷ ಎಂದು ಕಾಂಗ್ರೆಸ್​​ ಪ್ರಧಾನ ಕಾರ್ಯದರ್ಶಿ ಜೈರಾಮ್​ ರಮೇಶ್​ ಟೀಕಿಸಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಮಹಾರಾಷ್ಟ್ರದ ಮತದಾರರು ಬಿಜೆಪಿಗೆ ಮತ ಹಾಕಿಲ್ಲ. ಆದ್ದರಿಂದ ಶಿವಾಜಿ ಮತ್ತು ಅಂಬೇಡ್ಕರ್ ಅವರ ಪ್ರತಿಮೆಗಳನ್ನು ಸಂಸತ್ತಿನ ಮೂಲ ಸ್ಥಳದಿಂದ ತೆಗೆದುಹಾಕಿದ್ದಾರೆ ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್‌ನ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ವಾಗ್ದಾಳಿ ನಡೆಸಿದರು.
ಹೊಸದಾಗಿ ಆಯ್ಕೆಯಾದ ಸಂಸದರ ಮೊದಲ ಅಧಿವೇಶನಕ್ಕಾಗಿ ಸಂಕೀರ್ಣವನ್ನು ನವೀಕರಿಸಲು ಸಂಸತ್ತಿನಲ್ಲಿ ಪುನರಾಭಿವೃದ್ಧಿ ಯೋಜನೆಯನ್ನು ಆರಂಭಿಸಲಾಗಿದೆ. ನಾಲ್ಕು ಪ್ರತ್ಯೇಕ ಕಟ್ಟಡಗಳನ್ನು ಒಳಗೊಂಡಿರುವ ಸಂಪೂರ್ಣ ಸಂಕೀರ್ಣವನ್ನು ಏಕೀಕರಿಸುವ ಕೆಲಸ ನಡೆಯುತ್ತಿದ್ದು, ಜೂನ್‌ನಲ್ಲಿ ಸಂಸತ್ತಿಗೆ ಹೊಸ ರೂಪ ನೀಡಲಾಗುವುದು. ಸಂಸತ್ತಿನ ಹೊರ ಪ್ರದೇಶಗಳ ಪುನರಾಭಿವೃದ್ಧಿಯ ಭಾಗವಾಗಿ ಮಹಾತ್ಮ ಗಾಂಧಿ, ಶಿವಾಜಿ ಮತ್ತು ಜ್ಯೋತಿಬಾ ಫುಲೆ ಸೇರಿ ರಾಷ್ಟ್ರೀಯ ನಾಯಕರ ಪ್ರತಿಮೆಗಳನ್ನು ಸ್ಥಳಾಂತರಿಸಲಾಗಿದೆ. ಇದನ್ನು ಸಂವಿಧಾನ ಭವನ ಎಂದು ಹೆಸರಿಸಲಾಗಿದೆ ಎಂದು ಎಂದು ಬಿಜೆಪಿ ಮೂಲಗಳು ತಿಳಿಸಿವೆ. (ಏಜೆನ್ಸೀಸ್​)
ಮಸಾಲೆ ಪದಾರ್ಥಗಳಲ್ಲಿ ಕಲಬೆರೆಕೆ ಚಿಂತೆಯೇ: ಅಸಲಿಯೋ ಅಥವಾ ನಕಲಿಯೋ ಎಂದು ಗುರುತಿಸುವುದು ಹೀಗೆ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:4 × one =
Remember me
