ನವದೆಹಲಿ:ಪಂಜಾಬ್‌ನ ಆಘಾತಕಾರಿ ಘಟನೆಯೊಂದರಲ್ಲಿ, ರಾಂಪುರ ಗ್ರಾಮದಲ್ಲಿ 7 ವರ್ಷದ ಬಾಲಕಿಯನ್ನು ಆಕೆಯ ಮಲತಾಯಿ ಅಪಹರಿಸಿ ಹತ್ಯೆಗೈದಿದ್ದಾರೆ. ಅಭಿರಾಜ್ ಜೋತ್ ಕೌರ್ ಎಂದು ಗುರುತಿಸಲಾಗಿರುವ ಅಪ್ರಾಪ್ತೆಯನ್ನು ಆಕೆಯ ಮನೆ ಮತ್ತು ಟ್ಯೂಷನ್ ತರಗತಿಗಳ ನಡುವಿನ ಮಾರ್ಗದಲ್ಲಿ ಸೋಮವಾರ ಬೈಕ್‌ನಲ್ಲಿ ಬಂದ ಕೆಲವರು ಅಪಹರಿಸಿದ್ದಾರೆ.
ಪ್ರಕರಣದಲ್ಲಿ ಹೊಸ ಮಾಹಿತಿ ಸಿಕ್ಕಿದ್ದು ಈ ಅಪರಾಧಕ್ಕೆ ಸಂಬಂಧಿಸಿದ ಸಿಸಿಟಿವಿ ವೀಡಿಯೊ ಬಿಡುಗಡೆಯಾಗಿದೆ. ಗ್ರಾಮದ ರಸ್ತೆಗಳಲ್ಲಿ ಮಹಿಳೆಯೊಬ್ಬರು ತನ್ನ ಮಲಮಗಳ ಮೃತದೇಹವನ್ನು ಬಕೆಟ್‌ನಲ್ಲಿ ಸಾಗಿಸುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.
ಮಹಿಳೆಯೊಬ್ಬರು ಬಾಲಕಿಯನ್ನು ಅಪಹರಿಸಿ ಕೊಂದ ಪ್ರಕರಣ ವರದಿಯಾದ ನಂತರ ಆಘಾತಕಾರಿ ದೃಶ್ಯಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿವೆ. ಪತ್ರಕರ್ತ ನಿಖಿಲ್ ಚೌಧರಿ ಅವರು ಬುಧವಾರ ಟ್ವಿಟರ್‌ನಲ್ಲಿ ವೀಡಿಯೊವನ್ನು ಅಪ್‌ಲೋಡ್ ಮಾಡಿದ್ದಾರೆ.
ಇದನ್ನೂ ಓದಿ:ಕಿರುಕುಳಕ್ಕೆ ಪ್ರತಿರೋಧ ಒಡ್ಡಿದ ಯುವತಿ; ಪೆಟ್ರೋಲ್​ ಸುರಿದು ಹತ್ಯೆ
ಮೇ 15 ರಂದು ಅಮೃತಸರದ ಗರಿಂಡಾ ಪೊಲೀಸ್ ಠಾಣೆ ವ್ಯಾಪ್ತಿಯ ರಾಂಪುರ ಗ್ರಾಮದಲ್ಲಿ 7 ವರ್ಷದ ಬಾಲಕಿ ಕಾಣೆಯಾದ ಪ್ರಕರಣ ವರದಿಯಾಗಿತ್ತು. ಟ್ಯೂಷನ್​ಗೆಂದು ಮನೆಯಿಂದ ಹೋದ ಬಾಲಕಿ ಮನೆಗೆ ವಾಪಸ್ ಬಂದಿರಲಿಲ್ಲ. ಇದರಿಂದ ಆತಂಕಗೊಂಡ ಕುಟುಂಬಸ್ಥರು ಬಾಲಕಿಯನ್ನು ಹುಡುಕಲಾರಂಭಿಸಿದ್ದಾರೆ. ಅವರ ಪ್ರಯತ್ನಗಳು ವಿಫಲವಾದಾಗ, ಅವರು ಸಹಾಯಕ್ಕಾಗಿ ಪೊಲೀಸ್ ಠಾಣೆಗೆ ಧಾವಿಸಿದ್ದರು.
ಪೊಲೀಸರು ಗ್ರಾಮದ ಮನೆಗಳಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದು, ಈ ಬಗ್ಗೆ ತನಿಖೆ ನಡೆಸಿದ್ದಾರೆ. ಮಹಿಳೆ ಹಾಗೂ ಮತ್ತೊಬ್ಬರು ನೀಡಿದ ಹೇಳಿಕೆಯ ಆಧಾರದ ಮೇಲೆ ಬಾಲಕಿಯನ್ನು ಅಪಹರಿಸಲಾಗಿದೆ ಎಂದು ತಿಳಿದುಬಂದಿದೆ.
#UPDATE: The 7-year-old girl who was abducted yesterday from Rampura village in#Amritsar, was killed by her step mother and was also seen in the CCTV footage taking the girl child body carried away in a bucket.https://t.co/3D2vvLdSpepic.twitter.com/qzcYOFr6DC— Nikhil Choudhary (@NikhilCh_)May 17, 2023
#UPDATE: The 7-year-old girl who was abducted yesterday from Rampura village in#Amritsar, was killed by her step mother and was also seen in the CCTV footage taking the girl child body carried away in a bucket.https://t.co/3D2vvLdSpepic.twitter.com/qzcYOFr6DC
ವರದಿಗಳ ಪ್ರಕಾರ, ಎಲ್ಲಾ ಸಿಸಿಟಿವಿ ಕ್ಯಾಮೆರಾಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿದಾಗ, ಹುಡುಗಿಯ ಮಲತಾಯಿ ಜ್ಯೋತಿ, ತನ್ನ ಬಾಲಕಿಯನ್ನು ಬಕೆಟ್‌ನಲ್ಲಿ ಹಾಕಿ ಗ್ರಾಮದ ಹಳ್ಳಕ್ಕೆ ಎಸೆದಿರುವುದು ಕಂಡುಬಂದಿದೆ. ಈ ಅಪರಾಧ ಬಹಿರಂಗಗೊಂಡ ನಂತರ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ವರದಿಗಳಲ್ಲಿ ಉಲ್ಲೇಖಿಸಿದ್ದಾರೆ.(ಏಜೆನ್ಸೀಸ್)
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:7 + 19 =
Remember me
