ಭೋಪಾಲ್​:ಚಲಿಸುತ್ತಿರುವ ಟ್ರಕ್​ ಬಾಗಿಲನ್ನು ಮುರಿದು ಒಳಗೆ ನುಸುಳಿ ವಸ್ತುಗಳ ಕಳ್ಳತನ ಮಾಡುವುದನ್ನು ನಾವು ಹೆಚ್ಚಾಗಿ ಹಾಲಿವುಡ್​ ಸಿನಿಮಾಗಳನ್ನು ನೋಡಿರುತ್ತೇವೆ. ಇದೇ ರೀತಿ ನಿಜ ಜೀವನದಲ್ಲಿ ನಡೆಯಲು ಸಾಧ್ಯವೇ ಎಂದು ಮಾತೂ ಸಹ ಆಡಿರುತ್ತೇವೆ. ಆದರೆ, ಅದು ನಿಜವಾಗಿದೆ.
ಹಾಡಹಗಲಲ್ಲೇ ಮೂವರು ಯುವಕರು ಬೈಕ್​ ಮೇಲೆ ತೆರಳಿ ಟ್ರಕ್​ನಲ್ಲಿರುವ ವಸ್ತುಗಳನ್ನು ಕದ್ದಿದ್ದಾರೆ. ಟ್ರಕ್​ ಮತ್ತು ಯುವಕರ ಬೈಕ್​ ಹಿಂಬದಿಯಲ್ಲಿ ಬರುತ್ತಿದ್ದ ಕಾರು ಚಾಲಕ ವಿಡಿಯೋ ಮಾಡಿ ತಮ್ಮ ಯೂಟ್ಯೂಬ್​ನಲ್ಲಿ ಅಪ್​ಲೋಡ್​ ಮಾಡಿಕೊಂಡಿದ್ದು, ಭಾರಿ ವೈರಲ್​ ಆಗಿದೆ.
ಅಂದಹಾಗೆ ಈ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಇಲ್ಲಿನ ನಿರ್ಜನ ರಸ್ತೆಯೊಂದರಲ್ಲಿ ಬೈಕ್​ ಮೇಲೆ ಬಂದ ಮೂವರು ಖಾಲಿ ರಸ್ತೆಯ ಮಧ್ಯದಲ್ಲಿ ಚಲಿಸುತ್ತಿದ್ದ ಟ್ರಕ್​ ಮೇಲೇರಿದ್ದಾರೆ. ಯಂತ್ರದ ಮೂಲಕ ಟ್ರಕ್​ ಬಾಗಿಲ ಬೋಲ್ಟ್​ ಅನ್ನು ಕಟ್​ ಮಾಡಿ ಒಳಗಿದ್ದ ವಸ್ತುಗಳನ್ನು ಕಳುವು ಮಾಡಿದ್ದಾರೆ.
ಇದನ್ನೂ ಓದಿರಿ:ಗಂಡನ ಒಪ್ಪಿಗೆ ಪಡೆದು ಎರಡನೇ ಪತ್ನಿಯನ್ನು ಮದ್ವೆಯಾದ ಮೊದಲ ಪತ್ನಿ: ಕಾರಣ ಕೇಳಿದ್ರೆ ಬೆಚ್ಚಿಬೀಳ್ತೀರಾ!
ವಿಡಿಯೋ ಮಾಡಿಕೊಂಡ ಕಾರು ಚಾಲಕ ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಹೋಗಿ ಟ್ರಕ್​ ಚಾಲಕರಿಗೆ ತಿಳಿಸಿದ್ದಾರೆ. ಖದೀಮರನ್ನು ಹಿಡಿಯುವಂತೆಯೂ ಎಚ್ಚರಿಸಿದ್ದಾರೆ. ವಿಡಿಯೋ ಮಾಡಿದ ಕಾರು ಚಾಲಕನ ಪ್ರಕಾರ ಟ್ರಕ್​ನಲ್ಲಿ ಕೆಲವು ಎಣ್ಣೆ ಪದಾರ್ಥಗಳನ್ನು ಕಳುವು ಮಾಡಿದ್ದಾರೆ.
ಪೊಲೀಸ್​ ಸೋಗಿನಲ್ಲಿ ಅಥವಾ ಕಲ್ಲುಗಳನ್ನು ಅಡ್ಡಲಾಗಿ ಇಟ್ಟು ಹೆದರಿಸಿ ದರೋಡೆ ಮಾಡುವುದನ್ನು ನೋಡಿದ್ದೇವೆ. ಆದರೆ, ಈ ರೀತಿಯ ಕಳ್ಳತನ ಪ್ರಕರಣ ಇದೇ ಮೊದಲು ಎಂದು ಕಾರು ಚಾಲಕ ಹೇಳಿಕೊಂಡಿದ್ದಾನೆ. ಇದೀಗ ವಿಡಿಯೋ ವೈರಲ್ ಆಗಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. (ಏಜೆನ್ಸೀಸ್​)
(ವಿಡಿಯೋ ಕೃಪೆ: ಟ್ರಾನ್ಸ್​ಪೋರ್ಟ್​ ಲೈವ್​)
https://www.youtube.com/watch?v=wOrEsEfYGIg
ಸತತ ವೈಫಲ್ಯದ ಬಳಿಕ ಆರ್​ಸಿಬಿಯಲ್ಲಿನ ತನ್ನ ಯಶಸ್ಸಿನ ಗುಟ್ಟನ್ನು ರಟ್ಟು ಮಾಡಿದ ಗ್ಲೇನ್​ ಮ್ಯಾಕ್ಸ್​ವೆಲ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + four =
Remember me
