ಮುಂಬೈ:ಸ್ಪೆಕ್ಟ್ರಮ್ ಎಲೆಕ್ಟ್ರಿಕಲ್ ಇಂಡಸ್ಟ್ರೀಸ್​ ಲಿಮಿಟೆಡ್​ (Spectrum Electrical Industries Ltd.) ಷೇರು ಸೋಮವಾರ 10% ಅಪ್ಪರ್ ಸರ್ಕ್ಯೂಟ್ (ಒಂದು ದಿನದಲ್ಲಿ ಷೇರು ಬೆಲೆ ಗರಿಷ್ಠ ಹೆಚ್ಚಳವಾಗುವ ಮಿತಿ) ಹಿಟ್​ ಆಗಿದೆ.
ಕಳೆದೊಂದು ವರ್ಷದಲ್ಲಿ 873% ಲಾಭ ನೀಡಿರುವ ಈ ಕಂಪನಿಯ ಷೇರು, ಹೊಸ ಸುದ್ದಿ ಬಂದ ತಕ್ಷಣ ಸೋಮವಾರ ಈ ಷೇರಿನ ಬೆಲೆ ಶೇಕಡಾ 10ರಷ್ಟು ಏರಿಕೆ ಕಂಡು, 1697.95 ರೂಪಾಯಿ ತಲುಪಿದೆ. ಒಂದು ಶುಭ ಸುದ್ದಿಯೇ ಈ ಕಾರಣ ಎಂದು ಹೇಳಲಾಗಿದೆ.
ಅಂಗ ಸಂಸ್ಥೆಯೊಂದನ್ನು ಸ್ಥಾಪಿಸುವುದಾಗಿ ಈ ಕಂಪನಿಯು ಫೆಬ್ರುವರಿ 4 ರಂದು ಷೇರು ಮಾರುಕಟ್ಟೆ ವಿನಿಮಯ ಕೇಂದ್ರಕ್ಕೆ ಮಾಹಿತಿ ನೀಡಿದೆ. ಈ ಅಂಗ ಸಂಸ್ಥೆಯು ವೈದ್ಯಕೀಯ ಸಾಧನಗಳ ತಯಾರಿಕೆಯಲ್ಲಿ ತೊಡಗಿಸಿಕೊಳ್ಳಲಿದೆ.ಈ ಅಂಗಸಂಸ್ಥೆಯ ಪ್ರಾಥಮಿಕ ಕೆಲಸವೆಂದರೆ ವೈದ್ಯಕೀಯ ಸಾಧನಗಳನ್ನು ಅಭಿವೃದ್ಧಿಪಡಿಸುವುದು, ವಿನ್ಯಾಸಗೊಳಿಸುವುದು ಎಂದು. ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಸ್ತುತ, ಸ್ಪೆಕ್ಟ್ರಮ್ ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ಕಂಪನಿಯು ಎಲೆಕ್ಟ್ರಿಕಲ್, ಆಟೋಮೊಬೈಲ್ ಮತ್ತು ನೀರಾವರಿ ಘಟಕಗಳನ್ನು ವಿನ್ಯಾಸಗೊಳಿಸುತ್ತದೆ ಮತ್ತು ತಯಾರಿಸುತ್ತದೆ. ಈ ವ್ಯವಹಾರದಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳೆದಿದೆ.
ಈ ವರ್ಷ ಇಲ್ಲಿಯವರೆಗೆ ಕಂಪನಿಯ ಷೇರಿನ ಬೆಲೆ ಶೇಕಡಾ 18 ರಷ್ಟು ಏರಿಕೆಯಾಗಿದೆ. ಕಳೆದ ತ್ರೈಮಾಸಿಕದಲ್ಲಿ ಪ್ರವರ್ತಕರ ಷೇರುಗಳ ಪ್ರಮಾಣ ಶೇಕಡಾ 3.43 ರಿಂದ 74.88 ರಷ್ಟು ಹೆಚ್ಚಾಗಿದೆ. ಪ್ರಸ್ತುತ ಹಣಕಾಸು ವರ್ಷದ ಮೊದಲ 6 ತಿಂಗಳ ಅವಧಿಯಲ್ಲಿ ಕಂಪನಿಯ ಆದಾಯ 13.53 ಕೋಟಿ ರೂ. ಇದೆ. ಅದೇ ಅವಧಿಯಲ್ಲಿ ನಿವ್ವಳ ಲಾಭವು 7.07 ಕೋಟಿ ರೂ. ಇದೆ.
ಕಂಪನಿಯ ಷೇರು ಬೆಲೆಗಳು ಕಳೆದ 6 ತಿಂಗಳಲ್ಲಿ 72.4 ಪ್ರತಿಶತದಷ್ಟು ಏರಿಕೆ ಕಂಡಿವೆ. ಒಂದು ತಿಂಗಳಲ್ಲಿ ಈ ಷೇರು ಬೆಲೆ ಶೇ.30ರಷ್ಟು ಹೆಚ್ಚಳವಾಗಿದೆ.

Paytm ಷೇರು 3 ದಿನಗಳಲ್ಲಿ 41% ಕುಸಿತ: ಮುಖೇಶ ಅಂಬಾನಿ ಕಣ್ಣುಬಿದ್ದ ತಕ್ಷಣವೇ Jio ಫೈನಾನ್ಷಿಯಲ್ ಷೇರು ಒಂದೇ ದಿನದಲ್ಲಿ 14% ಏರಿಕೆ, ಏನಿದು ಲೆಕ್ಕಾಚಾರ?

ಕೇವಲ 47 ದಿನಗಳಲ್ಲಿ 32 ರಿಂದ 204 ರೂಪಾಯಿಗೆ ಏರಿಕೆ: 650% ಲಾಭ ತಂದುಕೊಟ್ಟ ಸರ್ಕಾರಿ ಸಂಸ್ಥೆ ಷೇರು; ಸೋಮವಾರ ಸಾರ್ವಕಾಲಿಕ ಗರಿಷ್ಠ ಬೆಲೆಗೆ ಮಾರಾಟ

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:five × three =
Remember me
