ನವದೆಹಲಿ:ಎರಡು ಸಾವಿರ ರೂಪಾಯಿ ಮುಖಬೆಲೆಯ ನೋಟು ನಿಮ್ಮ ಬಳಿ ಇನ್ನೂ ಇದೆಯಾ? ಹಾಗಿದ್ದರೆ ಹುಷಾರು. ಏಕೆಂದರೆ ಭಾರತೀಯ ರಿಸರ್ವ್ ಬ್ಯಾಂಕ್ ಹಿಂದಕ್ಕೆ ಪಡೆದಿರುವ ಈ ನೋಟುಗಳನ್ನು ಬದಲಿಸಿಕೊಳ್ಳಲು ವಿಧಿಸಲಾದ ಅಂತಿಮ ಗಡುವು ಹತ್ತಿರ ಬಂದಿದೆ.
ಎರಡು ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಹಿಂಪಡೆಯಲಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಇದೇ ಮೇ 19ರಂದು ಘೋಷಣೆ ಮಾಡಿತ್ತು. ಅಲ್ಲದೆ, ಮೇ 23ರಿಂದಲೇ ನೋಟನ್ನು ಬದಲಿಸಿಕೊಳ್ಳಲು ಅವಕಾಶ ಕಲ್ಪಿಸಿದ್ದು, ಅದಕ್ಕಾಗಿ ಸೆ. 30ರ ಗಡುವು ಕೂಡ ವಿಧಿಸಿದೆ. ಆ ಪ್ರಕಾರ ಈ ತಿಂಗಳಲ್ಲಿ ನೋಟು ಹಿಂದಿರುಗಿಸಲು ಇರುವ ಗಡುವು ಮುಗಿಯಲಿದೆ.
ಇದನ್ನೂ ಓದಿ:2000 ರೂ. ನೋಟು ಹಿಂಪಡೆ ವಿಚಾರ: ಆರ್​ಬಿಐನಿಂದ ಮತ್ತೆ ಮನವಿ; ಇಲ್ಲಿದೆ ವಿವರ..
ಸೆ. 30 ಅಂದರೆ ಹೆಚ್ಚೂಕಡಿಮೆ ಇನ್ನೂ ಒಂದು ತಿಂಗಳು ಇದೆ ಎಂದು 2 ಸಾವಿರ ರೂ. ನೋಟು ಇರುವವರು ಸುಮ್ಮನಾಗಬೇಡಿ. ಏಕೆಂದರೆ ಈ ತಿಂಗಳಲ್ಲಿ ವಿವಿಧ ಹಬ್ಬ, ಸರ್ಕಾರಿ ರಜೆಗಳನ್ನು ಸೇರಿ ಒಟ್ಟು 16 ದಿನ ಬ್ಯಾಂಕ್ ರಜೆ ಇರಲಿದೆ. ಹೀಗಾಗಿ 2 ಸಾವಿರ ರೂ. ನೋಟು ಹಿಂದಿರುಗಿಸಲು ತಡ ಮಾಡಿದಷ್ಟೂ ಸಮಸ್ಯೆ ಆಗುವ ಸಾಧ್ಯತೆ ಅಧಿಕವಿದೆ.
ಇದನ್ನೂ ಓದಿ:ಈಕೆಯ ಕೈ ಸ್ಕ್ಯಾನ್ ಮಾಡಿದ್ರೆ ಸಾಕು ಹಣ ಕಳಿಸಿಕೊಡಬಹುದು; ಇದಕ್ಕಿಂತ ‘ಡೈರೆಕ್ಟ್ ಟ್ರಾನ್ಸ್​ಫರ್’​ ಅಸಾಧ್ಯ ಅನಿಸುತ್ತೆ!
ನೋಟು ಹಿಂಪಡೆದಿರುವುದನ್ನು ಘೋಷಿಸಿದ ಸಂದರ್ಭದಲ್ಲಿ 2 ಸಾವಿರ ರೂ. ನೋಟುಗಳು 3.32 ಲಕ್ಷ ಕೋಟಿ ರೂಪಾಯಿಯಷ್ಟು ಇದ್ದವು. ಈಗ ಆ. 31ರ ಲೆಕ್ಕದ ಪ್ರಕಾರ ಅದರ ಪ್ರಮಾಣ 0.24 ಲಕ್ಷ ಕೋಟಿ ರೂಪಾಯಿಗೆ ಇಳಿದಿದೆ. ಅಂದರೆ ಒಟ್ಟು ಚಲಾವಣೆಯಲ್ಲಿದ್ದ 2 ಸಾವಿರ ರೂ. ನೋಟುಗಳ ಪೈಕಿ ಶೇ. 93 ಹಿಂದಿರುಗಿಸಲ್ಪಟ್ಟಿವೆ. ಆ ಪೈಕಿ ಶೇ. 87ರಷ್ಟು ನೋಟುಗಳು ಠೇವಣಿ ಆಗಿದ್ದು, ಇನ್ನು ಶೇ. 13ರಷ್ಟನ್ನು ಬೇರೆ ಮುಖಬೆಲೆಯ ನೋಟುಗಳಿಗೆ ಬದಲಿಸಿಕೊಳ್ಳಲಾಗಿದೆ.
Withdrawal of ₹2000 Denomination Banknotes – Statushttps://t.co/np67aLalVd
— ReserveBankOfIndia (@RBI)September 1, 2023

ಪೊಲೀಸ್ ‘ಪೋಸ್ಟ್​’ಗಳಲ್ಲೂ ಕ್ರಿಯೇಟಿವಿಟಿ; ಇಂಪ್ರೆಸ್​ ಆಗುವಂತೆ ‘ಎಕ್ಸ್​’ಪ್ರೆಸ್ ಮಾಡುತ್ತಿರುವ ಪೊಲೀಸರು!

ನೆಲದಡಿಯಲ್ಲಿದೆ ಎರಡಂತಸ್ತಿನ ಮನೆ; ಇದರ ನಿರ್ಮಾಣಕ್ಕೆ ಈತ ತೆಗೆದುಕೊಂಡ ಸಮಯ 12 ವರ್ಷ

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:eight + 16 =
Remember me
