ಮುಂಬೈ:ಗಂಡ ಹೆಂಡತಿಯ ಜಗಳದಿಂದಾಗಿ ಅವರ ಒಂದೂವರೆ ವರ್ಷದ ಮಗು ಬಲಿಯಾಗಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ರಾಜ್ಯದ ಔರಂಗಾಬಾದ್ ಜಿಲ್ಲೆಯ ಗಂಗಾಪುರ ತಾಲೂಕಿನ ಭೆಂಡಾಲ ಗ್ರಾಮದ ಕರಣ್ ಭೋನ್ಸ್ಲೆ ಮಹಿಳೆಯೊಬ್ಬಳನ್ನು ಮದುವೆಯಾಗಿದ್ದ. ಅದಾಗಲೇ ಮದುವೆಯಾಗಿ ಮಗುವಿದ್ದ ಮಹಿಳೆಯನ್ನು ಆತ ತನ್ನ ಹೆಂಡತಿಯೆಂದು ಒಪ್ಪಿಕೊಂಡಿದ್ದ. ಆದರೆ ಈ ದಂಪತಿಯ ನಡುವೆ ಆಗಾಗ ಜಗಳವಾಗುತ್ತಿರುತ್ತಿತ್ತು.
ಅದೇ ರೀತಿ ಇತ್ತೀಚೆಗೆ ಜಗಳ ನಡೆದಿದೆ. ಜಗಳ ತಾರಕಕ್ಕೇರಿದ್ದು, ಕರಣ್​ ಹೆಂಡತಿಯ ಮೇಲೆ ಕೈ ಮಾಡಿದ್ದಾನೆ. ಅದರಿಂದ ಸಿಟ್ಟಿಗೆದ್ದ ಮಹಿಳೆ, ತನ್ನ ಒಂದೂವರೆ ವರ್ಷದ ಮಗುವನ್ನು ಮಲತಂದೆಯೊಂದಿಗೇ ಬಿಟ್ಟು, ತವರು ಮನೆಗೆ ಹೊರಟು ಹೋಗಿದ್ದಾಳೆ. ಹೆಂಡತಿಯ ಮೇಲಿನ ಸಿಟ್ಟನ್ನು ಮಗುವಿನ ಮೇಲೆ ತೀರಿಸಿಕೊಳ್ಳುವ ಪ್ಲಾನ್​ ಅನ್ನು ಕರಣ್​ ಮಾಡಿದ್ದಾನೆ.
ಮಗು ಅಳಲಾರಂಭಿಸಿದಾಗ ಅದನ್ನು ನೇರವಾಗಿ ಜಮೀನಿಗೆ ಕರೆದೊಯ್ದಿದ್ದಾನೆ. ಅಲ್ಲಿ ಮಗುವಿನ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಅಲ್ಲಿಯೇ ಮಗುವಿನ ಶವವನ್ನು ಹೂತು ಹಾಕಿದ್ದಾನೆ.
ಸುಮಾರು ಹೊತ್ತಿನ ನಂತರ ತಪ್ಪಿನ ಅರಿವಾದ ಕರಣ್​ ತಾನೇ ಪೊಲೀಸ್​ ಠಾಣೆಗೆ ಬಂದು ನಡೆದ ಘಟನೆ ತಿಳಿಸಿ ತಪ್ಪು ಒಪ್ಪಿಕೊಂಡಿದ್ದಾನೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು, ಮಗು ಹೂತಿದ್ದ ಸ್ಥಳಕ್ಕೆ ಬಂದು ಮೃತದೇಹವನ್ನು ಹೊರತೆಗೆದು, ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ. (ಏಜೆನ್ಸೀಸ್)
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:sixteen + nine =
Remember me
