ಭೋಪಾಲ್​:ಅಮ್ಮ ಕೆಲಸಕ್ಕೆ ಹೋದ ಸಮಯ ನೋಡಿ, ಮಲತಂದೆಯೇ ಮಗಳ ಮೇಲೆ ಅತ್ಯಾಚಾರವೆಸಗಿರುವ ಘಟನೆ ಮಧ್ಯಪ್ರದೇಶದ ಭೋಪಾಲದಲ್ಲಿ ನಡೆದಿದೆ. ತಾಯಿಯೇ ಬಂದು ತನ್ನ ಗಂಡನ ವಿರುದ್ಧ ದೂರು ದಾಖಲಿಸಿದ್ದಾಳೆ.
ಆ ಮಹಿಳೆ ಎರಡನೇ ಮದುವೆಯಾಗಿದ್ದಾಳೆ. ಅವಳಿಗೆ ಒಬ್ಬ ಮಗ ಮತ್ತು 13 ವರ್ಷದ ಒಬ್ಬ ಮಗಳಿದ್ದಾಳೆ. ಸಂಸಾರ ನಿರ್ವಹಿಸುವ ಸಲುವಾಗಿ ಆಕೆ ಕೆಲಸಕ್ಕೆ ಹೋಗುತ್ತಿದ್ದಳು. ಆದರೆ ಅದನ್ನೇ ದುರುಪಯೋಗ ಮಾಡಿಕೊಂಡ ಆಕೆಯ ಎರಡನೇ ಗಂಡ, ಆಕೆ ಕೆಲಸಕ್ಕೆ ಹೋದ ಸಮಯದಲ್ಲಿ ಮಗಳ ಮೇಲೆ ಅತ್ಯಾಚಾರವೆಸಗಲು ಆರಂಭಿಸಿದ್ದಾನೆ. 2019ರ ಡಿಸೆಂಬರ್​ನಲ್ಲಿ ಮೊದಲನೇ ಬಾರಿಗೆ ಅತ್ಯಾಚಾರ ಮಾಡಿದ್ದನಂತೆ. ಅದಾದ ಮೇಲೆ ಆಕೆಯನ್ನು ಬೆದರಿಸಿ, ಆಗಾಗ ಈ ರೀತಿಯ ಕೃತ್ಯವೆಸಗಿದ್ದಾನೆ.
ಕಳೆದ ವರ್ಷ ಮಾರ್ಚ್​ನಲ್ಲಿ ಈ ರೀತಿ ಸಹೋದರಿಯನ್ನು ಮಲತಂದೆಯೇ ಅತ್ಯಾಚಾರ ಮಾಡುತ್ತಿದ್ದ ದೃಶ್ಯವನ್ನು ಮಹಿಳೆಯ ಮಗ ನೋಡಿದ್ದಾನೆ. ಅದಾದ ನಂತರ ತಾಯಿಗೆ ಈ ವಿಚಾರ ತಿಳಿಸಿದ್ದಾನೆ. ಇದರಿಂದಾಗಿ ಮನೆಯಲ್ಲಿ ಜಗಳವಾಗಿದ್ದು, ಮಲತಂದೆ ಮನೆ ಬಿಟ್ಟು ಹೋಗಿದ್ದಾನೆ.
ಮನೆ ಬಿಟ್ಟು ಹೋಗಿ ಒಂದು ವರ್ಷವಾದ ಮೇಲೆ ಇದೀಗ ಮತ್ತೊಮ್ಮೆ ಈ ಕುಟುಂಬವನ್ನು ಸಂಪರ್ಕಿಸುವ ಪ್ರಯತ್ನವನ್ನು ಆತ ಮಾಡಿದ್ದಾನೆ. ಆತನಿಂದ ಯಾವುದಾದರೂ ತೊಂದರೆಯಾಗಬಹುದು ಎನ್ನುವ ಭಯದಿಂದ ತಾಯಿ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದು, ದೂರು ದಾಖಲಿಸಿದ್ದಾಳೆ. (ಏಜೆನ್ಸೀಸ್​)
ಆರೋಗ್ಯ ಸಚಿವ ಕೆ ಸುಧಾಕರ್ ವಿರುದ್ಧ ರಾಜ್ಯಾದ್ಯಂತ ಮಾನನಷ್ಟ ಮೊಕದ್ದಮೆ ಹೂಡಲು ಕಾಂಗ್ರೆಸ್ ನಿರ್ಧಾರ: ಕಾರಣ ಏನು?

ಪೆಟ್ರೋಲ್​, ಡೀಸೆಲ್​ ಬೆಲೆಯಲ್ಲಿ ಇಳಿಕೆ! ಇನ್ನಷ್ಟು ಇಳಿಯುವ ಸಾಧ್ಯತೆ..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 3 =
Remember me
