ಮುಂಬೈ:ಯೆಸ್ ಬ್ಯಾಂಕ್ ಷೇರುಗಳು ಈ ದಿನಗಳಲ್ಲಿ ಹೆಚ್ಚು ಗಮನಸೆಳೆಯುತ್ತಿವೆ. ಈ ಕಂಪನಿಯ ಷೇರುಗಳು ಕಳೆದ ಹಲವಾರು ಸೆಷನ್‌ಗಳಿಂದ ಭಾರಿ ಏರಿಳಿತಗಳನ್ನು ಕಂಡಿವೆ. ಸೋಮವಾರ ಈ ಷೇರು ಬೆಲೆ ಶೇ. 2ರಷ್ಟು ಕುಸಿದು 24.80 ರೂಪಾಯಿ ತಲುಪಿದೆ.
ಪ್ರಸ್ತುತ ಈ ಸ್ಟಾಕ್ ತನ್ನ 52 ವಾರದ ಗರಿಷ್ಠ ಬೆಲೆಯಾದ 32.81 ರಿಂದ 24% ನಷ್ಟು ಕಡಿಮೆಯಾಗಿದೆ. ಆದರೂ, ಈ ಸ್ಟಾಕ್ ಬೆಲೆ ವರ್ಷದ ಆರಂಭದಿಂದ ಇದುವರೆಗೆ 9.71% ಹೆಚ್ಚಾಗಿದೆ.
ಅಚ್ಚರಿಯ ಸಂಗತಿಯೆಂದರೆ, 2018 ರಲ್ಲಿ ಯೆಸ್ ಬ್ಯಾಂಕ್ ಷೇರು ಬೆಲೆ 380 ರೂಪಾಯಿ ಇತ್ತು. ಈ ಷೇರಿನ ಸಾರ್ವಕಾಲಿಕ ಗರಿಷ್ಠ ಬೆಲೆ 404 ರೂಪಾಯಿ ಹಾಗೂ ಕನಿಷ್ಠ ಬೆಲೆ 5.65 ರೂಪಾಯಿ.
ಯೆಸ್ ಬ್ಯಾಂಕ್ ಷೇರುಗಳು ರೂ 29 ನಲ್ಲಿ ಬ್ರೇಕೌಟ್ ಆಗುವ ಅಗತ್ಯವಿದೆ ಎಂದು ಹೇಳಿದರು. ಇದಲ್ಲದೆ, ಈ ಷೇರು ರೂ 30 ದಾಟಿದರೆ, ಮತ್ತೊಮ್ಮೆ ಅದರಲ್ಲಿ ಹೊಸ ಏರಿಕೆಯನ್ನು ಕಾಣಬಹುದು. ಈ ಸ್ಟಾಕ್‌ನ ಚಾರ್ಟ್‌ನಲ್ಲಿ ರೂಪುಗೊಂಡ ಮಾದರಿಯ ಪ್ರಕಾರ, ಮುಂದಿನ ಐದು ವರ್ಷಗಳಲ್ಲಿ ಈ ಸ್ಟಾಕ್ 100 ರೂಪಾಯಿ ಹೋಗಬಹುದು ಎಂದು ಮಾರುಕಟ್ಟೆ ಪರಿಣಿತ ಪ್ರಕಾಶ್ ಗಾಬಾ ಹೇಳಿದ್ದಾರೆ. ಪ್ರಕಾಶ್​ ಗಾಬಾ ಅವರು ಸೆಬಿ (SEBI) ನೋಂದಾಯಿತ ಸಂಶೋಧನಾ ವಿಶ್ಲೇಷಕರಾಗಿದ್ದಾರೆ.
ಕಳೆದ ಕೆಲವು ತಿಂಗಳುಗಳಲ್ಲಿ ಯೆಸ್ ಬ್ಯಾಂಕ್ ಷೇರುಗಳು ಉತ್ತಮ ಏರಿಕೆ ಕಂಡಿವೆ. ಕಳೆದ 6 ತಿಂಗಳಲ್ಲಿ ಯೆಸ್ ಬ್ಯಾಂಕ್ ಷೇರುಗಳ ಬೆಲೆ 36.91% ಕ್ಕಿಂತ ಹೆಚ್ಚು ಏರಿಕೆಯಾಗಿದೆ. ಈ ಷೇರು ಒಂದು ವರ್ಷದಲ್ಲಿ 47.04% ಏರಿಕೆಯಾಗಿದೆ. ಡಿಸೆಂಬರ್ 2023ಕ್ಕೆ ಕೊನೆಗೊಳ್ಳುವ ತ್ರೈಮಾಸಿಕದಲ್ಲಿ ಯೆಸ್ ಬ್ಯಾಂಕ್ ರೂ. 231 ಕೋಟಿ ನಿವ್ವಳ ಲಾಭ ಗಳಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಯೆಸ್ ಬ್ಯಾಂಕ್ 51 ಕೋಟಿ ರೂ. ಲಾಭ ಗಳಿಸಿತ್ತು.

ಶಾಸಕರು/ ಸಂಸದರ ವಿರುದ್ಧ ಕಾನೂನು ಕ್ರಮಕ್ಕೆ ವಿನಾಯಿತಿ ರದ್ದು: ಸುಪ್ರೀಂ ಕೋರ್ಟ್​ನ ಐತಿಹಾಸಿಕ ತೀರ್ಪಿನ ಮಹತ್ವವೇನು? ಇಲ್ಲಿದೆ ವಿವರವಾದ ವಿಶ್ಲೇಷಣೆ…

ಸತತ 4ನೇ ದಿನ ಗೂಳಿಯ ಗುಟುರು: ಸಾರ್ವಕಾಲಿಕ ಗರಿಷ್ಠ ಮಟ್ಟ ಮುಟ್ಟಿ ದಾಖಲೆ ಬರೆದ ಷೇರು ಸೂಚ್ಯಂಕ

ಸೋಮವಾರ ಒಂದೇ ದಿನದಲ್ಲಿ 20% ಏರಿಕೆ ಕಂಡ ಸ್ಟಾಕ್‌ಗಳು: ಟ್ರೇಡಿಂಗ್​ ಸೆಟಪ್ ನೋಡಿದರೆ ಮಂಗಳವಾರವೂ ಇವುಗಳಿಗೆ ಬೇಡಿಕೆ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:eight + 20 =
Remember me
