ಚೆನ್ನೈ:ಮಿಚೌಂಗ್​​ ಚಂಡಮಾರುತದ ರೌದ್ರಾವತಾರಕ್ಕೆ ಚೆನ್ನೈ ಅಕ್ಷರಶಃ ನಲುಗಿ ಹೋಗಿದೆ. ಭಾರಿ ಮಳೆಗೆ ಚರಂಡಿಗಳು ತುಂಬಿ ಹರಿಯುತ್ತಿದ್ದು, ರಸ್ತೆಗಳೆಲ್ಲ ನದಿಯಂತಾಗಿದೆ. ಈಗಾಗಲೇ 12 ಮಂದಿ ಪ್ರವಾಹಕ್ಕೆ ಅಸುನೀಗಿದ್ದು, ಮಿಚೌಂಗ್​ ಸೈಕ್ಲೋನ್​ ಚೆನ್ನೈನಲ್ಲಿ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿ ಮಾಡಿದೆ. ಸಂಕಷ್ಟದ ಸ್ಥಿತಿಯಲ್ಲಿ ಸಿಲುಕಿರುವ ಚೆನ್ನೈಗೆ ನೆರವಿನ ಹಸ್ತ ಚಾಚುವಂತೆ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್​ ವಾರ್ನರ್​ ಕರೆ ನೀಡಿದ್ದಾರೆ.
ಬಂಗಾಳ ಕೊಲ್ಲಿಯಲ್ಲಿ ರಚನೆಯಾಗಿರುವ ಸೈಕ್ಲೋನ್​ ಪರಿಣಾಮ ಚೆನ್ನೈ, ತಿರುವಳ್ಳೂರು, ಕಾಂಚಿಪುರಂ ಹಾಗೂ ಚೆಂಗಲ್ಪಟ್ಟು ಜಿಲ್ಲೆಗಳಲ್ಲಿ ಕಳೆದ 48 ಗಂಟೆಗಳಲ್ಲಿ ನಿರಂತರವಾಗಿ ಭಾರಿ ಮಳೆಯಾಗಿದೆ. ಮರಗಳು ಧರೆಗುಳಿದಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡಿದೆ ಮತ್ತು ರಸ್ತೆಗಳೆಲ್ಲ ನದಿಯಂತಾಗಿದ್ದು, ವಿದ್ಯುತ್​ ಸಂಪರ್ಕ, ಮೊಬೈಲ್​ ಸಿಗ್ನಲ್​ ಮತ್ತು ನೀರಿನ ಪೂರೈಕೆ ಇಲ್ಲದೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಚೆನ್ನೈನ ಸುತ್ತಮುತ್ತಲಿನ ಎಲ್ಲ ಕೆರೆಗಳು ಭರ್ತಿಯಾಗುವ ಹಂತದಲ್ಲಿದ್ದು, ಪ್ರಮುಖ ಕೆರೆಗಳಾದ ಸೆಂಬರಂಬಕ್ಕಂ ಸರೋವರ ಹಾಗೂ ಬಂಡಿ ಜಲಾಶಯಗಳು ಸಂಪೂರ್ಣ ಭರ್ತಿಯಾಗಿರುವ ಪರಿಣಾಮ ನದಿಗಳಲ್ಲೂ ತೀವ್ರ ಪ್ರವಾಹ ಉಂಟಾಗಿದೆ. ಆದ್ಯಾರ್​ ಮತ್ತು ಕೋಸಸ್ತಲೈ ನದಿ ಪಾತ್ರದ ಜನರು ತಮ್ಮ ಗ್ರಾಮಗಳನ್ನು ತೊರೆಯುವಂತೆ ಹೇಳಲಾಗಿದೆ. ಚೆನ್ನೈನ ವಿವಿಧೆಡೆ ಮಳೆ ನೀರು ಸಂಪೂರ್ಣವಾಗಿ ಹರಿದು ಹೋಗದ ಕಾರಣ ಜನರು ಮನೆಯೊಳಗೆ ಸಿಲುಕಿಕೊಂಡಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ವಿವಿಧೆಡೆ ಮನೆಗಳ ಒಳಗಡೆ ನುಗ್ಗಿರುವ ಮಳೆ ನೀರು ಕಡಿಮೆಯಾಗದ ಪರಿಣಾಮ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ರಾಜ್ಯ ವಿಪತ್ತು ನಿರ್ವಹಣಾ ಪಡೆ, ಅಗ್ನಿಶಾಮಕ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ದೋಣಿಗಳ ಮೂಲಕ ನಾಗರಿಕರನ್ನು ರಕ್ಷಿಸುತ್ತಿದ್ದಾರೆ. ಚೆನ್ನೈನಲ್ಲಿ ಭಾರೀ ಮಳೆಗೆ ಕಾರುಗಳು ಮತ್ತು ವಾಹನಗಳು ಕೊಚ್ಚಿಹೋಗಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ವಾರ್ನರ್​ ಮನವಿಈ ಎಲ್ಲ ಭೀಕರ ದೃಶ್ಯಗಳನ್ನು ನೋಡಿ ಮರುಕ ವ್ಯಕ್ತಪಡಿಸಿರುವ ಕ್ರಿಕೆಟರ್​ ವಾರ್ನರ್​, ಚೆನ್ನೈಗಾಗಿ ನೆರವಿನ ಹಸ್ತ ಚಾಚುವಂತೆ ಕರೆ ನೀಡಿದ್ದಾರೆ. ಚೆನ್ನೈ ಪ್ರವಾಹದ ಭೀಕರ ದೃಶ್ಯಗಳನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿಕೊಂಡಿರುವ ವಾರ್ನರ್​, ಚೆನ್ನೈನ ವಿವಿಧೆಡೆ ಮಳೆ ನೀರು ಸಂಗ್ರಹವಾಗುತ್ತಿರುವುದು ಆತಂಕಕಾರಿ ಸಂಗತಿ. ಇದರಿಂದ ಬಾಧಿತರಾದ ಎಲ್ಲರ ರಕ್ಷಣೆಗೆ ನಾನು ಪ್ರಾರ್ಥಿಸುತ್ತೇನೆ. ದಯವಿಟ್ಟು ಎಲ್ಲರೂ ಸುರಕ್ಷಿತವಾಗಿರಿ. ಸಹಾಯ ಮಾಡುವ ಸ್ಥಿತಿಯಲ್ಲಿರುವ ಯಾರಾದರೂ ತಕ್ಷಣ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಲು ಮತ್ತು ಸಹಾಯ ಹಸ್ತ ಚಾಚಲು ಸಿದ್ಧರಾಗಿರಬೇಕೆಂದು ನಾನು ವಿನಂತಿಸುತ್ತೇನೆ. ನಾವೆಲ್ಲರೂ ಸೇರಿ ನಮ್ಮ ಕೈಲಾದಷ್ಟು ಸಹಾಯ ಮಾಡೋಣ ಎಂದಿದ್ದಾರೆ.(ಏಜೆನ್ಸೀಸ್​)

A post shared by David Warner (@davidwarner31)

ರೇವಂತ್ ರೆಡ್ಡಿ ಗುರುವಾರ ತೆಲಂಗಾಣ ಮುಂದಿನ ಮುಖ್ಯಮಂತ್ರಿ- ಗುರುವಾರ ಪ್ರಮಾಣ ವಚನ – ಕಾಂಗ್ರೆಸ್ ಅಧಿಕೃತ ಘೋಷಣೆ

ಯಾರೊಂದಿಗಾದ್ರೂ ಡೇಟಿಂಗ್ ಮಾಡಿದ್ದೀರಾ? ಸಂಗಾತಿ ಬೇಕು ಅನ್ಸಿಲ್ವಾ? ಸಿಂಧು ಕೊಟ್ಟ ಉತ್ತರ ವೈರಲ್​…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × one =
Remember me
