ಗುವಾಹಟಿ:ಈಶಾನ್ಯ ರಾಜ್ಯಗಳಲ್ಲಿ ಮತಾಂತರದ ಪಿಡುಗು ಅವ್ಯಾಹತವಾಗಿದ್ದು, ಬದಲಾದ ರಾಜಕೀಯ ಸನ್ನಿವೇಶದ ಕಾರಣ ಬಲವಂತದ, ಆಮಿಷ ಮತಾಂತರಕ್ಕೆ ಅಡ್ಡಿ ಉಂಟಾಗಿದೆ. ಆದಾಗ್ಯೂ, ಇದುವರೆಗಿನ ವಾಡಿಕೆಯಂತೆ ಹಿಂದುಗಳನ್ನು ಕ್ರಿಸ್​ಮಸ್ ಆಚರಣೆಯಲ್ಲಿ ತೊಡಗಿಸಿಕೊಳ್ಳುವುದಕ್ಕೆ ಹಿಂದು ಸಮುದಾಯದಿಂದಲೇ ವಿರೋಧ ವ್ಯಕ್ತವಾಗ ತೊಡಗಿದೆ.
ಅಸ್ಸಾಂನಲ್ಲಿ ಬಜರಂಗ ದಳದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಿಥು ನಾಥ್ ಹಿಂದುಗಳಿಗೆ ಎಚ್ಚರಿಕೆಯ ಮನವಿಯೊಂದನ್ನು ಮಾಡಿರುವುದೀಗ ರಾಷ್ಟ್ರಮಟ್ಟದ ಗಮನಸೆಳೆದಿದೆ. ಮಿಥು ನಾಥ್ ಅವರ ವಿಡಿಯೋ ವೈರಲ್ ಆಗಿದೆ. ಅದರಲ್ಲಿರುವ ಸಂದೇಶ ಹೀಗಿದೆ – ನೀವು ಹಿಂದುಗಳೇ ಆಗಿದ್ದರೆ ಕ್ರಿಸ್​ಮಸ್ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಬೇಡಿ. ಚರ್ಚ್​ಗಳಿಗೆ ಹೋಗಬೇಡಿ. ಒಂದೊಮ್ಮೆ ಹೋದರೆ ಮುಂದಾಗುವ ಪರಿಣಾಮಗಳನ್ನು ನೀವು ವೈಯಕ್ತಿವಾಗಿಯೆ ಎದುರಿಸಬೇಕಾಗುತ್ತದೆ. ನೆರವಿಗೆ ಹಿಂದು ಸಮುದಾಯದವರು ಸಿಗಲಾರರು.
ಇದನ್ನೂ ಓದಿ:ಹೈಸ್ಕೂಲ್​ ಮಕ್ಕಳಿಗೆ ಇಲ್ಲಿದೆ ಮಹತ್ವದ ಮಾಹಿತಿ: ಸಂವೇದಾ ಇ-ಕ್ಲಾಸ್​ ವೇಳೆ ಬದಲು
ಮೇಘಾಲಯದ ಶಿಲ್ಲಾಂಗ್​ನಲ್ಲಿ ಕ್ರಿಶ್ಚಿಯನ್ ಪ್ರಾಬಲ್ಯದ ಪ್ರದೇಶದಲ್ಲಿದ್ದ ರಾಮಕೃಷ್ಣ ಮಠಕ್ಕೆ ಸೇರಿದ ವಿವೇಕಾನಂದ ಕೇಂದ್ರವನ್ನು ಅವರು ಮುಚ್ಚಿಸಿದ್ದಾರೆ. ಇದು ಸಹಿಷ್ಣುತೆಯ ಲಕ್ಷಣವಲ್ಲ. ಅವರಿಗೆ ಪರಧರ್ಮ ಸಹಿಷ್ಣುತೆ ಇಲ್ಲ ಎಂದಾದಲ್ಲಿ, ಅವರ ಧಾರ್ಮಿಕ ಆಚರಣೆಗಳಲ್ಲಿ ನಮ್ಮವರು ಪಾಲ್ಗೊಳ್ಳುವುದೂ ಸರಿಯಲ್ಲ. ನಮ್ಮ ಧಾರ್ಮಿಕ ಶ್ರದ್ಧಾ ಕೇಂದ್ರಗಳನ್ನು ಮುಚ್ಚಿಸುವವರ ಆಚರಣೆಗಳಲ್ಲಿ ನಮ್ಮವರು ಪಾಲ್ಗೊಳ್ಳಬಾರದು. ಪಾಲ್ಗೊಂಡವರು ಕಂಡರೆ ನಾಲ್ಕೇಟು ಬಿಗಿದರೂ ಅಡ್ಡಿ ಇಲ್ಲ. ಅಂಥವರನ್ನು ಖಂಡಿಸಬೇಕು ಎಂದು ಮಿಥು ನಾಥ್ ಕರೆ ಕೊಟ್ಟಿದ್ದಾರೆ. (ಏಜೆನ್ಸೀಸ್)
91,629 ಕೋಟಿ ರೂಪಾಯಿ ಮೌಲ್ಯ ಹೆಚ್ಚಿಸಿಕೊಂಡ ಮಿಡ್​ ಕ್ಯಾಪ್​ನ ಟಾಪ್ 6 ಕಂಪನಿಗಳು !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − 3 =
Remember me
