ಮುಂಬೈ:ಗುಜರಾತ್ ಸ್ಟೇಟ್ ಫೈನಾನ್ಶಿಯಲ್ ಸರ್ವೀಸಸ್​ ಲಿಮಿಟೆಡ್ (Gujarat State Financial Services Ltd.) ಗುಜರಾತ್​ ಸರ್ಕಾರದ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾಗಿದೆ. ಇದನ್ನು ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಯಾಗಿ ಆರ್‌ಬಿಐನಲ್ಲಿ ನೋಂದಾಯಿಸಲಾಗಿದೆ. ಕಳೆದ 3 ವರ್ಷಗಳಲ್ಲಿ ಈ ಷೇರು ಹೂಡಿಕೆದಾರರಿಗೆ ಮಲ್ಟಿಬ್ಯಾಗರ್ ರಿಟರ್ನ್ಸ್ ನೀಡಿದೆ.
ಷೇರು ಮಾರುಕಟ್ಟೆಯಲ್ಲಿ ಅನೇಕ ಪೆನ್ನಿ ಸ್ಟಾಕ್‌ಗಳಿವೆ. ಅಂದರೆ, ಕಡಿಮೆ ಬೆಲೆಯ ಷೇರುಗಳು. ಇಂತಹ ಒಂದು ಪೆನ್ನಿ ಸ್ಟಾಕ್ ಗುಜರಾತ್ ಸ್ಟೇಟ್ ಫೈನಾನ್ಶಿಯಲ್ ಸರ್ವೀಸಸ್​ ಲಿಮಿಟೆಡ್ ಆಗಿದೆ. ಕಳೆದ ಮೂರು ವರ್ಷಗಳಲ್ಲಿ ಹೂಡಿಕೆದಾರರಿಗೆ ಈ ಷೇರು ಮಲ್ಟಿಬ್ಯಾಗರ್ ರಿಟರ್ನ್ಸ್ ನೀಡಿದೆ. ಫೆಬ್ರವರಿ 2021 ರಲ್ಲಿ ಈ ಷೇರಿನ ಬೆಲೆ 3 ರೂಪಾಯಿ ಆಗಿತ್ತು, ಅದು ಈಗ 40 ರೂಪಾಯಿಯ ಮಟ್ಟ ತಲುಪಿದೆ. 3 ರೂಪಾಯಿ ಬೆಲೆ ಇದ್ದಾಗ ಹೂಡಿಕೆ ಮಾಡಿದವರು ಶೇ. 1232ರಷ್ಟು ಲಾಭ ಪಡೆದಿದ್ದಾರೆ. ಅಂದರೆ, ಈ ಷೇರಿನಲ್ಲಿ ಆಗ 1 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದರೆ ಈಗ ಅದು 13.32 ಲಕ್ಷ ರೂಪಾಯಿಗೆ ಆಗುತ್ತಿತ್ತು.
ಗುಜರಾಟ್ ಸ್ಟೇಟ್ ಫೈನಾನ್ಶಿಯಲ್ ಸರ್ವೀಸಸ್ ಲಿಮಿಟೆಡ್ (GSFS) ಗುಜರಾತ್​ ಸರ್ಕಾರದ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾಗಿದೆ. ಇದು ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಯಾಗಿ ಆರ್‌ಬಿಐನಲ್ಲಿ ನೋಂದಾಯಿಸಲ್ಪಟ್ಟಿದೆ. ರಾಜ್ಯದ ವಿವಿಧ ಸಂಸ್ಥೆಗಳು ಮತ್ತು ಸಾರ್ವಜನಿಕ ಉದ್ಯಮಗಳ ಹೆಚ್ಚುವರಿ ಹಣವನ್ನು ನಿರ್ವಹಿಸುವ ಅಧಿಕಾರವನ್ನು ಇದು ಹೊಂದಿದೆ. ಈ ಕಂಪನಿಯು 1960 ರಲ್ಲಿ ಸ್ಥಾಪನೆಯಾಯಿತು. ಗುಜರಾತ್​ನ ಗಾಂಧಿ ನಗರದಲ್ಲಿ ಪ್ರಧಾನ ಕಚೇರಿ ಇದೆ.
ವಾರದ ಎರಡನೇ ವಹಿವಾಟಿನ ದಿನವಾದ ಮಂಗಳವಾರ, ಫೆ. 6ರಂದು ಈ ಷೇರಿನ ಬೆಲೆ 52 ವಾರದ ಗರಿಷ್ಠ ಮಟ್ಟವಾದ 39.96 ರೂಪಾಯಿ ತಲುಪಿತು. ಏಪ್ರಿಲ್ 5, 2023 ರಂದು, ಈ ಷೇರು 52 ವಾರದ ಕನಿಷ್ಠ ಬೆಲೆ 5.80 ರೂಪಾಯಿಗೆ ತಲುಪಿತ್ತು. ಈ ಷೇರು ಡಿಸೆಂಬರ್ 2023 ರಲ್ಲಿ ಅಂದಾಜು 96 ಪ್ರತಿಶತದಷ್ಟು ಮತ್ತು ನವೆಂಬರ್‌ನಲ್ಲಿ 64 ಪ್ರತಿಶತದಷ್ಟು ಹೆಚ್ಚಾಗಿದೆ.
ಐಸಿಐಸಿಐ ಡೈರೆಕ್ಟ್ ಬ್ರೋಕರೇಜ್​ ಸಂಸ್ಥೆಯ ಪ್ರಕಾರ, ಈ ಸರ್ಕಾರಿ ಕಂಪನಿಯ ಷೇರುಗಳು ಬಲವಾದ ಏರಿಕೆ ಕಂಡಿವೆ. ಇದು ಪ್ರತಿ ಷೇರಿಗೆ ಗಳಿಕೆಯಲ್ಲಿ ಬೆಳವಣಿಗೆಯೊಂದಿಗೆ ಆಸ್ತಿ ನಿರ್ವಹಣೆಯಲ್ಲಿ ಸಮರ್ಥವಾಗಿದೆ. ಗಳಿಕೆಗೆ ಹೋಲಿಸಿದರೆ ಹೆಚ್ಚಿನ ಬಡ್ಡಿ ಪಾವತಿ, ನಗದು ಹರಿವು ಇತ್ಯಾದಿಗಳಿಂದ ಸಮಸ್ಯೆಗಳು ಕೂಡ ಈ ಕಂಪನಿಯಲ್ಲಿವೆ ಎಂದು ಬ್ರೋಕರೇಜ್​ ಹೇಳಿದೆ.

ಭರ್ಜರಿ ಪ್ರೀಮಿಯಂನೊಂದಿಗೆ ಮಾರುಕಟ್ಟೆಗೆ ಪ್ರವೇಶ: ಮೊದಲ ದಿನವೇ 175% ಲಾಭ; ಹೂಡಿಕೆದಾರರಿಗೆ ಒಂದೇ ದಿನದಲ್ಲಿ ಹಣದ ಸುರಿಮಳೆ

ಗೋಬಿ ಮಂಚೂರಿ ನಿಷೇಧ: ಕಾರಣ ತಿಳಿದರೆ ನೀವು ಶಾಕ್​ ಆಗ್ತೀರಾ… ಡಿಟರ್ಜಂಟ್​ ಬಳಸ್ತಾರೆ ಎಂದರೆ ತಿನ್ನುವುದನ್ನೇ ಬಿಡ್ತೀರಾ?

ಮುಂದಿನ ದಿನಗಳಲ್ಲಿ ಏರಲಿದೆ ಫಾರ್ಮಾ ಷೇರು ಬೆಲೆ : ಕಂಪನಿ ಲಾಭಾಂಶ ಹೆಚ್ಚುತ್ತಿದ್ದಂತೆಯೇ ಬ್ರೋಕರೇಜ್​ ಸಂಸ್ಥೆಗಳ ಭವಿಷ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + sixteen =
Remember me
