ಮುಂಬೈ:ಬ್ಯಾಂಕಿಂಗೇತರ ಹಣಕಾಸು ಕಂಪನಿ (NBFC), ಕ್ಯಾಪ್ರಿ ಗ್ಲೋಬಲ್ ಕ್ಯಾಪಿಟಲ್ ಲಿಮಿಟೆಡ್​ (Capri Global Capital Ltd) ಮಂಗಳವಾರ ಎಕ್ಸ್-ಸ್ಪ್ಲಿಟ್ ಮತ್ತು ಎಕ್ಸ್-ಬೋನಸ್ ಆಗಿ ಮಾರ್ಪಟ್ಟಿತು. ಅಲ್ಲದೆ, ಈ ಷೇರು 20% ಏರಿಕೆ ಕಂಡು ಅಪ್ಪರ್ ಸರ್ಕ್ಯೂಟ್‌ ಹಿಟ್​ ಆಯಿತು.
ಬೋನಸ್​ ಷೇರು, ಸ್ಟಾಕ್​ ಸ್ಪ್ಲಿಟ್​ನಿಂದ ಸಾಕಷ್ಟು ಲಾಭ ಪಡೆದಿದ್ದ ಹೂಡಿಕೆದಾರರು ಈಗ ಅಪ್ಪರ್​ ಸರ್ಕ್ಯೂಟ್​ ಹಿಟ್​ನಿಂದ ಮತ್ತಷ್ಟು ಶ್ರೀಮಂತರಾದರು.
ಒಂದು ದಿನದ ಹಿಂದೆ, ಈ ಷೇರಿನ ಬೆಲೆ ರೂ 980 ಕ್ಕಿಂತ ಸ್ವಲ್ಪ ಹೆಚ್ಚು ಇತ್ತು. ಈಗ ಅದು 300 ರೂಪಾಯಿಗಿಂತ ಅಗ್ಗವಾಗಿದೆ. ಏಕೆಂದರೆ, ಷೇರು ವಿಭಜನೆಯೇ ಇದಕ್ಕೆ ಕಾರಣ.
ಮಂಗಳವಾರ ಈ ಷೇರಿನ ಬೆಲೆಯು ರೂ 48.20 ಅಥವಾ 19.98% ರಷ್ಟು ಏರಿಕೆಯಾಗಿ ರೂ 289.40 ಕ್ಕೆ ತಲುಪಿತು. ಸ್ಟಾಕ್ ಸ್ಪ್ಲಿಟ್ ಮತ್ತು ಬೋನಸ್ ವಿಷಯಕ್ಕೆ ಸರಿಹೊಂದಿಸಿದ ನಂತರ ಈ ಷೇರಿನ ಬೆಲೆಯು ಹೊಸ 52-ವಾರಗಳ ಗರಿಷ್ಠ ಮಟ್ಟ ಮುಟ್ಟಿತು.
ಈ ಸ್ಟಾಕ್​ ಮಾರ್ಚ್ 5 ರಂದು ಎಕ್ಸ್-ಸ್ಪ್ಲಿಟ್ ಮತ್ತು ಎಕ್ಸ್-ಬೋನಸ್ ಆಗಿ ಮಾರ್ಪಟ್ಟಿತು. ಹಿಂದಿನ ದಿನದಂದು, ಈ ಸ್ಟಾಕ್ ಬೆಲೆಯು 984.9 ರೂ ಇತ್ತು.
ಈ ಕಂಪನಿಯ ಈಕ್ವಿಟಿ ಷೇರುಗಳು ರೂ 2 ಮುಖಬೆಲೆಯನ್ನು ಹೊಂದಿದ್ದು, ಮಾರ್ಚ್ 5 ರಿಂದ ರೂ 1 ಮುಖಬೆಲೆಗೆ ವಿಭಜಿಸಲಾಗಿದೆ. ಸ್ಟಾಕ್ ವಿಭಜನೆಯ ಅನುಪಾತವು 1:2 ಆಗಿದೆ, ಅಂದರೆ ಅಸ್ತಿತ್ವದಲ್ಲಿರುವ 1 ಷೇರನ್ನು 2 ಆಗಿ ವಿಂಗಡಿಸಲಾಗಿದೆ. ಇದಲ್ಲದೆ, 1:1 ರ ಅನುಪಾತದಲ್ಲಿ ಬೋನಸ್ ಷೇರುಗಳನ್ನು ಕಂಪನಿಯು ಮುಂದೆ ವಿತರಿಸಿದೆ. ಷೇರುದಾರರು ಹೊಂದಿರುವ ಸಂಪೂರ್ಣ ಪಾವತಿಸಿದ ಈಕ್ವಿಟಿ ಷೇರಿಗೆ ಒಂದು ಬೋನಸ್ ಷೇರು ನೀಡಲಾಗುತ್ತದೆ.
ಕಂಪನಿಯು ಕೊನೆಯದಾಗಿ 2016ರ ನವೆಂಬರ್‌ನಲ್ಲಿ 10 ರೂ. ಮುಖಬೆಲೆಯ ಷೇರನ್ನು 2 ರೂ. ಮುಖಬೆಲೆಗೆ ವಿಭಜಿಸಿತ್ತು.

ಟಾಟಾ ಷೇರು ಬೆಲೆ ಕುಸಿತ ಸಾಧ್ಯತೆ: ಮಾರಾಟ ಮಾಡಲು ಬ್ರೋಕರೇಜ್​ ಸಂಸ್ಥೆಯ ಸಲಹೆ
ಸಾರ್ವಕಾಲಿನ ಗರಿಷ್ಠ ಮಟ್ಟ ಮುಟ್ಟಿದ ದಾಖಲೆ ಬರೆದ ಪಿಎಸ್​ಯು ಸ್ಟಾಕ್​: ಷೇರು ಖರೀದಿಗೆ ವಿಶ್ಲೇಷಕರ ಸಲಹೆ
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fourteen + sixteen =
Remember me
