ನವದೆಹಲಿ:‘ಭಾರತದ ಉಕ್ಕಿನ ಮನುಷ್ಯ’ ಎಂದೇ ಖ್ಯಾತರಾಗಿದ್ದ ಡಾ. ಜಮ್ಶೆಡ್ ಜೆ ಇರಾನಿ ಅವರು ಸೋಮವಾರ ತಡರಾತ್ರಿ ನಿಧನರಾದರು. ಅವರಿಗೆ 86 ವರ್ಷ ವಯಸ್ಸಾಗಿತ್ತು.
ಅ.31ರ ರಾತ್ರಿ 10 ಗಂಟೆಗೆ ಜೆಮ್‌ಶೆಡ್‌ಪುರದ ಟಾಟಾ ಆಸ್ಪತ್ರೆಯಲ್ಲಿ ಪದ್ಮಭೂಷಣ ಡಾ. ಜಮ್ಶೆಡ್ ಜೆ ಇರಾನಿ ನಿಧನರಾದರು. ಅವರ ನಿಧನದ ಸುದ್ದಿಯನ್ನು ತೀವ್ರ ದುಖಃದಿಂದ ತಿಳಿಸುತ್ತಿದ್ದೇವೆ ಎಂದು ಟ್ವೀಟ್​ ಮೂಲಕ ಟಾಟಾ ಸ್ಟೀಲ್ ತಿಳಿಸಿದೆ.
We are deeply saddened at the demise of Padma Bhushan Dr. Jamshed J Irani, fondly known as the Steel Man of India. Tata Steel family offers its deepest condolences to his family and loved ones.pic.twitter.com/gGIg9JgGMS
— Tata Steel (@TataSteelLtd)October 31, 2022

1936ರ ಜೂನ್ 2ರಂದು ನಾಗ್ಪುರದಲ್ಲಿ ಜಿಜಿ ಇರಾನಿ ಮತ್ತು ಖೋರ್ಶೆಡ್ ಇರಾನಿ ದಂಪತಿಯ ಪುತ್ರನಾಗಿ ಜನಿಸಿದ ಜಮ್ಶೆಡ್ ಜೆ ಇರಾನಿ ಅವರು 1956ರಲ್ಲಿ ನಾಗ್ಪುರದ ವಿಜ್ಞಾನ ಕಾಲೇಜಿನಲ್ಲಿ ವಿಜ್ಞಾನ ಪದವಿ ಪೂರ್ಣಗೊಳಿಸಿದರು ಮತ್ತು 1958ರಲ್ಲಿ ನಾಗ್ಪುರ ವಿಶ್ವವಿದ್ಯಾಲಯದಿಂದ ಭೂವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಬಳಿಕ ಜೆಎನ್​ ಟಾಟಾ ವಿದ್ಯಾರ್ಥಿ ವೇತನ ಪಡೆದು ಇಂಗ್ಲೆಂಡ್​ ತೆರಳಿ ಶೆಫಿಲ್ಡ್​ ವಿವಿಯಲ್ಲಿ ಲೋಹಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪಿಎಚ್​ಡಿ ಮುಗಿಸಿದರು.
43 ವರ್ಷಗಳ ಕಾಲ ಟಾಟಾ ಸ್ಟೀಲ್​ನಲ್ಲಿ ವಿವಿಧ ಜವಾಬ್ದಾರಿ ನಿರ್ವಹಿಸಿದ್ದ ಡಾ. ಜಮ್ಶೆಡ್ ಜೆ ಇರಾನಿ ಅವರು 2011ರ ಜೂನ್​ನಲ್ಲಿ ಟಾಟಾ ಸ್ಟೀಲ್ ಮಂಡಳಿಯಿಂದ ನಿವೃತ್ತರಾಗಿದ್ದರು. 1990ರ ದಶಕದ ಆರಂಭದಲ್ಲಿ ಭಾರತದ ಆರ್ಥಿಕ ಉದಾರೀಕರಣದ ಸಮಯದಲ್ಲಿ ಟಾಟಾ ಸ್ಟೀಲ್ ಅನ್ನು ಮುಂಚೂಣಿಯಿಂದ ಮುನ್ನಡೆಸಿದ ಮತ್ತು ಭಾರತದಲ್ಲಿ ಉಕ್ಕಿನ ಉದ್ಯಮದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ.
ಟಾಟಾ ಸ್ಟೀಲ್ ಮತ್ತು ಟಾಟಾ ಸನ್ಸ್, ಇರಾನಿ ಟಾಟಾ ಮೋಟಾರ್ಸ್, ಟಾಟಾ ಟೆಲಿಸರ್ವೀಸಸ್ ಸೇರಿದಂತೆ ಹಲವಾರು ಟಾಟಾ ಗ್ರೂಪ್ ಕಂಪನಿಗಳ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ. 1992-93ರಲ್ಲಿ ಭಾರತೀಯ ಕೈಗಾರಿಕಾ ಒಕ್ಕೂಟದ (CII) ರಾಷ್ಟ್ರೀಯ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು.
ಡಾ. ಜಮ್ಶೆಡ್ ಜೆ ಇರಾನಿ ಅವರಿಗೆ ಪತ್ನಿ ಡೈಸಿ ಇರಾನಿ, ಮಕ್ಕಳಾದ ಜುಬಿನ್, ನಿಲೋಫರ್ ಮತ್ತು ತನಾಜ್ ಇದ್ದಾರೆ.(ಏಜೆನ್ಸೀಸ್​)
ಕೆಎಸ್​ಆರ್​ಟಿಸಿ ಬಸ್​ಗಳಲ್ಲಿ ದರ ಪರಿಷ್ಕರಣೆ: ಸಾಕು ನಾಯಿಗೆ ಅರ್ಧ ಟಿಕೆಟ್​! 30 ಕೆಜಿ ಲಗೇಜ್​ ಸಾಗಣೆ ಉಚಿತ

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಯಾಗಿದ್ದ ವೇಳೆ ಪುತ್ತೂರಿನ ದಿವಿತ್​ ರೈ ರಚಿಸಿದ್ದ ಕವನ ಈಗ 8ನೇ ತರಗತಿ ಪಠ್ಯಕ್ಕೆ ಸೇರ್ಪಡೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + nineteen =
Remember me
