ನವದೆಹಲಿ:ಕೆಲಸದಲ್ಲಿ ಯಾವುದೇ ಒತ್ತಡವಿಲ್ಲ ಎಂದಾದರು ಕೆಲವೊಂದು ಕಂಪನಿಗಳಲ್ಲಿ ಬಾಸ್‌ನಿಂದ ಸರಿಯಾದ ಬೆಂಬಲವಿಲ್ಲದೆ ಕಚೇರಿಗಳಲ್ಲಿ ಕಿರಿಕಿರಿ ಅನುಭವಿಸಬೇಕಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಅನೇಕರು ತಮ್ಮ ಅನುಭವಗಳನ್ನು ಮತ್ತು ಸವಾಲುಗಳನ್ನು ವೃತ್ತಿಪರವಾಗಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಉದ್ಯೋಗಿಯೊಬ್ಬರು ತಮ್ಮ ಬಾಸ್ ಬಗ್ಗೆ ಸೋಶಿಯಲ್​​ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ವೈರಲ್ ಆಗುತ್ತಿದೆ.
ಉದ್ಯೋಗಿಯೊಬ್ಬರು ತಮ್ಮ ಕಚೇರಿಯಲ್ಲಿನ ವಿಚಿತ್ರ ಸನ್ನಿವೇಶವನ್ನು ರೆಡ್ಡಿಟ್ ಬಳಕೆದಾರ ಪೋಸ್ಟ್ ಮಾಡಿದ್ದು, ಕಚೇರಿಯಲ್ಲಿ ಫೋನ್ ಅನ್ನು ಚಾರ್ಜ್ ಮಾಡಿದ್ದಕ್ಕಾಗಿ ಬಾಸ್ ತನ್ನ ಮೇಲೆ ಕಿರುಚಿದ್ದಾನೆ. ‘ನಾನು ಕಂಪನಿಯ ವಿದ್ಯುತ್ ಅನ್ನು ವೈಯಕ್ತಿಕ ಬಳಕೆಗಾಗಿ ಕದಿಯುತ್ತಿದ್ದೇನೆ ಎಂದು ಕಚೇರಿಯಲ್ಲಿ ಬಾಸ್ ನನ್ನ ಮೇಲೆ ಕೂಗಿದರು. ಹುಡುಗರೇ ನೀವೆಲ್ಲರೂ ಏನು ಯೋಚಿಸುತ್ತೀರಿ? ನಾನು ಇಡೀ ದಿನ ಫೋನ್‌ನಲ್ಲಿ ಇರುವುದಿಲ್ಲ. ನಾನು ರಾತ್ರಿ ಮಲಗುವ ಮುನ್ನ ಫೋನ್ ಚಾರ್ಜ್ ಮಾಡುವುದನ್ನು ಮರೆತುಬಿಡುತ್ತೇನೆ. ಇದು ಡೆಸ್ಕ್ ಕೆಲಸ’ ಎಂದು ಅವರು ಪೋಸ್ಟ್‌ನಲ್ಲಿ ಬರೆದಿದ್ದಾರೆ.
ಈ ಪೋಸ್ಟ್ ಓದಿದ ನೆಟಿಜನ್‌ಗಳು ಅಚ್ಚರಿಗೊಂಡಿದ್ದಾರೆ. ಇಂತಹ ಕೆಲವು ಸಮಸ್ಯೆಗಳಿಂದ ಮನನೊಂದು ಉದ್ಯೋಗಿಗಳು ಕಾಮೆಂಟ್​​ ಮಾಡುವ ಮೂಲಕವಾಗಿ ಅಂತಹ ಬಾಸ್ ಅನ್ನು ದ್ವೇಷಿಸಿದ್ದಾರೆ.
ಆಫೀಸ್‌ನಲ್ಲಿ ಫೋನ್‌ಗೆ ಚಾರ್ಜ್ ಮಾಡುವುದಿಲ್ಲ ಎಂದು ಹೇಳಿ.. ನೀವು ಆಫೀಸ್ ಕರೆಗಳನ್ನು ಸಹ ತೆಗೆದುಕೊಳ್ಳುವುದಿಲ್ಲ. ಆಗ ಕಂಪನಿಗೆ ಲಾಸ್​​.. ‘ಕಂಪನಿ ನೀರು ಖರ್ಚಾಗುತ್ತದೆ ಎಂಬ ಕಾರಣಕ್ಕೆ ಕಂಪನಿಯ ಶೌಚಾಲಯವನ್ನು ಫ್ಲಶ್ ಮಾಡದಂತೆ ನಿಮ್ಮ ಬಾಸ್‌ಗೆ ಹೇಳಿ’ ಎಂದು ಕಾಮೆಂಟ್​​ ಮಾಡುತ್ತಿದ್ದಾರೆ.
ಕರಿಬೇವಿನ ಚಹಾದ ಬಗ್ಗೆ ನಿಮಗೆ ಗೊತ್ತಾ?; ಪ್ರತಿದಿನ ಒಂದು ಕಪ್ ಕುಡಿಯಿರಿ..ಅನಾರೋಗ್ಯ ಸಮಸ್ಯೆಗಳಿಗೆ ಇದೊಂದು ಮದ್ದು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 3 =
Remember me
