ರತ್ಲಾಂ:ಒಂದೆಡೆ ಪತ್ನಿಯ ಶೀಲದ ಮೇಲೆ ಶಂಕೆ. ಇನ್ನೊಂದೆಡೆ ರಾತ್ರಿ ವೇಳೆ ಹಾಸಿಗೆಯಲ್ಲೇ ಮೂತ್ರ ವಿಸರ್ಜಿಸುತ್ತಾನೆ ಎಂಬ ಕೋಪ. ಜತೆಗೆ ಮದ್ಯದ ಅಮಲು. ಇವೆಲ್ಲವೂ ಸೇರಿಕೊಂಡು ಮನೆಗೆ ಬಂದ ಆತ 5 ವರ್ಷದ ಮಲಪುತ್ರನನ್ನು ಕೋಣೆಗೆ ಕರೆದೊಯ್ದು, ಗುದದ್ವಾರದಲ್ಲಿ ಕಸಬರಿಕೆಯನ್ನು ನುಗ್ಗಿಸಿದ. ಜತೆಗೆ ಮನಸೋಇಚ್ಛೆ ಥಳಿಸಿ ಆತನನ್ನು ಸಾಯಿಸಿ ಪರಾರಿಯಾಗಿದ್ದಾನೆ.
ಮಧ್ಯಪ್ರದೇಶದ ಮಂಡಸೌರ್​ನ ನಿವಾಸಿ ಜಾಫರ್​ ಮಲಪುತ್ರನನ್ನು ಕೊಲೆ ಮಾಡಿದವನು. ಪುತ್ರನನ್ನು ಬಿಡಿಸಿಕೊಳ್ಳಲು ಈತನ ಪತ್ನಿ ನಜ್ಮಾ ಪ್ರಯತ್ನಿಸಿದಾಗ ಆಕೆಯ ಮೇಲೆ ಜಾಫರ್​ ಚೂರಿಯಿಂದ ಹಲ್ಲೆ ಮಾಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ಬುಧವಾರ ರಾತ್ರಿ 9.30ಕ್ಕೆ ಜಾಫರ್​ ಪಾನಮತ್ತನಾಗಿ ನಯಾಪುರ್​ ಕಾರ್ಮಿಕರ ಕಾಲನಿಯಲ್ಲಿರುವ ತನ್ನ ಮನೆಗೆ ಮರಳಿದ್ದ. ಈ ಸಂದರ್ಭದಲ್ಲಿ ಆತನ ತಾಯಿ ಜೊಹಾರಾ ಬೀ, ಅಣ್ಣ ಇಕ್ಬಾಲ್​, ಸಹೋದರಿಯರಾದ ಸನ್ನೋ ಮತ್ತು ಅಂಶು ಮನೆಯಲ್ಲಿದ್ದರು.
ಇದನ್ನೂ ಓದಿ:ನಯನತಾರಾ ಮತ್ತು ವಿಘ್ನೇಶ್​ ಜಾತಕದಲ್ಲಿ ರಾಹು ದೋಷ!; ಮದುವೆ ವಿಳಂಬದ ಬಗ್ಗೆ ಜ್ಯೋತಿಷಿಗಳು ಹೇಳುವುದೇನು?
ಜಾಫರ್​ಗೆ ಊಟ ನಜ್ಮಾ ಊಟ ಬಡಿಸಿದಾಗ ಆತ ಕೋಪದಲ್ಲಿ ತಟ್ಟೆಯನ್ನು ಬಿಸಾಡಿ ತನ್ನ ಕೋಣೆಗೆ ಹೋಗಿದ್ದಾನೆ. ಎರಡು ದಿನಗಳ ಹಿಂದೆ ಹಾಸಿಗೆಯಲ್ಲೇ ಮೂತ್ರ ವಿಸರ್ಜಿಸಿದ್ದ ಸಿಟ್ಟಿನಲ್ಲಿದ್ದ ಆತ ಪುತ್ರನನ್ನು ಕೋಣೆಯೊಳಗೆ ಎಳೆದುಕೊಂಡು ಹೋಗಿ ಹೊಡೆಯಲು ಆರಂಭಿಸಿದ್ದಾನೆ. ಇದನ್ನು ಕಂಡ ಜೊಹರಾ ಬೀ ಪೊಲೀಸರಿಗೆ ಈ ಬಗ್ಗೆ ಮಾಹಿತಿ ಕೊಡಲು ತೆರಳಿದ್ದಳು ಎನ್ನಲಾಗಿದೆ.
ಜೊಹಾರಾ ಬೀ ಕೊಟ್ಟ ಮೌಖಿಕ ದೂರು ಆಧರಿಸಿ ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗುವಷ್ಟರಲ್ಲಿ ಜಾಫರ್​ ಮಲಪುತ್ರನ ಗುದದ್ವಾರದಲ್ಲಿ ಕಸಬರಿಕೆಯನ್ನು ತೂರಿಸಿ, ಮನಸೋಇಚ್ಛೆ ಥಳಿಸಿದ್ದ. 5 ವರ್ಷದ ಬಾಲಕ ಅಳುವುದನ್ನು ನಿಲ್ಲಿಸುತ್ತಿದ್ದಂತೆ ಆತನನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದ.ಪುತ್ರನನ್ನು ಎಬ್ಬಿಸಲು ನಜ್ಮಾ ಸಾಕಷ್ಟು ಪ್ರಯತ್ನಿಸಿದ್ದಳು. ಬಳಿಕ ಆಸ್ಪತ್ರೆಗೆ ಕರೆದೊಯ್ದಾಗ ಬಾಲಕ ಅದಾಗಲೇ ಸತ್ತಿರುವುದಾಗಿ ವೈದ್ಯರು ತಿಳಿಸಿದರು ಎನ್ನಲಾಗಿದೆ.
ಕುದಿಬಿಂದು ನೀರಿನಲ್ಲಿ ಕರೊನಾ ವೈರಾಣು ಸಂಪೂರ್ಣ ನಾಶವಾಗುತ್ತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + 18 =
Remember me
